ಬರೋಬ್ಬರಿ 200 ಕೆಜಿ ತೂಕ ತೂಗುವ ರಫೀಕ್; ಇಬ್ಬರು ಹೆಂಡರ ಗಂಡ ರಫೀಕ್ ನ ನಿತ್ಯ ಜೀವನದ ಕಥೆ ನಿಜಕ್ಕೂ ಕಣ್ಣೀರು ತರಿಸುತ್ತೆ!


ಸಾಮಾನ್ಯವಾಗಿ ಬೊಜ್ಜು, ಅತಿಯಾದ ದೇಹ ತೂಕ ಜನರನ್ನು ಎಷ್ಟು ಭಾದಿಸುತ್ತದೆ ಅನ್ನೋದನ್ನ ನಾವು ದಿನನಿತ್ಯ ನೋಡುತ್ತೇವೆ. ಇದು ನಾವು ಸೇವಿಸುವ ಅನಾರೋಗ್ಯಕರ ಆಹಾರದಿಂದ ಇರಬಹುದು. ಜಂಕ್ ಫುಡ್ ಸೇವನೆಯಿಂದ ಇರಬಹುದು ಅಥವಾ ವಾತಾವರಣದಿಂದಲೇ ಇರಬಹುದು. ಆದರೆ ಹೀಗೆ ಸ್ಥೂಲಕಾಯವನ್ನು ಹೊತ್ತು ದಿನದ ಜೀವನ ಸಾಗಿಸುವುದು ಸಾಕಷ್ಟು ಜನರಿಗೆ ಕಷ್ಟ. ಹೀಗೆ ನಿತ್ಯದ ಬದುಕಿನಲ್ಲಿ ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿರುವ ಸ್ಥೂಲಕಾಯಿ ಮೊಹಮ್ಮದ್ ರಫೀಕ್ ಅದ್ನಾನ್.

ರಫೀಕ್ ಬಿಹಾರದ ಮೂಲದವನು ಈತನ ವಯಸ್ಸು ಕೇವಲ 30 ವರ್ಷ. ಆದರೆ ದೇಹದ ತೂಕ ಮಾತ್ರ ಬರೋಬ್ಬರಿ 200 ಕೆಜಿ. ದಿನಕ್ಕೆ ಆತ ಸೇವಿಸುವ ಆಹಾರದ ಪ್ರಮಾಣ ಎಷ್ಟು ಗೊತ್ತಾ? ಸುಮಾರು 14 ರಿಂದ 15 ಕೆಜಿ ಆಹಾರ ಈತನಿಗೆ ಪ್ರತಿನಿತ್ಯ ಸೇವಿಸಲು ಬೇಕು. ರಫೀಕ್ 3 ಕೆಜಿ ಅನ್ನ, 4ಕೆಜಿ ರೋಟಿ, 2 ಕೆಜಿ ಮಾಂಸ ಹಾಗೂ ಒಂದುವರೆ ಕೆಜಿ ಮೀನನ್ನು ಪ್ರತಿನಿತ್ಯ ಸೇವಿಸುತ್ತಾರೆ. ಇವರ ಈ ಅತಿಯಾದ ಆಹಾರ ಸೇವಿಸುವಿಕೆ ಅವರ ದೇಹದ ತೂಕದ ಹೆಚ್ಚಳಕ್ಕೆ ಕಾರಣ. ರಫಿಕ್ ಇಬ್ಬರು ಹೆಂಡಿರ ಮುದ್ದಿನ ಗಂಡ.

ರಫಿಕ್ ಅವರ ಪತ್ನಿಗೆ ಅವರಿಗೆ ಸರಿಯಾಗಿ ಬೇಯಿಸಿ ಹಾಕಲು ಕೂಡ ಸಾಧ್ಯವಾಗುತ್ತಿಲ್ಲ. ರಫೀಕ್ ಅವರ ಅತಿಯಾದ ಬೊಜ್ಜಿನ ಕಾರಣದಿಂದಾಗಿ ಅವರಿಗೆ ಮಕ್ಕಳು ಕೂಡ ಆಗಲಿಲ್ಲ. ಇದೇ ಕಾರಣಕ್ಕೆ ರಫೀಕ್ ಈಗ ಎರಡನೇ ಮದುವೆಯನ್ನು ಆಗಿದ್ದಾರೆ. ಆಹಾ ಎಷ್ಟು ಅದ್ಭುತ ಜೀವನ ಅಂತ ನಿಮಗೆ ಅನ್ನಿಸಬಹುದು. ನಿಜಕ್ಕೂ ರಫಿಕ್ ಪಡುತ್ತಿರುವ ಕಷ್ಟ ಯಾರಿಗೂ ಬೇಡ. ರಫೀಕ್ ಸಾಮಾನ್ಯವಾಗಿ ಎಲ್ಲಾ ಬೈಕ್ ಗಳಲ್ಲಿ ಕುಳಿತುಕೊಳ್ಳುವ ಹಾಗಿಲ್ಲ ಅವರ ವೇಟ್ ತಡೆಯುವಂಥ ಬುಲೆಟ್ ನಲ್ಲಿ ಮಾತ್ರ ಅವರು ಓಡಾಡುತ್ತಾರೆ. ಆದರೂ ಇವರ ಅತಿಯಾದ ತೂಕ ಬುಲೆಟ್ ಕೂಡ ಒಮ್ಮೊಮ್ಮೆ ದಾರಿಯ ಮಧ್ಯದಲ್ಲಿ ನಿಂತುಕೊಳ್ಳುವಂತೆಯೂ ಮಾಡಿದೆ.

