Virat Kohli: ಅನುಷ್ಕಾಗೂ ಮುನ್ನ ವಿರಾಟ್ ಕೊಹ್ಲಿ ಪ್ರತಿ ಹೆಜ್ಜೆಯಲ್ಲೂ ಬೆಂಗಾವಲಾಗಿದ್ದ ಆ ಹುಡುಗಿ ಯಾರು ಗೊತ್ತಾ? ಕಿಂಗ್ ಕೊಹ್ಲಿ ಆಕೆಗೆ ತನ್ನ ತಂದೆ ಸ್ಥಾನ ನೀಡಲು ಕಾರಣವೇನು..

ಸ್ನೇಹಿತರೆ, ವಿರಾಟ್ ಕೊಹ್ಲಿ(Virat Kohli) ಎಂಬ ಬ್ರ್ಯಾಂಡ್ ಹೆಸರನ್ನು ಕೇಳುತ್ತಿದ್ದ ಹಾಗೆ ಪ್ರತಿಯೊಬ್ಬರಲ್ಲಿಯೂ ಕಿಚ್ಚು ಆಕ್ರಮಣಶೀಲತೆ ಹುಮ್ಮಸ್ಸು ಹಾಗೂ ಶಕ್ತಿ ಪುಟಿದೇಳುತ್ತದೆ. ಒಮ್ಮೆ ವಿರಾಟ್ ಬ್ಯಾಟ್ ಹಿಡಿದು ಫೀಲ್ಡ್ ಗೆ ಕಾಲಿಟ್ಟರೆ ಸಿಕ್ಸರ್ ಹಾಗೂ ರನ್ ಗಳ ಸುರಿಮಳೆ ಯಾಗುವುದು ಖಂಡಿತ. ಇತಿಹಾಸ ಸೃಷ್ಟಿ ಮಾಡಿರುವಂತಹ ದಿಗ್ಗಜರ ರೆಕಾರ್ಡ್ಗಳನ್ನು ಕುಟ್ಟಿ ಪುಡಿ ಪುಡಿ ಮಾಡಿ ಸ್ಟಾರ್ ಪಟ್ಟವನ್ನು ಅಲಂಕರಿಸಿರುವಂತಹ ವಿರಾಟ್ ಕೊಹ್ಲಿ(Virat Kohli) ಅವರ ಈ ಮಟ್ಟದ ಹೆಸರು ಸಾಧನೆ ಸಂಪಾದನೆ ಹಾಗೂ ಯಶಸ್ಸಿಗೆ ಕಾರಣ ಆ ಒಂದು ಹುಡುಗಿ.

ಸಾಮಾನ್ಯವಾಗಿ ವಿರಾಟ್ ಕೊಹ್ಲಿ(Virat Kohli) ಅವರ ಬದುಕನ್ನು ಬದಲಿಸಿದ್ಯಾರು ಎಂದು ಕೇಳಿದರೆ ಎಲ್ಲರ ಬಾಯಿಯಲ್ಲೂ ಬರುವಂತಹ ಹೆಸರು ಅನುಷ್ಕಾ ಶರ್ಮ. ಆದ್ರೆ ವಿರಾಟ್ ಕೊಹ್ಲಿ ಅವರ ಸಾಧನೆಯ ಹಿಂದೆ ಬೆಂಗಾವಲಾಗಿ ಅವರ ತಂದೆಯಂತೆ ನಿಂತು ಪ್ರೋತ್ಸಾಹಿಸಿದ ಹುಡುಗಿ ಮತ್ತೊಬ್ಬರಿದ್ದಾರೆ. ಆಕೆ ಯಾರು? ವಿರಾಟ್ ಕೊಹ್ಲಿ ಗೆ ಏನಾಗಬೇಕು ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಯೋಣ.

ಹೌದು ಗೆಳೆಯರೇ ವಿರಾಟ್ ಕೊಹ್ಲಿ ಎಂಬ ನಂಬರ್ ಒನ್ ಬ್ಯಾಟ್ಸ್ಮನ್ ಹೆಸರಿನ ಹಿಂದೆ, ನೂರಾರು ರೆಕಾರ್ಡ್, ಕೇವಲ ಒಂದೇ ಒಂದು ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವಂತೆ ಕೇಳಿಕೊಳ್ಳಲು ಸಾಕಷ್ಟು ಬ್ರಾಂಡ್ ಮಾರಾಟಗಾರರು ಅವರ ಮನೆ ಮುಂದೆ ಕ್ಯು ನಿಲ್ಲುತ್ತಾರೆ. ಐಪಿಎಲ್ ಲೀಗ್ ನಲ್ಲಿ ಆಡಲು ಕೋಟಿ ಕೋಟಿ ಸಂಭಾವನೆಯನ್ನು ಪಡೆಯುವಂತಹ 1040 ಕೋಟಿ ಆಸ್ತಿ ಒಡೆಯ ವಿರಾಟ್ ಕೊಹ್ಲಿ ಅವರು ಈ ಮಟ್ಟದ ಸಾಧನೆ ಮಾಡಲು, ಇಷ್ಟೆಲ್ಲಾ ಹಣ ಸಂಪಾದನೆ ಮಾಡಲು, ಸಾಕಷ್ಟು ಟ್ರೋಫಿ ಹಾಗೂ ಯಶಸ್ಸಿನ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಳ್ಳಲು ಮುಖ್ಯ ಕಾರಣ ಅವರ ಅಕ್ಕ.

