
ಸ್ವಯಂ ವಿವಾಹವಾದ ಭಾರತದ ಮೊಟ್ಟ ಮೊದಲ ಮಹಿಳೆ. ಈಕೆಯ ಸ್ವಯಂ ವಿವಾಹದ ಫೋಟೋಗಳು ಇಲ್ಲಿವೆ ನೋಡಿ
ಜಗತ್ತಿನಲ್ಲಿ ಸೆವೆನ್ ವಂಡರ್, ಅಂದ್ರೆ ಏಳು ಅಚ್ಚರಿಗಳಿವೆ ಎಂದು ಹೇಳಲಾಗುತ್ತದೆ. ಆದರೆ ಇತ್ತೀಚಿಗೆ ನಡೆಯುತ್ತಿರುವ ಕೆಲವು ಘಟನೆಗಳನ್ನು ನೋಡಿದ್ರೆ ಈ ವಂಡರ್ ಗಳನ್ನ ಲೆಕ್ಕ ಹಾಕೋದಕ್ಕೇ ಸಾಧ್ಯವಿಲ್ಲ. ಭಾರತೀಯ ಪದ್ದತಿಯಲ್ಲಿ ಮದುವೆಗೆ ಬಹಳ ಮಹತ್ವದ ಸ್ಥಾನವಿದೆ. ಹುಡುಗ ಹುಡುಗಿ ಮೆಚ್ಚಿ ಸಪ್ತಪದಿ ತುಳಿದು ಜೀವನಪರ್ಯಂತ ಜೊತೆಗೆ ಜೀವನ ಸಾಗಿಸುವ ನಿರ್ಧಾರ ಮಾಡ್ತಾರೆ. ಇಂಥ ಮದುವೆ ಒಂದುಕಡೆಯಾದರೆ, ