ಅಕ್ಕಿ ಹಿಟ್ಟು, ಗೋಧಿ ಹಿಟ್ಟಿನಲ್ಲಿ ಹುಳಗಳು ಬೀಳದಂತೆ ಮಾಡಲು ಸುಲಭ ಉಪಾಯ

ಬೇಳೆ ಕಾಳುಗಳನ್ನು ಪ್ರತಿಯೊಬ್ಬರ ಮನೆಯಲ್ಲಿಯೂ ಉಪಯೋಗ ಮಾಡಲಾಗುತ್ತದೆ. ಸಾಮಾನ್ಯವಾಗಿ ಒಂದಲ್ಲ ಒಂದು ರೀತಿಯ ಪದಾರ್ಥಗಳ ತಯಾರಿಕೆಯಲ್ಲಿ ಯಾವುದಾದರೂ ಒಂದು ಬೇಳೆಯನ್ನೋ ಇಲ್ಲಾ ಕಾಳುಗಳನ್ನು ಪ್ರತೀ ನಿತ್ಯ ಬಳಕೆ ಮಾಡದ ಮನೆ ಇಲ್ಲ ಎನ್ನಬಹುದು. ಹೀಗಾಗಿ ಎಲ್ಲರೂ ತುಸು ಹೆಚ್ಚೇ ಈ ಬೇಳೆ ಕಾಳುಗಳನ್ನು ತಂದಿಟ್ಟುಕೊಳ್ಳುತ್ತಾರೆ ದಿನನಿತ್ಯದ ಉಪಯೋಗಕ್ಕೆ ಎಂದು. ಕೆಲವರು ಒಂದು ವಾರಕ್ಕೆ ಆಗುವಷ್ಟು ಮಾತ್ರ ಬೇಳೆ ಕಾಳುಗಳನ್ನು ತಂದಿಟ್ಟುಕೊಂಡರೆ ಇನ್ನು ಕೆಲವರು ತಿಂಗಳಿಗೆ ಸಾಕಾಗುವಷ್ಟು ತಂದಿಟ್ಟುಕೊಳ್ಳುತ್ತಾರೆ ಹಾಗೇ ಇನ್ನೂ ಕೆಲವರು ಒಂದು ವರ್ಷಕ್ಕೆ ಸಾಕಾಗುವಷ್ಟು ಬೇಳೆ ಕಾಳುಗಳನ್ನು ಒಮ್ಮೆಗೇ ತಂದಿಟ್ಟುಕೊಳ್ಳುತ್ತಾರೆ. ಹೀಗಿದ್ದಾಗ ಕೆಲವೊಮ್ಮೆ ಬೇಳೆ ಕಾಳುಗಳಲ್ಲಿ ಹುಳಗಳು ಆಗುವ ಸಾಧ್ಯತೆ ಕೂಡಾ ಇರುತ್ತವೆ. ಈಗಿನ ಕಾಲದಲ್ಲಿ ಯಾವ ವಸ್ತು ಆಗಲೀ ಬೇಳೆ ಕಾಳುಗಳು ಆಗಲೀ ಯಾವುದು ಕೂಡಾ ಕಡಿಮೆ ಬೆಲೆಗೆ ಸಿಗುವುದಿಲ್ಲ ಎಲ್ಲದರ ಬೆಲೆ ಗಗನಕ್ಕೆ ಏರಿದೆ. ಅಂದಾಗ ನಾವು ತಂದಿಟ್ಟುಕೊಂಡ ಬೇಳೆ ಕಾಳುಗಳನ್ನು ಹುಳಗಳು ಆಗಿದೆ ಎಂದು ಹಾಳಾದ ಮೇಲೆ ಬಿಸಾಡುವ ಬದಲು ಹುಳಗಳು ಆಗದ ಹಾಗೆ ಕಾಪಾಡಿಕೊಳ್ಳುವುದು ಉತ್ತಮ. ಹಾಗಾದ್ರೆ ಬೇಳೆ ಕಾಳುಗಳಲ್ಲಿ ಹುಳಗಳು ಆಗದೇ ಇರುವ ಹಾಗೆ ಕಾಪಾಡಿಕೊಳ್ಳುವುದು ಹೇಗೆ? ಎನ್ನುವುದನ್ನು ನಾವು ಲೇಖನದ ಮೂಲಕ ತಿಳಿದುಕೊಳ್ಳೋಣ.

