ಸ್ನಾನಕ್ಕೆ ಒಳ್ಳೆಯ ಸಾಬೂನು ಯಾವುದು, ನಿಮಗೆ ಇದು ತಿಳಿದಿರಲಿ

ಕೆಮಿಕಲ್ ಯುಕ್ತ ಸೋಪಿನಿಂದ ನಾವು ಸ್ನಾನ ಮಾಡುತ್ತಿದ್ದೇವೆ, ಅದರಿಂದ ಚರ್ಮ ರೋಗಗಳು ಬರುವ ಸಂಭವವಿರುತ್ತದೆ. ಆರ್ಗಾನಿಕ್ ಸೋಪ್ ಬಳಸುವುದು ಉತ್ತಮ ಹಾಗಾದರೆ ಮನೆಯಲ್ಲಿ ನೈಸರ್ಗಿಕವಾಗಿ ಸಿಗುವ ಸಾಮಗ್ರಿಗಳನ್ನು ಬಳಸಿ ಸೋಪ್ ನಟ್ ತಯಾರಿಸುವುದು ಹೇಗೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಸ್ನಾನಕ್ಕೆ ಸೋಪನ್ನು ಬಳಸುವುದು ಸೂಕ್ತವಲ್ಲ, ಸೋಪಿನಲ್ಲಿ ಕೆಮಿಕಲ್ ಇರುವುದರಿಂದ ಚರ್ಮಕ್ಕೆ ಹಾನಿಕಾರಕ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಹಾಗಾದರೆ ಸ್ನಾನಕ್ಕೆ ಸೋಪ್ ಬದಲಿಗೆ ಸೋಪ್ ನಟ್ ಎಂದರೆ ಶೀಗೆಕಾಯಿ, ಅಂಟುವಾಳಕಾಯಿ ಬಳಸಬೇಕು. ಸೋಪ್ ನಟ್ ತಯಾರಿಸುವ ವಿಧಾನವೆಂದರೆ ಹಳ್ಳಿಯಲ್ಲಿ ವಾಸಿಸುವ ಜನರು ಕೆರೆ ಪ್ರದೇಶಕ್ಕೆ ಹೋದರೆ ಸವಳು ಮಣ್ಣು ಎಂದು ಸಿಗುತ್ತದೆ. ಸವಳು ಮಣ್ಣನ್ನು ಒಂದು ಬೌಲ್ ನಲ್ಲಿ ಹಾಕಿ ಅದಕ್ಕೆ ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲೆಸಿ ಪೇಸ್ಟ್ ರೀತಿಯಲ್ಲಿ ಮಾಡಿಕೊಂಡು ಅದಕ್ಕೆ 4 ಸ್ಪೂನ್ ಕಡಲೆಹಿಟ್ಟನ್ನು ಹಾಕಿ ಮಿಕ್ಸ್ ಮಾಡಬೇಕು ನಂತರ ಅಂಟುವಾಳಕಾಯಿ, ಶೀಗೆಕಾಯಿಯನ್ನು ನೀರಿನಲ್ಲಿ ನೆನೆಸಬೇಕು ನಂತರ ಅದನ್ನು ಹಿಂಡಿ ಅದರ ರಸವನ್ನು ಸೇರಿಸಿ ಪೇಸ್ಟ್ ರೀತಿಯಲ್ಲಿ ಮಾಡಿ ಸ್ನಾನ ಮಾಡುವಾಗ ಬಳಸಬೇಕು ಇದು ಕ್ಲೀನಿಂಗ್ ಏಜೆಂಟ್ ಆಗಿ ಕೆಲಸ ಮಾಡುತ್ತದೆ. ಈ ಪೇಸ್ಟನ್ನು ಮುಖ, ಕೈಕಾಲು, ದೇಹಕ್ಕೆ ಹಚ್ಚಿಕೊಂಡು ಸ್ಕ್ರಬ್ ಮಾಡಿದರೆ ಬಹಳ ಉತ್ತಮ.

ಸ್ನಾನ ಮಾಡುವಾಗ ಕೆಮಿಕಲ್ ಯುಕ್ತ ಸೋಪ್ ಬಳಸುವ ಬದಲು ಇದನ್ನು ಬಳಸಿದರೆ ಚರ್ಮರೋಗಗಳು ಬರುವುದಿಲ್ಲ. ತಲೆ ಸ್ನಾನ ಮಾಡಲು ಅಂಟುವಾಳ ಕಾಯಿಯನ್ನು ನೆನೆಸಿಟ್ಟ ನೊರೆಯ ನೀರನ್ನು ಬಳಸಿದರೆ ಕೂದಲು ಚೆನ್ನಾಗಿ ಬೆಳೆಯುತ್ತದೆ, ನೈಸ್ ಮತ್ತು ಶೈನ್ ಆಗುತ್ತದೆ. ತಲೆ ಕೂದಲಿನಲ್ಲಿರುವ ಎಣ್ಣೆ, ಜಿಡ್ಡು, ಹೊಟ್ಟು ಹೋಗುತ್ತದೆ. ಮನೆಯಲ್ಲಿ ತಯಾರಿಸಿದ ಸೋಪ್ ನಟ್ ಬಳಸಿದರೆ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಮಕ್ಕಳಿಂದ ಹಿಡಿದು ವೃದ್ದರವರೆಗೂ ಇದನ್ನು ಬಳಸಬಹುದು ಯಾವುದೇ ಅಡ್ಡಪರಿಣಾಮ ಆಗುವುದಿಲ್ಲ. ಈ ಪೇಸ್ಟ್ ತಯಾರಿಸಲು ಹಣ ಖರ್ಚು ಮಾಡುವ ಅವಶ್ಯಕತೆ ಇರುವುದಿಲ್ಲ. ಸೋಪ್ ತಯಾರಿಕೆಯ ಮೊದಲು ನೈಸರ್ಗಿಕ ಸಾಮಾಗ್ರಿಗಳಿಂದ ತಯಾರಿಸಿದ ಸೋಪನ್ನು ಸ್ನಾನಕ್ಕೆ ಬಳಸುತ್ತಿದ್ದರು ಅವರಿಗೆ ಚರ್ಮರೋಗಗಳು ಕಡಿಮೆ ಬರುತ್ತಿದ್ದವು. ನೈಸರ್ಗಿಕ ಸಾಮಗ್ರಿಗಳನ್ನು ಬಳಸುವುದು ಚರ್ಮದ ಆರೋಗ್ಯಕ್ಕೆ ಒಳ್ಳೆಯದು ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

Leave A Reply

Your email address will not be published.

error: Content is protected !!