Puneeth Rajkumar: ಅಪ್ಪು ಬರ್ತಡೇ ಮಗ ಯುವರಾಜ್ ಕುಮಾರ್ ನೀಡಲು ಹೊರಟಿರುವ ಬರ್ತಡೇ ಗಿಫ್ಟ್ ಏನು ಗೊತ್ತಾ?

Yuva Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್(Power Star Puneeth Rajkumar) ಅವರ ಬರ್ತಡೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇದೇ ಮಾರ್ಚ್ 17 ಎಂದು ನಡೆಯಲಿದ್ದು ಅಭಿಮಾನಿಗಳಿಗೆ ಈ ಬಾರಿ ನಿಜಕ್ಕೂ ಕೂಡ ಬೇಸರದ ಜನ್ಮ ದಿನಾಚರಣೆ ಆಗಿರಲಿದೆ. ಆದರೆ ಆ ಬೇಸರದಲ್ಲೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಹೋದರನ ಮಗನಾಗಿರುವ ಯುವರಾಜ್ ಕುಮಾರ್(Yuva Rajkumar) ರವರು ಸ್ವಲ್ಪಮಟ್ಟಿಗೆ ಸಂತೋಷವನ್ನು ನೀಡಲು ಸಜ್ಜಾಗಿ ನಿಂತಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ.

ಪುನೀತ್ ರಾಜಕುಮಾರ್ ಅವರ ವಾರಿಸುದಾರ ಎಂಬುದಾಗಿ ಯುವರಾಜ್ ಕುಮಾರ್ ಅವರನ್ನು ಪ್ರತಿಬಿಂಬಿಸಲಾಗುತ್ತಿದ್ದು ಅವರ ಲಾಂಚಿಂಗ್ ನ ತಯಾರಿ ತೆರೆಮರೆಯಲ್ಲಿ ನಡೆಯುತ್ತಿದೆ. ಹೀಗಾಗಿ ಇದೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಬರ್ತಡೆಯ ದಿನದಂದು ಒಂದು ಸಂತೋಷದ ಸುದ್ದಿ ಸಿಗಬಹುದು ಎಂಬುದಾಗಿ ಮೂಲಗಳು ತಿಳಿಸುತ್ತಿವೆ.

ಅಪ್ಪು ಅವರ ಮರಣ ನಂತರ ಅಪ್ಪು ಅಭಿಮಾನಿಗಳಿಗೆ ಯುವರಾಜ್ ಕುಮಾರ್ ಅವರ ಸಿನಿಮಾದ ಬಗ್ಗೆ ಸಾಕಷ್ಟು ಚಿಂತೆಯಾಗಿಬಿಟ್ಟಿದೆ ಎಂದು ಹೇಳಬಹುದಾಗಿದೆ. ಈಗಾಗಲೇ ಹೊಂಬಾಳೆ ಫಿಲಂಸ್(Hombale Films) ನಿರ್ಮಾಣದಲ್ಲಿ ಹಾಗೂ ಸಂತೋಷ ಆನಂದ ರಾಮ್(Santosh Ananddram) ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರಲಿದೆ ಎಂಬುದಾಗಿ ಘೋಷಣೆ ಕೂಡ ನಡೆದಿದೆ. ಅಪ್ಪುಗಾಗಿ(Appu) ಬರೆದಿರುವಂತಹ ಕಥೆಯನ್ನೇ ಯುವರಾಜ್ ಕುಮಾರ್ ಅವರಿಗಾಗಿ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ ಎಂಬುದು ಕೂಡ ಎಲ್ಲರಿಗೂ ಗೊತ್ತಿರುವ ಸತ್ಯವಾಗಿದೆ.

ಹೀಗಾಗಿ ಈಗ ಕೇಳಿ ಬರುತ್ತಿರುವ ಲೇಟೆಸ್ಟ್ ಸುದ್ದಿಯ ಪ್ರಕಾರ ಮಾರ್ಚ್ 17 ರಂದು ಅಪ್ಪು ಅವರ ಜನ್ಮದಿನದ ವಿಶೇಷವಾಗಿ ಯುವರಾಜ್ ಕುಮಾರ್ ಅವರ ಮೊದಲ ಸಿನಿಮಾದ ಟೀಸರ್ ಅಥವಾ ಟೈಟಲ್ ಅಧಿಕೃತವಾಗಿ ಹೊರಬಂದರೂ ಕೂಡ ಆಶ್ಚರ್ಯ ಪಡಬೇಕಾಗಿಲ್ಲ ಎನ್ನಲಾಗುತ್ತಿದೆ. ಯುವರಾಜ್ ಕುಮಾರ್ ಅವರ ಲಾಂಚಿಂಗ್ ಸಿನಿಮಾದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!