ಲೋ ಬಿಪಿ ಆಗಲು ಕಾರಣ ಹಾಗೂ ಇದಕ್ಕೆ ಸೂಕ್ತ ಪರಿಹಾರ ಮಾರ್ಗ

ಮನುಷ್ಯನ ದೇಹಕ್ಕೆ ಒಂದಲ್ಲ ಒಂದು ದೈಹಿಕ ಸಮಸ್ಯೆ ಅನ್ನೋದು ಕಾಡುತ್ತಲೇ ಇರುತ್ತದೆ ಅಂತಹ ಸಮಸ್ಯೆಗಳಿಂದ ದೂರ ಉಳಿಯಲು ಸರಿಯಾದ ಪರಿಹಾರ ಮಾರ್ಗಗಳನ್ನು ಹುಡುಕಿಕೊಳ್ಳಬೇಕು, ಇನ್ನು ದೇಹಕ್ಕೆ ರೋಗಗಳು ಬಂದಾಗ ಆಸ್ಪತ್ರೆಗೆ ಹೋಗುವ ಬದಲು ರೋಗಗಳು ಬರದಂತೆ ಆರೋಗ್ಯದ ಬಗ್ಗೆ ಜಾಗೃತಿವಹಿಸಬೇಕು. ವಿಷ್ಯಕ್ಕೆ ಬರೋಣ ಯಾವ ಕಾರಣಕ್ಕೆ ಲೋಬಿಪಿ ಆಗುತ್ತದೆ ಅನ್ನೋದನ್ನ ತಿಳಿಯುವುದಾರೆ ಮೊದಲನೆಯದಲ್ಲಿ ದೇಹದಲ್ಲಿ ವಿಟಮಿನ್ ಕೊರತೆ ಇದ್ರೆ ಲೋ ಬಿಪಿ ಕಾಣಿಸಿಕೊಳ್ಳುತ್ತದೆ ಅಷ್ಟೇ ಅಲ್ಲದೆ ವಿಟಮಿನ್ D ಹಾಗೂ ವಿಟಮಿನ್ ವಿಟಮಿನ್ ಬಿ 12 ಕಡಿಮೆ ಇದ್ರೆ ಲೋ ಬಿಪಿ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಬಿಪಿ ಜಾಸ್ತಿ ಆದ್ರೆ ಬೇಕಾದರೆ ಕಡಿಮೆ ಮಾಡಿಕೊಳ್ಳಬಹುದು ಆದ್ರೆ ಲೋ ಬಿಪಿ ಆದ್ರೆ ಅನಾರೋಗ್ಯದ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಹಾಗಾಗಿ ಬಿಪಿ ಸಮತೋಲನವಾಗಿರಲು ಇಂತಹ ಪೌಷ್ಟಿಕಾಂಶ ಭರಿತವಾದ ಆಹಾರಗಳನ್ನು ಸೇವನೆ ಮಾಡಬೇಕು ಹಾಗೂ ದೇಹದಲ್ಲಿ ರಕ್ತ ಸಂಚಲನ ಕಡಿಮೆ ಇದ್ರೂ ಕೂಡ ಲೋಪಿಬಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ, ಹಾಗಾಗಿ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವಂತ ನೀರು ಹೆಚ್ಚಿನ ಪೂರೈಕೆ ಮಾಡಬೇಕು ಅಂದರೆ ಕೆಲವರು ಬಾಯಾರಿಕೆ ಆದಾಗ ಮಾತ್ರ ನೀರು ಕುಡಿಯುತ್ತಾರೆ ಅದನ್ನು ಬಿಟ್ಟು ಪ್ರತಿದಿನ ನಿಯಮಿತವಾಗಿ ನೀರು ಕುಡಿಯಬೇಕು. ಹೆಚ್ಚು ನೀರು ಕುಡಿಯುವುದರಿಂದ ದೇಹದಲ್ಲಿನ ವಿಷದ ಅಂಶವನ್ನು ಹೊರಹಾಕಲು ಸಹಕಾರಿಯಾಗುತ್ತದೆ ದೇಹದ ನಿರ್ಜಲೀಕರಣಕ್ಕೆ ಸಹಕಾರಿಯಾಗುತ್ತದೆ.

ಇನ್ನು ಮಾನಸಿಕವಾಗಿ ಹೆಚ್ಚು ಒತ್ತಡ ಮಾಡಿಕೊಳ್ಳಬಾರದು ಹಾಗೂ ಯಾವುದೇ ವಿಷಯದ ಬಗ್ಗೆ ಅತಿ ಹೆಚ್ಚಾಗಿ ಟೆನ್ಷನ್ ಮಾಡಿಕೊಂಡರೆ ಲೋ ಬಿಪಿ ಆಗುವ ಸಾಧ್ಯತೆ ಇರುತ್ತದೆ. ಲೋ ಬಿಪಿ ಇರುವವರು ಇಂತಹ ಆಹಾರಗಳನ್ನು ಸೇವನೆ ಮಾಡುವುದು ಉತ್ತಮ ವಿಟಮಿನ್ ಸಿ ಅಂಶವುಳ್ಳ ಹಣ್ಣು ತರಕಾರಿಗಳು ಹಾಗೂ ಫೈಬರ್ ಅಂಶ ಹೊಂದಿರುವಂತ ಹಣ್ಣು ತರಕಾರಿಗಳು ಡ್ರೈ ಪ್ರುಟ್ಸ್ ಒಣ ಖರ್ಜುರ ಸೇವನೆ ಮಾಡುವುದು ಉತ್ತಮ.

ಲೋಬಿಪಿ ಗೆ ಮನೆಮದ್ದು ಯಾವುದು ಅನ್ನೋದನ್ನ ತಿಳಿಯುವುದಾದರೆ ಒಂದು ಗ್ಲಾಸ್ ನೀರಿನಲ್ಲಿ ಅರ್ಧ ಹೋಳು ನಿಂಬೆ ರಸವನ್ನು ಹಾಕಿ ಇದಕ್ಕೆ ಒಂದು ಚಿಟಿಕೆ ಉಪ್ಪನ್ನು ಹಾಕಿ ನಂತರ ಒಂದಿಷ್ಟು ಬೆಲ್ಲವನ್ನು ಪುಡಿಮಾಡಿ ಈ ಗ್ಲಾಸ್ ನಲ್ಲಿ ಹಾಕಿಕೊಳ್ಳಿ. ಈ ಮನೆಮದ್ದನ್ನು ಪ್ರತಿದಿನ ಸೇವನೆ ಅಂಡುವ ಅಗತ್ಯವಿಲ್ಲ ಯಾವಾಗ ಲೋ ಬಿಪಿ ಕಾಣಿಸಿಕೊಳ್ಳುತ್ತದೆಯೋ ಅಂತಹ ಸಮಯದಲ್ಲಿ ಇದನ್ನು ಅಗತ್ಯವಾಗಿ ಬಳಸಿಕೊಳ್ಳಬಹುದಾಗಿದೆ. ಮತ್ತೊಂದು ಪ್ರಯೋಜನಕಾರಿ ಮನೆಮದ್ದು ತುಳಸಿ ಎಲೆಯನ್ನು ಪ್ರತಿದಿನ ಬೆಳಗ್ಗೆ ೪ ರಿಂದ ೫ ಶುದ್ಧ ಎಲೆಗಳನ್ನು ಖಾಲಿ ಹೊಟ್ಟೆಗೆ ಸೇವನೆ ಮಾಡುವುದರಿಂದ ಲೋ ಬಿಪಿ ನಿವಾರಣೆಯಾಗುತ್ತದೆ.

Leave a Comment

error: Content is protected !!