Job News 10ನೇ ತರಗತಿ ಪಾಸ್ ಆದವರಿಗೆ ಕೋರ್ಟ್ ನಲ್ಲಿ ಇದೆ ನೋಡಿ ಕೈತುಂಬಾಳ ಸಂಬಳ ಸಿಗುವ ಕೆಲಸ.

Job News ಧಾರವಾಡ ಜಿಲ್ಲೆಯ ಮತ್ತು ಸತ್ರ ನ್ಯಾಯಾಲಯದ ಘಟಕದಲ್ಲಿ ಬೆರಳಚ್ಚು ನಕಲುಗಾರ ಹಾಗೂ ಜವಾನನ(Peon) ಹುದ್ದೆಗೆ ಅಭ್ಯರ್ಥಿಗಳು ಬೇಕಾಗಿದ್ದು ಈಗಾಗಲೇ ಕೆಲಸಕ್ಕೆ ಆಹ್ವಾನವನ್ನು ನೀಡಲಾಗಿದೆ. ಹಾಗಿದ್ದರೆ ಬನ್ನಿ ಈ ಕೆಲಸಕ್ಕೆ ಬೇಕಾಗಿರುವ ಅರ್ಹತೆಗಳೇನೆಂಬುದನ್ನು ತಿಳಿಯೋಣ. ಒಟ್ಟು 33 ಹುದ್ದೆಗಳು ಖಾಲಿ ಇದ್ದು ಆನ್ಲೈನ್ ಮುಖಾಂತರ ಅರ್ಜಿಯನ್ನು ನೀವು ಸಲ್ಲಿಸಬಹುದಾಗಿದೆ. ವಿದ್ಯಾರ್ಹತೆಯನ್ನು ಗಮನಿಸುವುದಾದರೆ ಕನ್ನಡ ಹಾಗೂ ಇಂಗ್ಲೀಷ್ ನಲ್ಲಿ ಬೆರಳಚ್ಚು ನಕಲು ಮಾಡುವ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು.

ಇಲ್ಲವಾದಲ್ಲಿ ಸೆಕ್ರೆಟ್ರಿಯಲ್ ಅಭ್ಯಾಸ ಪಠ್ಯಕ್ರಮದ ಡಿಪ್ಲೋಮಾ ಡಿಗ್ರಿ ಯೊಂದಿಗೆ ಕನ್ನಡ ಮತ್ತು ಇಂಗ್ಲೀಷ್ ಭಾಷೆಯ ದರ್ಜೆಗಳ ಕಿರಿಯ ಲೆವೆಲ್ ನಾ ಬೆರಳಚ್ಚು ಪರೀಕ್ಷೆಯಲ್ಲಿ ಪಾಸ್(Pass) ಆಗಿರಲೇಬೇಕು. ಇನ್ನು ಜವಾನನ ಹುದ್ದೆಗೆ ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆಯಿಂದ ಮಾನ್ಯತೆ ಹೊಂದಿರುವ ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ 10ನೇ ತರಗತಿಯನ್ನು ಪಾಸ್ ಆಗಿರಬೇಕು ಹಾಗೂ ಕನ್ನಡ ಮತ್ತು ಇಂಗ್ಲೀಷ್ ಓದಲು ಬರಬೇಕು. ಕೊಂಚಮಟ್ಟಿಗೆ ಡ್ರೈವಿಂಗ್(Driving) ಅಗತ್ಯತೆ ಕೂಡ ಇರುತ್ತದೆ.

ವಯೋ ಮಾನ್ಯತೆಯನ್ನು ಗಮನಿಸುವುದಾದರೆ ಕನಿಷ್ಠ 18 ವರ್ಷ ತುಂಬಿರಬೇಕು. ಎಸ್ಸಿ ಎಸ್ಟಿ ಹಾಗೂ ಪ್ರವರ್ಗ ಒಂದರ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ಹಾಗೂ ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷ ಗರಿಷ್ಠವಾಗಿದೆ. ಇನ್ನು ಈ ಕೆಲಸಕ್ಕೆ ತಿಂಗಳಿಗೆ 21400 ರಿಂದ ಪ್ರಾರಂಭವಾಗಿ 42,000 ವರೆಗೆ ಸಂಬಳದ ರೂಪದಲ್ಲಿ ಹಣ ದೊರಕಲಿದೆ. ಸಾಮಾನ್ಯ ಹಾಗೂ ಪ್ರವರ್ಗ ಒಂದು ಹಾಗೂ ಅದರ ಸಂಬಂಧಿತ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 200 ರೂಪಾಯಿ ಆಗಿರುತ್ತದೆ. ಎಸ್ಸಿ ಎಸ್ಟಿ ಹಾಗೂ ಅಂಗವಿಕಲ(Handicapped) ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ನೂರು ರೂಪಾಯಿ ಆಗಿರುತ್ತದೆ.

ಬೆರಳಚ್ಚು ನಕುಲುಗಾರರಿಗೆ ಪರೀಕ್ಷೆಯಲ್ಲಿ ಆಯ್ಕೆ ಮಾಡಿ ನಂತರ ಸಂದರ್ಶನದ(interview) ಮೂಲಕ ಆಯ್ಕೆ ಮಾಡಲಾಗುತ್ತದೆ. ಜವನ ಹುದ್ದೆಗೆ ಪರೀಕ್ಷೆಯಲ್ಲಿ ಪಡೆದಂತಹ ಅಂಗಗಳನ್ನು ಗಮನಿಸಿ ಹತ್ತಕ್ಕೆ ಒಂದರ ಅನುಪಾತದಲ್ಲಿ ಸಂದರ್ಶನ ನಡೆಸಲಾಗುತ್ತಿದೆ. ಅರ್ಜಿ ಸಲ್ಲಿಸಲು ಫೆಬ್ರವರಿ 1 ಪ್ರಾರಂಭದ ದಿನಾಂಕವಾಗಿದ್ದು ಮಾರ್ಚ್ 1 ಕೊನೆಯ ದಿನಾಂಕವಾಗಿದೆ. ಇದಕ್ಕೆ ಸಂಬಂಧಪಟ್ಟಂತಹ ಅಧಿಕೃತ ವೆಬ್ಸೈಟ್ ಗೆ ಹೋಗಿ ಅರ್ಜಿಯನ್ನು ಸಲ್ಲಿಸುವ ಮೂಲಕ ನೀವು ಕೂಡ ಈ ಕೆಲಸವನ್ನು ಪ್ರಯತ್ನಿಸಬಹುದಾಗಿದೆ.

Leave a Comment

error: Content is protected !!