ರಮ್ಮಿ ಆಟದ ಗೀಳು ಹುಟ್ಟಿಸಿಕೊಂಡಿದ್ದ ಯುವಕ ಮಾಡಿಕೊಂಡಿದ್ದೇನು ಗೊತ್ತಾ?

ಸ್ನೇಹಿತರ ನಮ್ಮ ಸಮಾಜದಲ್ಲಿ ಯುವಕರು ಕೆಟ್ಟ ಚಟಗಳನ್ನು ಕಲಿಯುವುದರ ಮೂಲಕ ಅದನ್ನು ಜೀವನದ ಒಂದು ಭಾಗವನ್ನಾಗಿಸಿಕೊಂಡಿದ್ದಾರೆ. ಅದರಿಂದ ಹೊರಬರಲು ಯಾವುದೇ ಉಪಾಯ ಅಥವಾ ದಾರಿಗಳು ಸಿಗದಿದ್ದಾಗ ಕೊನೆಯ ಪ್ರಯತ್ನ ಎಂಬಂತೆ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇಂದು ನಾವು ಹೇಳೋ ಹೊರಟಿರುವ ನೈಜ ಘಟನೆ ಕೂಡ ಇದಕ್ಕೆ ನೇರವಾಗಿ ಸಂಬಂಧಿಸಿದ್ದಾಗಿದೆ.

ತಮಿಳುನಾಡಿನ ತಿರುಚಿಯಾ 22 ವರ್ಷದ ಸಂತೋಷ್ ಎನ್ನುವಾತ ಈ ಕೆಲಸವನ್ನು ಮಾಡಿಕೊಂಡಿರುವಾತ. ರವಿಕುಮಾರ್ ಎನ್ನುವಾತನ ಮಗನಾಗಿರುವ ಈ ಸಂತೋಷ್ ಈಗ ಮಾಡಿಕೊಂಡಿರುವ ಕೆಲಸದಿಂದಾಗಿ ಹೆತ್ತವರು ಕಣ್ಣೀರು ಹಾಕುವಂತಾಗಿದೆ. ಪ್ರತಿಷ್ಠಿತ ಖಾಸಗಿ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಇಂಜಿನಿಯರಿಂಗ್ ವ್ಯಾಸಂಗವನ್ನು ಮಾಡುತ್ತಿದ್ದ ಈತ ನಾಲ್ಕನೇ ವರ್ಷದಲ್ಲಿ ಓದುತ್ತಿದ್ದ. ಇನ್ನೇನು ವಿದ್ಯಾಭ್ಯಾಸವನ್ನು ಮುಗಿಸಿ ಕೆಲಸವನ್ನು ಹುಡುಕಬೇಕಾಗಿತ್ತು.

ಇಷ್ಟರಲ್ಲಿಯೇ ಈ ಸಂತೋಷ ಈಗ ಹೀಗೆ ಮಾಡಿಕೊಂಡಿರುವುದು ಎಲ್ಲರ ಬೇಸರ ಹಾಗೂ ಆಶ್ಚರ್ಯಕ್ಕೆ ಕಾರಣವಾಗಿದೆ. ಈತ ಆನ್ಲೈನ್ ನಲ್ಲಿ ರಮ್ಮಿ ಆಡುತ್ತಾ ಅದಕ್ಕಾಗಿ ಮನೆಯಲ್ಲಿರುವ ಹಣ ಹಾಗೂ ಚಿನ್ನದ ಆಭರಣಗಳನ್ನು ಹೋಗಿ ಅಡ ಇಡುತ್ತಿದ್ದ. ಇದೇ ಅಕ್ಟೋಬರ್ ನಾಲ್ಕರಂದು ಮನೆಯಲ್ಲಿ ಅರ್ಧ ಪೌಂಡ್ ಉಂಗುರ ಕಾಣೆಯಾಗಿರುವುದು ಮನೆಯವರ ಗಮನಕ್ಕೆ ಬಂದಿದೆ. ಇದರ ಬಗ್ಗೆ ಮಗನ ಬಳಿ ಬಾಯಿ ಬಿಡಿಸಿದಾಗ ಕೊನೆಗೂ ಕೂಡ ತಾನು ಮಾಡಿಕೊಂಡಿರುವ ತಪ್ಪನ್ನು ಈತ ಒಪ್ಪಿಕೊಂಡಿದ್ದಾನೆ.

ಇದಾದ ನಂತರ ತನ್ನ ವಾಟ್ಸಪ್ ಸ್ಟೇಟಸ್ ನಲ್ಲಿ ತಾನು ಜೀವವನ್ನು ಕಳೆದುಕೊಳ್ಳುವುದರ ಬಗ್ಗೆ ಸ್ಟೇಟಸ್ ಹಾಕಿದ್ದಾರೆ. ಇದಾದ ಮರುಕ್ಷಣವೇ ಈತ ಮನಪಾರೈ ರೈಲ್ವೆ ಸ್ಟೇಷನ್ ಬಳಿ ಇರುವ ರೈಲಿನ ಅಡಿಗೆ ಸಿಕ್ಕಿ ತನ್ನ ಜೀವವನ್ನು ಕಳೆದುಕೊಂಡಿದ್ದಾನೆ ಎಂಬುದಾಗಿ ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. ನಿಜಕ್ಕೂ ಕೂಡ ಇಂತಹ ಚಿಕ್ಕವಯಸ್ಸಿಗೆ ಇಂತಹ ದುಡುಕಿನ ನಿರ್ಧಾರವನ್ನು ತೆಗೆದುಕೊಳ್ಳುವ ಮನಸ್ಸು ಹೇಗೆ ಬರುತ್ತದೆ ಎಂಬುದನ್ನು ನಿಜಕ್ಕೂ ಕೂಡ ಊಹಿಸಲು ಸಾಧ್ಯವಾಗುತ್ತಿಲ್ಲ.

Leave a Comment

error: Content is protected !!