ಒಂದು ವಾರದಲ್ಲಿ ನಿಮ್ಮ ತಲೆಕೂದಲು ಉದುರುವ ಸಮಸ್ಯೆಯನ್ನು ನಿವಾರಿಸುತ್ತೆ ಈ ಮನೆಮದ್ದು

ಈಗಿನ ದಿನಗಳಲ್ಲಿ ತಲೆಕೂದಲು ಉದುರುವುದು ಹೆಚ್ಚಾಗಿ ಸರ್ವೇ ಸಾಮಾನ್ಯ ಆಗಿದೆ. ಮೊದಲು ಹೆಣ್ಣು ಮಕ್ಕಳಿಗೆ ಕೂದಲು ಬಹಳ ಚೆನ್ನಾಗಿ ಇರುತ್ತಿತ್ತು. ಏಕೆಂದರೆ ಆಗಿನ ಆಹಾರ ಪದ್ಧತಿ ಮತ್ತು ಯಾವುದೇ ರಾಸಾಯನಿಕಯುಕ್ತಗಳನ್ನು ತಲೆಗೆ ಬಳಸುತ್ತಿರಲಿಲ್ಲ. ಕೇವಲ ಶೀಗೆಪುಡಿ ಅಥವಾ ದಾಸವಾಳದ ಸೊಪ್ಪನ್ನು ಹಾಕುತ್ತಿದ್ದರು. ಈಗಿನ ಆಹಾರ ಪದ್ಧತಿ ಬಹಳ ಬದಲಾವಣೆ ಆಗಿದೆ. ಆದ್ದರಿಂದ ನಾವು ಇಲ್ಲಿ ಕೂದಲು ಉದುರುವುದನ್ನು ನಿಲ್ಲಿಸಲು ಒಂದು ಪರಿಹಾರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಮೊದಲು ಒಂದು ಈರುಳ್ಳಿಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ತುರಿದುಕೊಂಡು ಅದರ ರಸವನ್ನು ತೆಗೆದುಕೊಳ್ಳಬೇಕು. ಯಾವ ರೀತಿಯಲ್ಲಿ ಆದರೂ ಈರುಳ್ಳಿ ರಸವನ್ನು ತೆಗೆದುಕೊಳ್ಳಬೇಕು. ನಂತರ ಸುಮಾರು ಮೂರು ಇಂಚು ಶುಂಠಿಯನ್ನು ತೆಗೆದುಕೊಂಡು ಜಜ್ಜಬೇಕು. ಜಜ್ಜಿದ ಶುಂಠಿಯ ರಸ ತೆಗೆದುಕೊಳ್ಳಬೇಕು. ನಂತರ ಒಂದು ಕಪ್ ಕೊಬ್ಬರಿ ಎಣ್ಣೆಯನ್ನು ಪಾತ್ರೆಗೆ ಹಾಕಿ ಗ್ಯಾಸ್ ಆನ್ ಮಾಡಬೇಕು. ಅದಕ್ಕೆ ಕಾಲು ಕಪ್ ನಷ್ಟು ಸಾಸಿವೆ ಎಣ್ಣೆಯನ್ನು ಹಾಕಬೇಕು. ಅದಕ್ಕೆ ಆರು ಸಿಪ್ಪೆ ತೆಗೆದುಕೊಂಡ ಬೆಳ್ಳುಳ್ಳಿಯನ್ನು ಹಾಕಬೇಕು.

ನಂತರ ಎರಡು ಚಮಚ ಮೆಂತೆಯನ್ನು ಹಾಕಬೇಕು. ಮೆಂತೆ ತಲೆಗೆ ತಂಪನ್ನು ನೀಡುತ್ತದೆ. ನಂತರ ನಾಲ್ಕು ದಾಸವಾಳದ ಎಲೆಯನ್ನು ಹಾಕಬೇಕು. ಅದಕ್ಕೆ ಒಂದು ದಾಸವಾಳದ ಹೂವು ಹಾಕಬೇಕು. ನಂತರ ಕಹಿಬೇವಿನ ಸೊಪ್ಪನ್ನು ಹಾಕಬೇಕು. ನಂತರ ಕರಿಬೇವಿನ ಸೊಪ್ಪನ್ನು ಹಾಕಬೇಕು. ಅದಕ್ಕೆ ಎರಡು ಚಮಚ ಕಸ್ಟರ್ ಆಯಿಲ್ ನ್ನು ಹಾಕಬೇಕು. ಹಾಗೆಯೇ ಎರಡು ಚಮಚ ಬಾದಾಮಿ ಎಣ್ಣೆಯನ್ನು ಹಾಕಬೇಕು. ಇದು ಚೆನ್ನಾಗಿ ಕುದಿಯಬೇಕು.

ಒಂದು ಪಾತ್ರೆಗೆ ಈರುಳ್ಳಿರಸ ಮತ್ತು ಶುಂಠಿರಸವನ್ನು ಹಾಕಿ ಕುದಿಸಬೇಕು. ಅದು ಚೆನ್ನಾಗಿ ಕುದಿಯಬೇಕು. ನಂತರ ಅದನ್ನು ಎಲ್ಲವನ್ನು ಸೇರಿಸಿದ ಎಣ್ಣೆಯ ಪಾತ್ರೆಗೆ ಹಾಕಬೇಕು. ಈ ಎಣ್ಣೆಯನ್ನು ತಲೆಗೆ ಹಚ್ಚಿಕೊಳ್ಳಬೇಕು. ಇದನ್ನು ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಹಾಕಿ ಹಲವಾರು ದಿನಗಳು ಬಳಸಬಹುದು. ನಂತರ ತಲೆಗೆ ಚೆನ್ನಾಗಿ ಮಸಾಜ್ ಮಾಡಿಕೊಳ್ಳಬೇಕು. ಇದರಿಂದ ಕೂದಲು ಉದುರುವುದು ನಿಲ್ಲುತ್ತದೆ. ಚೆನ್ನಾಗಿ ಕೂದಲು ಬೆಳೆಯುತ್ತದೆ.

Leave a Comment

error: Content is protected !!