ಒಣ ದ್ರಾಕ್ಷಿಹಣ್ಣನ್ನು ನೇನೆಸಿ ತಿನ್ನುವುದರಿಂದ ಶರೀರಕ್ಕೆ ಏನಾಗುತ್ತೆ ಗೊತ್ತೇ?

ಸಾವಿರಾರು ವರ್ಷಗಳಿಂದಲೂ ಬಳಸಿಕೊಂಡು ಬರುತ್ತಿರುವ ಈ ಒಣ ದ್ರಾಕ್ಷಿ ಎಲ್ಲರಿಗೂ ಗೊತ್ತೇ ಇದೆ. ನಾವು ಬಾದಾಮಿ ಗೋಡಂಬಿಗಳಿಗೆ ಕೊಡುವಷ್ಟು ಪ್ರಾಮುಖ್ಯತೆ ಈ ಒಣ ದ್ರಾಕ್ಷಿಗೆ ಕೊಡುವುದಿಲ್ಲ ಯಾಕೆಂದರೆ ಇದು ಹಗ್ಗದ ಬೆಲೆಯಲ್ಲಿ ಸಿಗುತ್ತದೆ ಎಂದು. ಇಷ್ಟು ಕಡಿಮೆ ಬೆಲೆಗೆ ಸಿಗುವಂತಹ ಈ ಒಣ ದ್ರಾಕ್ಷಿಯೂ ಹಲವಾರು ಪ್ರಯೋಜನಗಳನ್ನು ಹೊಂದಿದೆ ಅದರಲ್ಲೂ ನೀರಿನಲ್ಲಿ ನೆನೆಸಿ ಇಟ್ಟ ಒಣ ದ್ರಾಕ್ಷಿಯನ್ನು ತಿನ್ನುವುದರಿಂದ ನಮ್ಮ ದೇಹದಲ್ಲಿ ಒಳ್ಳೆಯ ಆರೋಗ್ಯವನ್ನು ಪಡೆಯಬಹುದು.

ಸುಮಾರು 8 ರಿಂದ10 ಒಣ ದ್ರಾಕ್ಷಿಯನ್ನು ತೆಗೆದುಕೊಂಡು ರಾತ್ರಿ ಇಡೀ ಒಂದು ಲೋಟ ತಣ್ಣೀರಿನಲ್ಲಿ ನೆನೆಸಿಟ್ಟು ಮರುದಿನ ಬೆಳ್ಳಿಗೆ ಖಾಲಿ ಹೊಟ್ಟೆಯಲ್ಲಿ ಈ ನೆನೆಸಿದ ಒಣ ದ್ರಾಕ್ಷಿಯನ್ನು ಮತ್ತು ನೀರನ್ನು ಕುಡಿಯುವುದರಿಂದ ಉತ್ತಮವಾದ ಪ್ರಯೋಜನಗಳನ್ನು ಪಡೆಯಬಹುದು ಅವು ಯಾವ ಪ್ರಯೋಜನಗಳು ಎಂದರೆ

ಕಣ್ಣಿನ ದೃಷ್ಟಿ ಕಾಪಾಡುತ್ತದೆ. ಸಾಮಾನ್ಯವಾಗಿ ಕಣ್ಣಿ ನ ಬಗ್ಗೆ ನಾವು ಯಾರು ಅಷ್ಟು ಕಾಳಜಿ ವಹಿಸುವುದಿಲ್ಲ ಆದರೆ ವಯಸ್ಸಗೆ ತಕ್ಕ ಹಾಗೆ ಕಣ್ಣಿನ ದೃಷಯೂ ಕೂಡ ಕಡಿಮೆ ಆಗುತ್ತ ಹೋಗುತ್ತದೆ. ಹಾಗೂ ದೃಷ್ಟಿ ದೋಷವು ಬರಬಹುದು. ಆದರೆ ಈ ಒಣ ದ್ರಾಕ್ಷಿಯನ್ನು ತಿನ್ನುವುದರಿಂದ ಇದರಲ್ಲಿರುವ ಆಂಟಿ- ಆಕ್ಸಿಡೆಂಟ್ ಗುಣಗಳು ಅಷ್ಟು ಬೇಗ ನಮ್ಮದೃಷ್ಟಿ ಹಾಳಾಗದಂತೆ ನೋಡಿಕೊಳ್ಳುತ್ತದೆ.