ಹೆಸರು ಬೇಳೆ ತೊಗರಿ ಬೇಳೆ ಇಂತಹ ಬೇಳೆಗಳಲ್ಲಿ ಬಹಳ ಬೇಗ ಹುಳಗಳು ಆಗುತ್ತವೆ ಇದು ಹಾಳಾಗದಂತೆ ಬಹಳ ದಿನಗಳ ನಾವು ಇಟ್ಟುಕೊಳ್ಳಲು ಒಂದು ಟೀ ಸ್ಪೂನ್ ಅಷ್ಟು ಸಾಸಿವೆ ಎಣ್ಣೆಯನ್ನು ಬೇಳೆಗಳಿಗೆ ಹಾಕಿ ಕಲಸಿ ಇಟ್ಟರೆ ಬೇಳೆ ಹಾಳಾಗುವುದಿಲ್ಲ ಹುಳಗಳು ಆಗುವುದಿಲ್ಲ. ಸಾಸಿವೆ ಎಣ್ಣೆ ಸಿಗದೇ ಹೋದರೆ ಸ್ವಲ್ಪ ಕಲ್ಲುಪ್ಪನ್ನು ಹಾಕಿಯೂ ಇಡಬಹುದು. ಇಲ್ಲವಾದರೆ ಬೇಳೆಗಳನ್ನು ಹಾಕಿ ಇಡುವ ಡಬ್ಬದಲ್ಲಿ ಕೆಳಗಡೆ ಸ್ವಲ್ಪ ಅರಿಶಿನದ ಪುಡಿಯನ್ನು ಹಾಕಿ ನಂತರ ಬೇಳೆ ಹಾಕಿ ಇಡುವುದರಿಂದ ಸಹ ಹುಳ ಆಗುವುದಿಲ್ಲ. ಬೇಳೆ ಕಾಳು ಆದರೆ ಹೀಗೆ ಮಾಡಿ ಬಹಳ ದಿನಗಳ ವರೆಗೂ ಶೇಖರಿಸಿ ಇಟ್ಟುಕೊಳ್ಳಬಹುದು. ಆದರೆ ಹಿಟ್ಟು ಅದರಲ್ಲಿಯೂ ಸಹ ಹುಳ ಆಗುತ್ತದೆ. ರವೆಯಲ್ಲಿ ಹುಳ ಆಗದಂತೆ ತಡೆಯಲು ರವೆಯನ್ನು ತಂದಾಗ ಒಂದೆರಡು ದಿನಗಳ ಕಾಲ ಬಿಸಿಲಿನಲ್ಲಿ ಒಣಗಿಸಿಯೋ ಅಥವಾ ಚೆನ್ನಾಗಿ ಹುರಿದು ತಣ್ಣಗಾದ ನಂತರ ಡಬ್ಬದಲ್ಲಿ ಹಾಕಿ ಇಡುವುದರ ಮೂಲಕ ಹುಳು ಆಗದಂತೆ ತಡೆಯಬಹುದು. ಇನ್ನು ಅಕ್ಕಿ ಹಿಟ್ಟು ಗೋಧಿ ಹಿಟ್ಟು ಇವುಗಳಲ್ಲಿ ಹುಳ ಆಗದಂತೆ ತಡೆಯಲು ಒಂದು ಚಿಕ್ಕ ಬಟ್ಟೆಯಲ್ಲಿ ಸ್ವಲ್ಪ ಉಪ್ಪು ಹಾಕಿ ಅದನ್ನು ಗಂಟು ಕಟ್ಟಿ ಹಿಟ್ಟಿನ ಡಬ್ಬದಲ್ಲಿ ಹಾಕಿಟ್ಟರೆ ಹುಳ ಆಗುವುದಿಲ್ಲ.

ಅಕ್ಕಿ ಹಿಟ್ಟು ಹೆಚ್ಚಾಗಿ ಇದ್ದರೆ ಅಥವಾ ಅಕ್ಕಿ ಹೆಚ್ಚಾಗಿ ಇದ್ದಾಗ ಅಕ್ಕಿ ಡಬ್ಬ ಅಥವಾ ಮೂಟೆಯಲ್ಲಿ ಲವಂಗದ ಎಲೆಯನ್ನು ಹಾಕಿ ಇಡಬೇಕು. ಹಿಂದೆಲ್ಲ ರೈತರು ತಮ್ಮ ತಮ್ಮ ಮನೆಗಳಲ್ಲಿಯೇ ದೊಡ್ಡ ಉಗ್ರಾಣ ಮಾಡಿಕೊಂಡು ತಾವು ಬೆಳೆದ ಧಾನ್ಯಗಳನ್ನು ವರ್ಷಗಳ ಕಾಲ ಶೇಖರಿಸಿ ಇಟ್ಟುಕೊಳ್ಳುತ್ತಿದ್ದರು. ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಧಾನ್ಯಗಳ ಶೇಖರಣೆ ಮಾಡಿಟ್ಟುಕೊಳ್ಳುವಾಗ ಅದಕ್ಕೆ ಲವಂಗ ಕಹಿಬೇವಿನ ಸೊಪ್ಪು ಕರ್ಪೂರ ಇವುಗಳನ್ನು ಒಣಗಿಸಿ ಪುಡಿ ಮಾಡಿ ಉಂಡೆ ತರ ಮಾಡಿ ಧಾನ್ಯಗಳಲ್ಲಿ ಹಾಕಿಟ್ಟು ಸಂರಕ್ಷಣೆ ಮಾಡಿಕೊಳ್ಳುತ್ತಿದ್ದರು. ಈ ಎಲ್ಲಾ ವಿಧಾನಗಳನ್ನು ಅನುಸರಿಸುವ ಮೂಲಕ ನಾವು ಸುಲಭವಾಗಿ ಧಾನ್ಯಗಳು ಹಿಟ್ಟು ಹಾಳಾಗಿ ಹುಳ ಆಗದಂತೆ ಕಾಪಾಡಿಕೊಳ್ಳಬಹುದು.

Leave a Comment

error: Content is protected !!