ಎಟಿಎಂ ಮಷೀನ್ ಗಳಲ್ಲಿ 2000ರೂಪಾಯಿ ನೋಟು ಯಾಕೆ ಬರ್ತಿಲ್ಲ? ಇದಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮ್ ನೀಡಿದ ಪ್ರತಿಕ್ರಿಯೆ ಏನು ಗೊತ್ತಾ?

Indian Rupees ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಮ್ಮ ಭಾರತೀಯ ಸರ್ಕಾರ 2016ರಲ್ಲಿ ಹಳೆಯ ನೋಟುಗಳ ಅಮಾನೀಕರಣ ಹಾಗೂ ಹೊಸ ನೋಟುಗಳ ಬಿಡುಗಡೆಯನ್ನು ಮಾಡಿ ಭಾರತದ ವಿತ್ತ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಕ್ರಾಂತಿಯನ್ನು ಸೃಷ್ಟಿಸಿತ್ತು. ಇದರಿಂದಾಗಿ ಕಳ್ಳ ನೋಟುಗಳ ಚಲಾವಣೆ ಸಂಪೂರ್ಣವಾಗಿ ಕಡಿತಗೊಂಡಿತು ಎಂದರು ಕೂಡ ತಪ್ಪಾಗಲಾರದು. ಅದರಲ್ಲೂ ವಿಶೇಷವಾಗಿ ಇದನ್ನೇ ಬಂಡವಾಳವಾಗಿಟ್ಟುಕೊಂಡು ಭಾರತದ ಆರ್ಥಿಕ(Indian Economic) ಕ್ಷೇತ್ರಕ್ಕೆ ಹೊ’ ಡೆತ ನೀಡಲು ಪ್ರಯತ್ನ ಪಡುತ್ತಿದ್ದ ವಿದೇಶಿ ಶಕ್ತಿಗಳು ಕೂಡ ನಿಸ್ತೇಜಗೊಂಡಿದ್ದವು.

ಇನ್ನು ಇತ್ತೀಚಿನ ದಿನಗಳಲ್ಲಿ ಕೆಲವೊಂದು ಎಟಿಎಂ ಮಷೀನ್(ATM Machine) ಗಳಲ್ಲಿ 2000 ನೋಟು ಬರುವುದು ಕಡಿಮೆಯಾಗಿದೆ. ಇದಕ್ಕಿಂತಲೂ ವಿವರವಾಗಿ ಹೇಳುವುದಾದರೆ ಹೆಚ್ಚಾಗಿ ಎಟಿಎಂ ಮಷೀನ್ ಗಳಲ್ಲಿ 2000 ನೋಟುಗಳನ್ನು ಬಿಟ್ಟು ಬೇರೆ ಎಲ್ಲಾ ನೋಟುಗಳನ್ನು ಕೂಡ ನೋಡಬಹುದಾಗಿದೆ. ಇದು ಸಾಕಷ್ಟು ಜನರಲ್ಲಿ ಅನುಮಾನವನ್ನು ಮೂಡಿಸುವಂತೆ ಮಾಡಿದೆ.

ಪಾರ್ಲಿಮೆಂಟ್ ನಲ್ಲಿ ಕೂಡ ಇದೇ ವಿಚಾರವಾಗಿ ಪ್ರಶ್ನೆಯನ್ನು ಕೇಳಿದಾಗ ಅಲ್ಲಿ ವಿತ್ತ ಸಚಿವೆ ಆಗಿರುವಂತಹ ನಿರ್ಮಲ ಸೀತಾರಾಮನ್(Nirmala Seetharaman) ಅವರು ನೀಡಿರುವಂತಹ ಉತ್ತರ ಎಲ್ಲರ ಅನುಮಾನಗಳಿಗೂ ಕೂಡ ನೇರವಾದ ಪರಿಹಾರವನ್ನು ನೀಡಿದೆ ಎಂದು ಹೇಳಬಹುದಾಗಿದೆ. ಹೌದು ಈ ರೀತಿಯ ಯಾವುದೇ ಯೋಜನೆಗಳನ್ನು ಆರ್‌ಬಿಐ(RBI) ಅಥವಾ ಕೇಂದ್ರ ಸರ್ಕಾರ ಮಾಡಿಲ್ಲ ಎಂಬುದಾಗಿ ನಿರ್ಮಲ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.

ಕೇವಲ ಇಷ್ಟು ಮಾತ್ರವಲ್ಲದೆ ಆಯಾಯ ಸ್ಥಳಗಳ ಎಟಿಎಂ(ATM) ಗಳಲ್ಲಿ ಅಲ್ಲಿನ ಗ್ರಾಹಕರು ಹೆಚ್ಚಿನ ಸಮಯದಲ್ಲಿ ಯಾವ ನೋಟುಗಳನ್ನು ಷ್ಟಪಡುತ್ತಾರೆ ಎನ್ನುವ ಆಧಾರದ ಮೇಲೆ ಆ ಎಟಿಎಂ ಗಳಿಗೆ ಅದರದೇ ಆದಂತಹ ಡಿನೋಮಿನೇಷನ್ ನೋಟುಗಳನ್ನು ಹಾಕಲಾಗುತ್ತದೆ ಎಂಬುದಾಗಿ ಆರ್‌ಬಿಐ ಕೂಡ ಸ್ಪಷ್ಟಪಡಿಸಿದೆ. ಹೀಗಾಗಿ ಒಂದು ವೇಳೆ ಅಲ್ಲಿ ರೂ.2000 ನೋಟುಗಳನ್ನು ಕಡಿಮೆ ಬಳಕೆ ಮಾಡುತ್ತಿದ್ದಾರೆ ಅಲ್ಲಿ ಅದರ ಅಳವಡಿಕೆ ಕೂಡ ಅತ್ಯಂತ ವಿರಳವಾಗಿರುತ್ತದೆ ಎನ್ನುವ ಹೇಳಿಕೆಯನ್ನು ನೀಡುವ ಮೂಲಕ ಈ ಅನುಮಾನಕ್ಕೆ ತೆರೆಯನ್ನು ಎಳೆಯಲಾಗಿದೆ.

Leave a Comment

error: Content is protected !!