ಇವರು ಓದಿರೋದು ಬರಿ 8ನೇ ಕ್ಲಾಸ್ ಆದ್ರೆ ಈ ವರ್ಷದ ಆಧಾಯ 1100 ಕೋಟಿ.!

ಮಿಲ್ಕಿ ಮಿಸ್ಟ್ ಎನ್ನುವುದು ಒಂದು ಅದ್ಭುತವಾದಂತಹ ಹಾಲಿನಿಂದ ವಿವಿಧ ಬಗೆಯ ವಸ್ತುಗಳನ್ನು ತಯಾರಿಸುವ ಕಂಪನಿಯಾಗಿದೆ. ಹಾಲಿನಿಂದ ಅನೇಕ ವಸ್ತುಗಳನ್ನು ತಯಾರಿಸಬಹುದು ಮತ್ತು ಅದನ್ನು ಒಂದು ವ್ಯಾಪಾರಕ್ಕೆ ಸೇರಿಸಿಕೊಳ್ಳಬಹುದು ಎಂದು ಸತೀಶ್ ಕುಮಾರ್ ಅವರು ಅದ್ಭುತವಾಗಿ ತೋರಿಸಿಕೊಟ್ಟಿದ್ದಾರೆ. ಇದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಸತೀಶ್ ಕುಮಾರ್ ಅವರು ಮಿಲ್ಕಿ ಮಿಸ್ಟ್ ಕಂಪನಿಯ ಎಂ.ಡಿ. ಆಗಿದ್ದಾರೆ. ಇವರು ಮೂಲತಃ ಬಡ ಕುಟುಂಬದಲ್ಲಿ ಜನಿಸಿದವರು. ಇವರ ತಂದೆ ಸಣ್ಣ ಪ್ರಮಾಣದ ಹಾಲು ವ್ಯವಹಾರವನ್ನು ನಡೆಸಿ ಜೀವನವನ್ನು ಮಾಡುತ್ತಿದ್ದರು. ಇವರ ತಂದೆ ಒಂದು ದಿನ ಹಾಲಿನ ವ್ಯವಹಾರವನ್ನು ಬಿಡುತ್ತೇನೆ ಎಂದು ಹೇಳಿದಾಗ ಸುರೇಶ್ ಕುಮಾರ್ ಅವರು ಯೋಚಿಸಿ ಹಾಲಿನ ವ್ಯವಹಾರದಲ್ಲಿ ಅತ್ಯುನ್ನತ ಸಾಧನೆ ಮಾಡಬೇಕೆಂದು ನಿರ್ಧರಿಸುತ್ತಾರೆ. ಮೊದಲನೆಯದಾಗಿ ಹಾಲಿನಿಂದ ಪನ್ನೀರ್ ಅನ್ನು ತಯಾರಿಸುವ ಕೆಲಸವನ್ನು ಮಾಡುತ್ತಾರೆ. ಇದರನ್ನು ವ್ಯಾಪಾರ ಮಾಡುವಲ್ಲಿ ಸ್ವಲ್ಪ ಕಷ್ಟವಾಗುತ್ತದೆ. ಅದನ್ನು ಎದುರಿಸಿ ಪನ್ನೀರನ್ನು ವ್ಯಾಪಾರ ಮಾಡುವಲ್ಲಿ ಸ್ವಲ್ಪ ಯಶಸ್ಸನ್ನು ಕಾಣುತ್ತಾರೆ.

ಮುಂದೆ ಹಾಲಿನಿಂದ ಇನ್ನೂ ಅನೇಕ ವಸ್ತುಗಳನ್ನು ತಯಾರಿಸಿ ಮಾರುವಲ್ಲಿ ಯಶಸ್ಸನ್ನು ಕಂಡು 1992 ರಲ್ಲಿ ಮಿಲ್ಕಿ ಮಿಸ್ಟ್ ಕಂಪನಿಯನ್ನು ಆರಂಭಿಸುತ್ತಾರೆ. ಈ ಕಂಪನಿಯು ಮೂವತ್ತಕ್ಕಿಂತ ಹೆಚ್ಚು ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದೆ. ದೇಶದಾದ್ಯಂತ ಈ ಕಂಪನಿಯ ವಸ್ತುಗಳು ದೊರಕುತ್ತವೆ ಅಷ್ಟೊಂದು ಪ್ರಚಲಿತದಲ್ಲಿ ಈ ಕಂಪನಿಯು ಸಾಗಿದೆ. ಈ ಕಂಪನಿಯು ಮೊಟ್ಟಮೊದಲು ಭಾರತದಲ್ಲಿ ರೋಬೋಟಿಕ್ ತಂತ್ರಜ್ಞಾನವನ್ನು ಬಳಸಿ ಪನ್ನೀರ್ ಅನ್ನು ತಯಾರಿಸುವಲ್ಲಿ ಯಶಸ್ಸನ್ನು ಕಂಡಿದೆ. ರೋಬೋಟಿಕ್ ತಂತ್ರಜ್ಞಾನವನ್ನು ಬಳಸಿ ವೇಸ್ಟೇಜ್ ಆಗದಂತೆ ಮತ್ತು ಕಡಿಮೆ ಸಮಯದಲ್ಲಿ ಪನ್ನೀರ್ ತಯಾರಿಸುತ್ತಿದೆ.

