Chanakya Neethi: ಶತ್ರುವನ್ನು ಸುಲಭವಾಗಿ ಸೋಲಿಸಲು ಚಾಣಕ್ಯ ಹೇಳಿರುವ ಸುಲಭ ಮಾರ್ಗಗಳು ಯಾವುವು ಗೊತ್ತಾ?

Chanakya ಜೀವನದಲ್ಲಿ ನಮಗೆ ನಮ್ಮ ಗೆಲುವಿನ ದಾರಿಗೆ ಹೋಗಲು ಅಡ್ಡಿಯಾಗಿ ಎರಡು ರೀತಿಯ ಶತ್ರುಗಳು ನಿಂತಿರುತ್ತಾರೆ. ಕೆಲವರು ಕೇವಲ ಶತ್ರುವಾಗಿ ನೇರವಾಗಿ ಕಾಣಿಸಿಕೊಳ್ಳುತ್ತಾರೆ ಇನ್ನು ಕೆಲವರು ಹಿತ ಶತ್ರುಗಳಾಗಿ ನಮ್ಮವರಂತೆ ಇದ್ದು ನಮ್ಮವರ ವಿರುದ್ಧ ನಮಗೆ ಕಾಣದಂತೆ ಕಾರ್ಯ ಚಟುವಟಿಕೆಗಳನ್ನು ಮಾಡುತ್ತಿರುತ್ತಾರೆ. ಇಂತಹ ಶತ್ರುಗಳನ್ನು ಸೋಲಿಸಲು ಇರುವಂತಹ ಸುಲಭವಾದ ದಾರಿಗಳನ್ನು ಚಾಣಕ್ಯರು(Chanakya) ಹೇಳಿರುವಂತಹ ಚಾಣಕ್ಯ ನೀತಿಯ ಕುರಿತಂತೆ ತಿಳಿಯೋಣ ಬನ್ನಿ.

ನಾವು ಯಾವತ್ತೂ ಕೂಡ ದುರ್ಬಲರಾಗಬಾರದು ಹಾಗಿದ್ದಲ್ಲಿ ಮಾತ್ರ ಅವರು ನಮ್ಮ ದುರ್ಬಲತೆಯ ಲಾಭವನ್ನು ಪಡೆದು ನಮ್ಮನ್ನು ಸೋಲಿಸಲು ಪ್ರತಿಯೊಂದು ವಿಧದಲ್ಲಿ ಕೂಡ ಪ್ರಯತ್ನ ಪಡುತ್ತಾರೆ. ಅವರು ನಿಮ್ಮನ್ನು ಯಾವ ಸಂದರ್ಭದಲ್ಲಿ ಕೇಳಕ್ಕೆ ಎಳೆಯಬಹುದು ಎನ್ನುವ ಸಮಯವನ್ನು ಕಾಯುತ್ತಿರುತ್ತಾರೆ ಹೀಗಾಗಿ ಅವರ ನಡೆಗೆ ನಾವು ಯಾವತ್ತೂ ಅವಕಾಶ ಮಾಡಿಕೊಡಬಾರದು. ಪ್ರತಿಯೊಂದು ಕ್ಷಣ ಅವರಿಗೆ ತಿಳಿಯದಂತೆ ನಾವು ಹೇಗೆ ಮುನ್ನುಗಬಹುದು ಮೇಲೆರಬಹುದು ಎನ್ನುವ ಕಾರ್ಯತಂತ್ರಗಳನ್ನು(Plannings) ರೂಪಿಸಿಕೊಳ್ಳಬೇಕು.

ಅವರು ನಿಮ್ಮೊಂದಿಗೆ ಎಷ್ಟು ಚೆನ್ನಾಗಿ ಇರುವಂತಹ ತೋರಿಕೆ ಮಾಡಿದರು ಕೂಡ ಮನಸ್ಸಿನಲ್ಲಿ ಖಂಡಿತವಾಗಿ ನಿಮ್ಮ ಕುರಿತಂತೆ ಹಾನಿ ಮಾಡುವ ಯೋಚನೆಯನ್ನು ಅವರು ಹೊಂದಿರುತ್ತಾರೆ. ಹೀಗಾಗಿ ಅವರ ಕುರಿತಂತೆ ಸದಾ ಕಾಲ ಕಾರ್ಯತಂತ್ರವನ್ನು ಇಟ್ಟುಕೊಳ್ಳುವುದು ಉತ್ತಮ. ಅದರಲ್ಲೂ ವಿಶೇಷವಾಗಿ ಆದಷ್ಟು ನಿಮ್ಮ ಏಳಿಗೆಯನ್ನು ಸಹಿಸಲು ಸಾಧ್ಯವಾಗದೇ ಇರುವಂತಹ ವ್ಯಕ್ತಿಗಳನ್ನು ದೂರವೇ ಇಟ್ಟಿರಿ ಎಂಬುದಾಗಿ ಚಾಣಕ್ಯರು(Acharya Chanakya) ಹೇಳುತ್ತಾರೆ.

ಗೋಡೆಗಳಿಗೂ ಕೂಡ ಕಿವಿ ಇರುವಂತಹ ಈ ಕಾಲದಲ್ಲಿ ನಿಮ್ಮ ಮುಂದಿನ ನಡೆಯನ್ನು ಯಾರಿಗೂ ಅಂದರೆ ನಿಮ್ಮ ಸ್ನೇಹಿತರ ಬಳಗದಲ್ಲಿ ಇರುವಂತಹ ವ್ಯಕ್ತಿಗಳಿಗೂ ಕೂಡ ಬಿಟ್ಟುಕೊಡಬೇಡಿ. ಯಾಕೆಂದರೆ ಯಾರಿಗೂ ಗೊತ್ತು ಸ್ನೇಹಿತರಾದವರು ಯಾವಾಗ ಶತ್ರುಗಳಾಗಿ ಪರಿವರ್ತನೆ ಆಗುತ್ತಾರೆ ಎನ್ನುವುದು. ನಮ್ಮ ಗೆಲುವಿನ ಅಂಶಗಳಿಗಿಂತ ಹೆಚ್ಚಾಗಿ ನಮ್ಮ ಕೊರತೆಯನ್ನು ಸರಿಪಡಿಸಿ ಅದನ್ನು ಶತ್ರುಗಳಿಗೆ ಕಾಣದಂತೆ ಅದನ್ನು ಬಲಪಡಿಸಿ ನಂತರ ನಿಮ್ಮ ಗೆಲುವಿನ ದಾರಿಯನ್ನು ನೀವು ಕೆತ್ತುವುದು ಒಳ್ಳೆಯದು. ಇದರಿಂದಾಗಿ ಯಾವ ಶತ್ರುಗಳು ಯಾವ ರೀತಿಯಲ್ಲಿ ನಿಮ್ಮ ವಿರುದ್ಧ ತಂತ್ರವನ್ನು ರೂಪಿಸಿದರು ಕೂಡ ನೀವು ಅದನ್ನು ಸುಲಭವಾಗಿ ಭೇದಿಸಬಹುದಾಗಿದೆ. ಇವುಗಳೇ ಸ್ನೇಹಿತರೆ ಚಾಣಕ್ಯರು(Chanakya Neethi) ಹೇಳಿರುವ ಶತ್ರುವನ್ನು ಸುಲಭವಾಗಿ ಸೋಲಿಸಲು ಇರುವಂತಹ ಮಾರ್ಗಗಳು.

Leave A Reply

Your email address will not be published.

error: Content is protected !!