ಪಿ.ಯು.ಸಿ ಮುಗಿಸಿರುವ ಉದ್ಯೋಗಾಕಾಂಕ್ಷಿಗಳಿಗೆ ಶೀಘ್ರದಲ್ಲಿಯೆ ತೆರೆಯಲಿದೆ ಅವಕಾಶದ ಬಾಗಿಲು

ರಾಜ್ಯದಲ್ಲಿ ಹಲವು ಹುದ್ದೆಗಳ ನಿರೀಕ್ಷೆಯಲ್ಲಿ ಬಹಳಷ್ಟು ಯುವಕ ಯುವತಿಯರು ಇದ್ದಾರೆ ಹಾಗು ಪ್ರತಿದಿನ ಉಡೊಯ್ಗದ ಹುಡುಕಾಟದಲ್ಲಿ ಇರುವಂತ ನಿರೋದ್ಯೋಗಿಗಳಿಗೆ ಕೂಡ ಉತ್ತಮ ಅವಕಾಶವನ್ನು ನೀಡಬಲ್ಲದು ರಾಜ್ಯ ಸರ್ಕಾರ ಹಾಗು ಕೇಂದ್ರ ಸರ್ಕಾರ ಹಲವು ಹುದ್ದೆಗಳಿಗೆ ವಿವಿಧ ಕ್ಷೇತ್ರಗಳಿಂದ ಅರ್ಜಿಯನ್ನು ಕರೆಯಲಾಗುತ್ತದೆ ಅಂತಹ ಸಂದರ್ಭದಲ್ಲಿ ಆಸಕ್ತರು ಇದರ ಸದುಪಯೋಗವನ್ನು ಪಡೆದುಕೊಳ್ಳುವುದು ಉತ್ತಮ.

ಅದೇನಿಟ್ಟಿನಲ್ಲಿ ಪಿ.ಯು.ಸಿ ಮುಗಿಸಿ ಉದ್ಯೋಗಕ್ಕಾಗಿ ಹುಡುಕುತ್ತಿದ್ದೀರಾ ಸರಕಾರಿ ನೌಕರಿಯಲ್ಲಿ ಆಸಕ್ತಿ ಇದೆಯಾ ಹಾಗಾದರೆ ಇದನ್ನು ತಪ್ಪದೆ ಇದಾನೊಮ್ಮೆತಿಳಿಯಿರಿ, ಕರ್ನಾಟಕ ಸರಕಾರ ಕೆಲವೇ ದಿನಗಳಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿ/ಗ್ರಾಮೀಣ ಅಭಿವೃದ್ಧಿ ಸಹಾಯಕ ಹಾಗೂ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಿದೆ.

ಗ್ರಾಮ ಪಂಚಾಯತ್ ಕಾರ್ಯದರ್ಶಿ/ಗ್ರಾಮೀಣ ಅಭಿವೃದ್ಧಿ ಸಹಾಯಕ, ಒಟ್ಟು 350 ಹುದ್ದೆಗಳು ಇದ್ದು 87 ಹುದ್ದೆಗಳು ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಮೀಸಲಿವೆ. ದ್ವಿತೀಯ ದರ್ಜೆ ಸಹಾಯಕ ಒಟ್ಟು 151 ಹುದ್ದೆಗಳು ಇದ್ದು 96 ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ.
ಕನಿಷ್ಟ ವಿದ್ಯಾರ್ಹತೆ: ಪದವಿ ಪೂರ್ವ ವಿದ್ಯಾರ್ಹತೆ ಹೊಂದಿರಬೇಕು ಅಥವ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಅರ್ಹ ವಿದ್ಯಾರ್ಥಿಗಳು ಇಂದೇ ಪರೀಕ್ಷಾ ತಯಾರಿ ಪ್ರಾರಂಭಿಸುವುದು ಉತ್ತಮ.

Leave a Comment

error: Content is protected !!