ಈ ಕಂಪನಿಯು ಪನ್ನೀರ್ ಜೊತೆಗೆ ಇನ್ನೂ ಅನೇಕ ವಸ್ತುಗಳನ್ನು ತಯಾರಿಸುತ್ತದೆ. ಮೊಸರು,ಜ್ಯೂಸ್ಗಳು, ಕೋಲ್ಡ್ ರಿಂಗ್ಸ್ ಗಳು, ಹೀಗೆ ಇನ್ನೂ ಅನೇಕ 30ಕ್ಕೂ ಹೆಚ್ಚು ಬಗೆಯ ವಸ್ತುಗಳನ್ನು ತಯಾರಿಸಿ ವ್ಯಾಪಾರವನ್ನು ಮಾಡುತ್ತಿದೆ. ಈ ಕಂಪನಿಯ ಮುಖ್ಯ ಉತ್ಪಾದನೆ ಎಂದರೆ ಪನ್ನೀರ್. ಹಾಲಿನ ಉತ್ಪನ್ನದಲ್ಲಿ ತಯಾರಿಸುವಂತಹ ವಸ್ತುಗಳ ವ್ಯವಹಾರವು ವಿಶೇಷತರದ್ದಾಗಿರುತ್ತದೆ. ಇದರಲ್ಲಿ ಹೂಡಿಕೆಯ ಪ್ರಮಾಣ ಹೆಚ್ಚಾಗಿರುತ್ತದೆ ಮತ್ತು ಆದಾಯದಲ್ಲಿ ವಿಳಂಬವಾಗುತ್ತದೆ. ಹಾಲಿನಿಂದ ತಯಾರಿಸುವಂತ ವಸ್ತುಗಳಿಗೆ ಸಮಯದ ವಿಳಂಬವಿಲ್ಲದೆ ಸರಿಯಾದ ಸಮಯದಲ್ಲಿ ವಸ್ತುಗಳ ತಯಾರಿಕೆಯಾಗಬೇಕಾದ ಅನಿವಾರ್ಯತೆ ಇರುತ್ತದೆ. 

ಹೀಗಾಗಿ ಇದಕ್ಕೆ ಹೆಚ್ಚಿನ ಉದ್ಯೋಗಿಗಳು ಜೊತೆಗೆ ಮಷಿನರಿಗಳ ಸಹಾಯದೊಂದಿಗೆ ಬೇಗನೇ ವಸ್ತುಗಳನ್ನು ತಯಾರಿಸಲು ಅನುಕೂಲವಾಗುತ್ತದೆ ಎಂದು ಯೋಚಿಸಿ ಜರ್ಮನಿಯಿಂದ ಪನ್ನೀರ್ ತಯಾರಿಸುವ ರೋಬೋಟಿಕ್ ಮಷೀನ್ ಅನ್ನು ತರಿಸಿ ಪನ್ನೀರ್ ತಯಾರಿಕೆಯಲ್ಲಿ ಯಶಸ್ಸನ್ನು ಕಾಣುತ್ತಾರೆ. ಇವರು ಹಾಲನ್ನು ನೇರವಾಗಿ ರೈತರಿಂದಲೇ ಖರೀದಿ ಮಾಡಿ ವಾರಕ್ಕೆ ಸರಿಯಾಗಿ ಅವರ ಖಾತೆಗೆ ಹಣವನ್ನು ನೀಡಿ ಮಧ್ಯವರ್ತಿಗಳ ಬಳಕೆಯನ್ನು ದೂರಮಾಡಿದ್ದಾರೆ. ರೈತರಿಗೆ ಯೋಗ್ಯವಾದ ದರವನ್ನು ಹಾಲಿಗೆ ನೀಡುತ್ತಿದ್ದಾರೆ. ಪ್ರತಿದಿನ ಈ ಕಂಪನಿಗೆ 55 ಸಾವಿರ ರೈತರಿಂದ ಸರಿಸುಮಾರು ಏಳು ಲಕ್ಷ ಲೀಟರ್ ನಷ್ಟು ಹಾಲು ಸರಬರಾಜಾಗುತ್ತದೆ. ಈ ಕಂಪನಿಯಲ್ಲಿ 1900 ಕೆಲಸಗಾರರು ಕಾರ್ಯನಿರ್ವಹಿಸುತ್ತಿದ್ದಾರೆ.

ಕೋವಿಡ್ ಕಾರಣದಿಂದ ವಸ್ತುಗಳ ಬೇಡಿಕೆ ಹೆಚ್ಚಾದ ಕಾರಣ ಹೆಚ್ಚಿನದಾಗಿ 350 ಕೆಲಸಗಾರರನ್ನು ಸೇರಿಸಿಕೊಂಡಿದ್ದಾರೆ. ಈ ಕಂಪನಿಗೆ 500 ಕೋಟಿಗಳಷ್ಟು ಹೂಡಿಕೆ ಮಾಡಿ ಕಂಪನಿಯನ್ನು ರಚಿಸಿದ್ದಾರೆ. ಈ ಕಂಪನಿಯ ಒಟ್ಟು ವ್ಯವಹಾರ 1100 ಕೋಟಿಗಳಷ್ಟಿದೆ. ಹೀಗೆ ಸುರೇಶ್ ಕುಮಾರ್ ಅವರು ಮಿಲ್ಕಿ ಮಿಸ್ಟ್ ಕಂಪನಿಯನ್ನು ಮಾಡಿ ಜೀವನದಲ್ಲಿ ಯಶಸ್ಸನ್ನು ಕಂಡಿದ್ದಾರೆ ಮತ್ತು ಹಾಲಿನಿಂದ ಇನ್ನೂ ಹೆಚ್ಚಿನ ವಸ್ತುಗಳನ್ನು ತಯಾರಿಸಲು ಕಾರ್ಯೋನ್ಮುಖರಾಗಿದ್ದಾರೆ.

Leave A Reply

Your email address will not be published.

error: Content is protected !!