ಹೌದು ಗೆಳೆಯರೇ ವಿರಾಟ್ ಕೊಹ್ಲಿ(Virat Kohli) ಅವರಿಗೆ ಭಾವನ ಕೊಹ್ಲಿ(Bavana Kohli) ಎಂಬ ಸಹೋದರಿಯದ್ದು ಆಕೆ ವಿರಾಟ್ ಕೊಹ್ಲಿ ಅವರ ಶಾಲಾ ದಿನಗಳಿಂದ ಪ್ರತಿಯೊಂದರಲ್ಲಿಯೂ ಪ್ರೋತ್ಸಾಹಿಸುತ್ತಾ ತಮ್ಮ ತಂದೆ ತಾಯಿಯನ್ನು ವಿರಾಟ್ ಕೊಹ್ಲಿ ಅವರ ಕ್ರೀಡೆಗೆ ಒಪ್ಪುವಂತೆ ಕೇಳಿಕೊಳ್ಳುತ್ತಿದ್ದರಂತೆ. ಸದಾ ನನ್ನ ಅಕ್ಕನೇ ನನ್ನ ಸೂಪರ್ ಸ್ಟಾರ್ ಎಂದು ಹೇಳಿಕೊಂಡು ಓಡಾಡುವ ವಿರಾಟ್ ಕೊಹ್ಲಿ ಮತ್ತು ಭಾವನ ಕೊಹ್ಲಿ ಇಬ್ಬರು ದೆಹಲಿಯ ದೌಲತ್ ರಾಮ್ ಕಾಲೇಜಿನಲ್ಲಿ (Daulat Ram college) ಪದವಿ ಪಡೆದರು.

ವಿದ್ಯಾಭ್ಯಾಸ ಮುಗಿಸಿದ ನಂತರ ಸಂಜಯ್ ದಿಂಗ್ರ ಎಂಬುವರೊಂದಿಗೆ ಭಾವನ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗಳಿಗೆ ಮೆಹಕ್ ಮತ್ತು ಆಯುಷ್ ಎಂಬ ಇಬ್ಬರು ಮಕ್ಕಳಿದ್ದು ಮಾಧ್ಯಮ ಗಳಿಂದ ವಿರಾಟ್ ಕೊಹ್ಲಿ ಅವರ ಸಹೋದರಿ ಅಂತರ ಕಾಯ್ದುಕೊಂಡಿದ್ದಾರೆ. ಇನ್ನು ಕಳೆದ 15 ವರ್ಷಗಳ ಹಿಂದೆ ವಿರಾಟ್ ಕೊಹ್ಲಿ ಅವರ ತಮ್ಮ ತಂದೆಯನ್ನು ಕಳೆದುಕೊಂಡ ನಂತರ ಅವರ ಬೆಂಗಾವಲಾಗಿ ನಿಂತು ಪ್ರತಿ ಹಂತದಲ್ಲೂ ಕಿಂಗ್ ಕೊಹ್ಲಿಯನ್ನು ಪ್ರೋತ್ಸಾಹಿಸಿದ್ದು ಅಕ್ಕ ಭಾವನ ಕೊಹ್ಲಿ.

ಹೌದು ಗೆಳೆಯರೇ ಈ ಹಿಂದೆ ವಿರಾಟ್ ಇಷ್ಟೆಲ್ಲಾ ಹೆಸರನ್ನು ಸಂಪಾದಿಸಿರಲಿಲ್ಲ, ಆ ಸಮಯದಲ್ಲಿ ಅಕ್ಕ ಹಣಕಾಸಿನ ನೆರವನ್ನು ನೀಡುವುದರ ಜೊತೆಗೆ ಪ್ರತಿ ಹೆಜ್ಜೆಯಲ್ಲೂ ವಿರಾಟ್ ಕೊಹ್ಲಿ ಅವರನ್ನು ಕೈ ಹಿಡಿದು ನಡೆಸಿದರು ಹಾಗೂ ಪ್ರತಿ ಮ್ಯಾಚ್‌ನಲ್ಲಿಯೂ ಅವರನ್ನು ಪ್ರೋತ್ಸಾಹಿಸಿದರು, ತಮ್ಮ ತಮ್ಮನ ಯಶಸ್ವಿಗಾಗಿ ಸಾಕಷ್ಟು ತ್ಯಾಗವನ್ನು ಭಾವನ ಕೊಯ್ಲಿ ಮಾಡಿದ್ದಾರೆ ಎಂದರೆ ತಪ್ಪಾಗಲಾರದು. ಇಂದು ಅದೆಷ್ಟೋ ಕ್ರಿಕೆಟ್ ಅಭಿಮಾನಿಗಳು ವಿರಾಟ್ ಕೊಹ್ಲಿ ಅವರನ್ನು ದೇವರೆಂದು ಪೂಜಿಸುತ್ತಿದ್ದಾರೆ ಎಂದರೆ ಅದಕ್ಕೆ ಮುಖ್ಯ ಕಾರಣ ಅಕ್ಕ ಭಾವನ.

ಈ ಕಾರಣದಿಂದ ಸಾಕಷ್ಟು ಸಂದರ್ಶನಗಳಲ್ಲಿ ಸ್ವತಃ ವಿರಾಟ್ ಕೊಹ್ಲಿ(Virat Kohli) ಅವರೇ ನನ್ನ ತಂದೆ ಹೋದ ಮೇಲೆ ಅಕ್ಕ ತಂದೆ ಸ್ಥಾನವನ್ನು ತುಂಬಿ ನನ್ನನ್ನು ಚೆನ್ನಾಗಿ ನೋಡಿಕೊಂಡರು ಎಂದು ಹೇಳುತ್ತಾ ಭಾವಕರಾಗಿದ್ದಿದೆ.

Leave a Comment

error: Content is protected !!