ಆ ಒಂದು ಕ್ರೈಂ ಟಿವಿ ಶೋ ನೋಡಿಯೇ ಶ್ರದ್ಧಾಳನ್ನು 35 ಬಾರಿ ಪೀಸ್ ಮಾಡಿ ಫ್ರೀಡ್ಜ್ ನಲ್ಲಿಟ್ಟ ಅಫ್ತಾಬ್

ಉತ್ತಮ ಕಾರ್ಯಕ್ಕೆ ಒಳ್ಳೆಯ ಮನಸ್ಸಿದ್ದರೆ ಸಾಕು, ಆದರೆ ಕೆಟ್ಟ ಕೆಲಸಕ್ಕೆ ಗಟ್ಟಿ ಮನಸ್ಸಿರಬೇಕು. ಕೆಲವು ಅಪರಾಧಿಗಳು ಬೇಗನೆ ಪೊಲೀಸರ ಕೈವಶವಾಗಿ ಬಿಡುತ್ತಾರೆ. ಇನ್ನು ಚಾಣಾಕ್ಷರು ಕುಲಂಕುಶವಾಗಿ ವಿಷಯಗಳೆಲ್ಲವನ್ನು ವಿಚಾರಿಸಿಯೇ ಅಪರಾಧಕ್ಕೆ ಕೈ ಹಾಕುತ್ತಾರೆ. ಇಂಥವರನ್ನು ಹುಡುಕುವುದು, ಹಿಡಿಯುವುದು ಎರಡು ಕಷ್ಟವೇ ಸರಿ.

ಅದೆಷ್ಟು ಕ್ರೂರ ಮನಸ್ಸಿನ ಅಪರಾಧಿ ಇರಬಹುದು ಅಫ್ತಾಬ್ ನೋಡಿ. ಮೂಲಗಳು ತಿಳಿಸಿರುವ ಹಾಗೆ ತನ್ನ ಪ್ರಿಯತಮೆಯನ್ನೇ ತುಂಡು ತುಂಡಾಗಿ ಕತ್ತರಿಸಿ ದೇಹವನ್ನು ಫ್ರಿಜ್ ನಲ್ಲಿ ಇರಿಸಿದ್ದಾನಂತೆ. ಶ್ರದ್ಧಾ ಅವರ ಮರ್ಡರ್ ಕೇಸ್ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಶಾಂತಿಪ್ರಿಯ ಭಾರತವನ್ನು ಬೆಚ್ಚಾಗಿಸಿರುವ ಈತನ ಕ್ರೌರ್ಯವು ಎಲ್ಲರ ಮನಸ್ಸನ್ನು ಹಿಂಡಿದೆ.

ದೆಹಲಿ ಪೊಲೀಸರ ವಿಚಾರಣೆಯಲ್ಲಿ ತಿಳಿದು ಬಂದಿರುವ ಹಾಗೆ ತನ್ನ ಪ್ರಿಯತಮೆಯನ್ನು ಕೊಂದ ಬಳಿಕ, ಆತನು ಉಪಯೋಗಿಸಿರುವ ಬಂಬಲ್ ಎಂಬ ಡೇಟಿಂಗ್ ಆಪ್ ನ ಮೂಲಕ ಮತ್ತೊಂದು ಹುಡುಗಿಯನ್ನು ಮನೆಗೆ ಕರೆ ತಂದಿದ್ದನಂತೆ. ಫ್ರಿಜ್ ನಲ್ಲಿ ಹಳೆಯ ಪ್ರಿಯತಮೆಯ ಅಂಗಾಂಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವಾಗಲೇ ಹೊಸ ಹುಡುಗಿಯೊಂದಿಗೆ ಈತನ ಚೆಲ್ಲಾಟ..