ಒಣದ್ರಾಕ್ಷಿಯು ಹೃದಯದ ತೊಂದರೆಗಳಿಂದ ರಕ್ಷಿಸುತ್ತದೆ. ಹೇಗೆಂದರೆ ಒಣದ್ರಾಕ್ಷಿ ಯಲ್ಲಿ ಉತ್ತಮವಾದ ಕರಗುವಂತಹ ನಾರಿನ ಅಂಶವನ್ನು ಹೊಂದಿದೆ. ಹಾಗೂ ಇತರೆ ಪೌಷ್ಟಿಕ ಅಂಶಗಳನ್ನು ಹೊಂದಿದೆ ಮತ್ತು ಈ ಪೌಷ್ಟಿಕ ಅಂಶಗಳು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಗಳು ಸಂಗ್ರಹ ವಾಗದಂತೆ ತಡೆದು. ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ನೆರವಾಗುತ್ತದೆ. ಇದರ ಮೂಲಕ ಹೃದಯಕ್ಕೆ ಸಂಬಂಧಪಟ್ಟ ತೊಂದರೆಯನ್ನು ತಡೆಯಬಹುದು.

ಮೂತ್ರಪಿಂಡದಲ್ಲಿರುವ ಕಲ್ಮಶಗಳನ್ನು ನಿವಾರಿಸಲು ಈ ನೆನೆಸಿಟ್ಟ ಒಣದ್ರಾಕ್ಷಿ ಮತ್ತು ಇದರ ನೀರು ಸಹಾಯ ಮಾಡುತ್ತದೆ. ಮೂತ್ರಪಿಂಡ ದಲ್ಲಿ ಉಂಟಾಗುವ ಕಲ್ಲು.ಸೋಂಕು ಮತ್ತು ನೋವು ಮೊದಲಾದ ತೊಂದರೆಗಳಿಂದ ಇದು ರಕ್ಷಿಸುತ್ತದೆ.

ಮತ್ತು ಒಣದ್ರಾಕ್ಷಿ ಇಂದ ಇನ್ನೊಂದು ಉತ್ತಮ ಪ್ರಯೋಜನವನ್ನು ಪಡೆಯಬಹುದು ಅದುವೇ ಮಲಬದ್ಧತೆಯನ್ನು ಹೋಗಲಾಡಿಸುತ್ತದೆ. ಹೌದು ಸರಿಯಾದ ಮಲವಿಸರ್ಜನೆ ಆಗುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಸಾಮಾನ್ಯವಾಗಿ ನಾರಿನ ಅಂಶವನ್ನು ತಿಂದರೆ ಸರಿಯಾದ ಜೀರ್ಣ ಆಗುತ್ತದೆ ಎಂದು ನಮಿಗೆಲ್ಲ ಗೊತ್ತೇ ಇದೆ. ಈ ಒಣದ್ರಾಕ್ಷಿ ಯಲ್ಲಿ ನಾರಿನ ಅಂಶ ಇರುವುದರಿಂದ ಮಲಬದ್ದತೆ ಕೂಡ ನಿವಾರಣೆ ಆಗುತ್ತದೆ. ಇನ್ನು ಕರುಳು ಕ್ಯಾನ್ಸರ್ ಗೆ ಕಾರಣ ವಾದ ವಿಷಕಾರಿ ಪಿತ್ತರಸ ದ್ರವಗಳನ್ನು ಕಡಿಮೆಮಾಡುತ್ತದೆ. ಇನ್ನು ಹತ್ತು ಹಲವಾರು ರೋಗ ಗಳಿಗೆ ಈ ಒಣದ್ರಾಕ್ಷಿಯು ಒಂದು ಉತ್ತಮ ಮನೆ ಮದ್ದು ಆಗಿದೆ.

Leave a Comment

error: Content is protected !!