ಇನ್ನು ರಫೀಕ್ ಅವರ ತಿನ್ನುವ ಶೈಲಿ ನೋಡಿದ ಹಲವರು ಅವರನ್ನು ಯಾವುದೇ ಮದುವೆ ಸಮಾರಂಭಗಳಿಗಾಗಲಿ ಇತರ ಕಾರ್ಯಕ್ರಮಗಳಿಗಾಗಲಿ ಕರೆಯುವುದೇ ಇಲ್ಲ. ಎಲ್ಲಿ ತಾವು ನೂರು ಜನರಿಗೆ ಮಾಡಿದ ಅಡುಗೆಯನ್ನು ಒಬ್ಬನಿಗೆ ಬಡಿಸಬೇಕಾಗುತ್ತದೆ ಎನ್ನುವ ಭಯ ಅವರಿಗೆ. ರಫೀಕ್ ಅವರಿಗೆ ಹೆಚ್ಚು ನಡೆಯಲು ಸಾಧ್ಯವಿಲ್ಲ ಹಾಗಾಗಿ ಅವರು ಸದಾ ಬುಲೆಟ್ ನಲ್ಲಿಯೇ ಓಡಾಡುತ್ತಾರೆ. ರಫೀಕ್ ಬಾಲ್ಯದಿಂದಲೂ ಹೀಗೆ ಬೆಳೆದಿದ್ದು. ಮೊದಮೊದಲು ನಡೆದಾಡಲು ಸಾಧ್ಯವಾಗುತ್ತಿತ್ತು ಈಗ ನಡೆಯಲು ಸ್ವಲ್ಪವೂ ಆಗೋದಿಲ್ಲ ಹಾಗೆಯೇ ತಾನು ಬುಲೆಟ್ ನಲ್ಲಿ ಹೋಗುವಾಗ ಜನ ನನ್ನನ್ನು ನೋಡಿ ನಗುತ್ತಾರೆ ಅಂತ ರಫಿಕ್ ಕಣ್ಣೀರು ಹಾಕುತ್ತಾರೆ. ಆದರೂ ಇದು ನಿತ್ಯದ ಜೀವನ ಅಂತ ರಫೀಕ್ ಅಷ್ಟಾಗಿ ತಲೆ ಕೆಡಿಸಿಕೊಂಡವರಲ್ಲ. ಇನ್ನು ದಿನವೂ ಇಷ್ಟೊಂದು ತಿಂತಾರಲ್ಲ ಆಹಾರಕ್ಕೆ ಏನು ಮಾಡುತ್ತಾರೆ ಅಂತ ನಿಮಗೆ ಅನ್ನಿಸಬಹುದು. ರಫೀಕ್ ಅವರ ನೆರೆಯವರಾದ ಸುಲೇಮಾನ್ ಹೇಳುವಂತೆ, ಒಬ್ಬ ಸಾಧಕ ಕೃಷಿಕ. ಹಾಗಾಗಿ ಅವರಿಗೆ ತಿನ್ನೋದಕ್ಕೆ ಕುಡಿಯುವುದಕ್ಕೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಅವರು ಹಣವನ್ನು ಸಂಪಾದಿಸುತ್ತಾರೆ ಎಂದಿದ್ದಾರೆ.

ರಫೀಕ್ ಅವರ ಅತಿಯಾದ ಸ್ಥೂಲಕಾಯ ಒಂದು ರೋಗದ ಲಕ್ಷಣ. ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ರಫೀಕ್ ಅವರಿಗೆ ಬುಲಿಮಿಯ ನೇರ್ವೊಸಾ ಎನ್ನುವ ಕಾಯಿಲೆ ಇದೆ.  ಇನ್ನು ಈ ಕಾಯಿಲೆಯ ಬಗ್ಗೆ ಮಾತನಾಡಿದ ಬಿಹಾರದ ಆಸ್ಪತ್ರೆಯ ವೈದ್ಯ ಡಾಕ್ಟರ್ ಮೃಣಾಲ್ ರಂಜನ್, ಈ ಕಾಯಿಲೆ ಇರುವವರು ಅತಿಯಾಗಿ ತಿನ್ನುತ್ತಾರೆ ಚಿಕಿತ್ಸೆ ಕೊಡುವುದು ಕಷ್ಟ. ಎಂದು ತಿಳಿಸಿದ್ದಾರೆ. ಹೌದು ರಫೀಕ್ ಗೆ ಇರುವ ಕಾಯಿಲೆ ನಿಜಕ್ಕೂ ಅಪಾಯಕಾರಿ. ಯಾಕಂದ್ರೆ ಈ ಕಾಯಿಲೆ ಅತಿಯಾಗಿ ತಿನ್ನುವಂತೆ ಮಾಡುತ್ತದೆ. ಹೀಗೆ ಸದಾ ತಿನ್ನುತ್ತಲೇ ಇರುವುದರಿಂದ ದೇಹದ ತೂಕ ಹೆಚ್ಚಾಗಿ ಅವರು ಬೇರೆ ಬೇರೆ ಅನಾರೋಗ್ಯದ ಸಮಸ್ಯೆಯನ್ನು ಅನುಭವಿಸಬಹುದು.  ರಫೀಕ್ ತಮ್ಮ ಸ್ಥೂಲಕಾಯದಿಂದ ಅತಿಯಾದ ತಿನ್ನುವಿಕೆಯಿಂದ ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

Leave a Comment

error: Content is protected !!