ಕಪ್ಪಾದ ತುಟಿಯನ್ನು ಗುಲಾಬಿ ಕಲರ್ ಆಗುವಂತೆ ಮಾಡುತ್ತೆ ಈ ಮನೆಮದ್ದು

ಮನುಷ್ಯನ ಅಂಗಾಂಗಗಳಲ್ಲಿ ಕಣ್ಣು, ಮೂಗು, ಹಲ್ಲು ಮತ್ತು ಕೂದಲು ಹಾಗೆಯೇ ಆಕರ್ಷಣೀಯ ಮೈಕಟ್ಟು ನೋಡುಗರನ್ನು ಆಕರ್ಷಿಸುತ್ತದೆ. ತುಟಿ ಮುಖದ ಒಂದು ಭಾಗವಾಗಿದೆ. ತುಟಿಯನ್ನು ಕೆಂಪಾಗಿ ಇಟ್ಟುಕೊಳ್ಳಲು ಹುಡುಗಿಯರು ಲಿಫ್ಸ್ಟಿಕ್ ಅನ್ನು ಬಳಸುತ್ತಾರೆ. ಆದರೆ ಮನೆಯಲ್ಲಿರುವ ವಸ್ತುಗಳನ್ನು ಬಳಸಿ ತುಟಿಯನ್ನು ಕೆಂಪಾಗಿ ಇಟ್ಟುಕೊಳ್ಳಬಹುದು. ಅಂತಹ ಒಂದು ಸಲಹೆಯ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಪ್ರತಿಯೊಂದು ಮಹಿಳೆಯರು ತಮ್ಮ ತುಟಿ ಕೆಂಪು ಅಥವಾ ಗುಲಾಬಿ ಬಣ್ಣದಲ್ಲಿ ಇರಬೇಕೆಂದು ಬಯಸುತ್ತಾರೆ. ಆದರೆ ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಗಳಿಂದ ಕೂಡಿದ ಲಿಪ್ಸ್ಟಿಕ್ ಅನ್ನು ಬಳಸುತ್ತಾರೆ. ಇದನ್ನು ಒಳ್ಳೆಯ ಬ್ರಾಂಡ್ ಇರುವುದನ್ನು ಖರೀದಿಸಿದರೆ ಒಳ್ಳೆಯದು. ಇಲ್ಲವಾದಲ್ಲಿ ಅಡ್ಡಪರಿಣಾಮಗಳು ಉಂಟಾಗುವ ಸಾಧ್ಯತೆ ಹೆಚ್ಚು. ಇದಕ್ಕಾಗಿ ಮನೆಯಲ್ಲಿಯೇ ಇರುವ ಪದಾರ್ಥಗಳನ್ನು ಬಳಸಿ ತುಟಿಯನ್ನು ಕೆಂಪಾಗಿ ಇಟ್ಟುಕೊಳ್ಳಬಹುದು.

ಕೊಬ್ಬರಿ ಎಣ್ಣೆ ಹೆಚ್ಚಾಗಿ ಎಲ್ಲರ ಮನೆಯಲ್ಲಿಯೂ ಇರುತ್ತದೆ. ಇದು ತುಟಿಯನ್ನು ಮೃದುವಾಗಿ ಮಾಡುತ್ತದೆ. ಹಾಗೆಯೇ ತುಟಿಗೆ ಬಣ್ಣವನ್ನು ನೀಡುತ್ತದೆ. ಹಾಗೆಯೇ ಜೇನುತುಪ್ಪವು ಕೂಡ ತುಟಿಯು ಮೃದುವಾಗುವಂತೆ ಮಾಡುತ್ತದೆ. ಮೊದಲು ಎರಡು ಚಮಚ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಳ್ಳಬೇಕು. ಹಾಗೆಯೇ ಸಕ್ಕರೆಯಿಲ್ಲದೆ ಅಡುಗೆಗಳೇ ನಡೆಯುವುದಿಲ್ಲ. ಆದ್ದರಿಂದ ಸಕ್ಕರೆಯ ಸಹ ಎಲ್ಲರ ಮನೆಯಲ್ಲಿ ಇರುತ್ತದೆ. ಒಂದು ಬೌಲ್ ನ್ನು ತೆಗೆದುಕೊಳ್ಳಬೇಕು.

ಮೊದಲು ಕೊಬ್ಬರಿ ಎಣ್ಣೆ ಹಾಕಿ ನಂತರ ಒಂದು ಚಮಚ ಸಕ್ಕರೆಯನ್ನು ಹಾಕಬೇಕು. ಅದಕ್ಕೆ ಅರ್ಧ ಚಮಚ ಜೇನುತುಪ್ಪವನ್ನು ಹಾಕಬೇಕು. ಹಾಗೆಯೇ ಇದಕ್ಕೆ ಅರ್ಧ ಚಮಚ ನಿಂಬೆರಸವನ್ನು ಹಾಕಬೇಕು. ಕೊನೆಯದಾಗಿ ಇದನ್ನು ಚೆನ್ನಾಗಿ ಮಿಶ್ರಣ ಮಾಡಬೇಕು. ಇದನ್ನು ರಾತ್ರಿ ಮಲಗುವ ಮುನ್ನ ಮಾಡಿಕೊಂಡು ತುಟಿಗೆ ಚೆನ್ನಾಗಿ ಹಚ್ಚಬೇಕು. ಹಾಗೆಯೇ ಚೆನ್ನಾಗಿ ತಿಕ್ಕಬೇಕು. ಇದನ್ನು ಹಚ್ಚಿ ಅರ್ಧಗಂಟೆಯವರೆಗೆ ಹಾಗೆಯೇ ಬಿಡಬೇಕು. ಇದನ್ನು ಎರಡು ಹೊತ್ತು ಒಂದು ವಾರ ಮಾಡಿದರೆ ಹೀಗೆ ಪರಿಣಾಮ ಕಾಣುತ್ತದೆ.

Leave a Comment

error: Content is protected !!