ಮೂಲಗಳು ಹೇಳುವಂತೆ ಅಫ್ತಾಬ್ ಅಮಿನ್ ಪೂನಾವಾಲ ತನ್ನ ಸಹಬಾಳ್ವೆಯ ಸಂಗಾತಿ ಶ್ರದ್ಧಾ ಅವಳನ್ನು ಮೂವತ್ತೈದು ತುಂಡುಗಳಾಗಿ ಕತ್ತರಿಸಿ ಕೃತ್ಯ ಮಾಡುವ ಮೊದಲೇ ತಪ್ಪಿಸಿಕೊಳ್ಳುವ ಎಲ್ಲಾ ಹಾದಿಗಳನ್ನು ಹುಡುಕಿಟ್ಟಿದ್ದನಂತೆ. ಇಡೀ ದೇಹವನ್ನು ಬಚ್ಚಿಡಲು 300 ಲೀಟರ್ ಸಾಮರ್ಥ್ಯವಿರುವ ರೆಫ್ರಿಜರೇಟರನ್ನು ಹೊಸದಾಗಿ ಖರೀದಿಸಿದ್ದನಂತೆ. ಕೃತ್ಯಗೈದ ದೇಹವನ್ನು ಫ್ರಿಡ್ಜ್ ನಲ್ಲಿ ತುಂಬಿರಿಸಿದ ಬಳಿಕ ರ-ಕ್ತದ ಕೆಂಪು ಕಲೆಗಳಿರುವ ತನ್ನ ಮನೆಯನ್ನು ರಾಸಾಯನಿಕಗಳಿಂದ ಸ್ವಚ್ಛವಾಗಿ ತೊಳೆದಿದ್ದನಂತೆ. ಕೃತ್ಯದ ಸಣ್ಣ ಸುಳಿವು ಸಹ ಪೊಲೀಸರಿಗೆ ಸಿಗದಂತೆ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಿದ್ದ.

ಶ್ರದ್ಧಾ ದೇಹದ ಅಂಗಾಂಗಗಳನ್ನು ಪ್ರಿಜ್ನಲ್ಲಿ ಪರಿಶೀಲಿಸಿದಾಗ ಪೊಲೀಸರಿಗೆ ರ’ಕ್ತ’ದ ಸಣ್ಣ ಕಲೆಯು ಸಿಗಲಿಲ್ಲವಂತೆ. ಶ್ರದ್ದಾಳ ಬಟ್ಟೆಗಳನ್ನು ಕಸದ ಲಾರಿಗೆ ಎಸೆದಿದ್ದನಂತೆ. ಶ್ರದ್ಧಾಳ ಮೊಬೈಲನ್ನು ಮಹಾರಾಷ್ಟ್ರದ ಮೂಲೆಯಲ್ಲಿ ಎಸೆದಿರುವ ಬಗ್ಗೆ ಮಾಹಿತಿಗಳು ದೊರಕಿವೆಯಂತೆ. ಪೊಲೀಸರಿಗೆ ತನಿಖೆಯ ವೇಳೆ ದೊರಕಿರುವ 13 ಪಳೆಯುಳಿಕೆಗಳ ಅವಶೇಷಗಳು ಆತ ಕೊಲೆಗೂ ಮುನ್ನವೇ ಮಾನವ ಅಂಗಾಂಗ ರಚನೆಯ ಬಗ್ಗೆ ತಿಳಿದುಕೊಂಡಿದ್ದ ಎನ್ನುವಂತಿದೆಯಂತೆ.

ಮೇ 18ರಂದು ನಡೆದ ಕೃತ್ಯ ನವೆಂಬರ್ 10 ರಂದು ಬಯಲಾದಾಗ ನಡೆಸಿದ ವಿಚಾರಣೆಯ ವೇಳೆ ಆತನೇ ಬಾಯಿ ಬಿಟ್ಟಿರುವ ಹಾಗೆ ಅಮೆರಿಕಾದ ಕ್ರೈಂ ಟಿವಿಯ ಶೋವೊಂದನ್ನು ನೋಡಿ ಅಫ್ತಾಬ್ ಕೃತ್ಯಗೆ ಸಂಚು ಹಾಕಿದ್ದನಂತೆ. ಡೆಕ್ ಸ್ಟರ್ ಶೋವನ್ನು ನೋಡಿದ ಬಳಿಕವೇ ಖತರ್ನಾಕ್ ಪ್ಲಾನ್ ಮಾಡಿ ಕೃತ್ಯದ ಕೆಲಸವನ್ನು ಕೈಗೆತ್ತಿಕೊಂಡನಂತೆ. ಕಾಣೆಯಾದವಳ ತನಿಖೆಯ ಕಥೆ, ಕಣ್ಣು ಕಾಣಲಿಚ್ಚಿಸದ ಕೃತ್ಯ ಕಾರಣಿಭೂತ ಕ್ರೂರಿಯನ್ನು ಬಯಲಿಗೆಳೆಯುತ್ತದೆ ಎಂದು ಯಾರು ಊಹಿಸಿರಲಿಲ್ಲ. ಸ್ನೇಹಿತರೆ, ಯಾರನ್ನಾದರೂ ನಂಬುವ ಮೊದಲು ಕೊಂಚ ಯೋಚಿಸಿ, ನಿರ್ಧರಿಸಿ; ಎಚ್ಚರಿಕೆಯಿಂದಿರಿ.

Leave a Comment

error: Content is protected !!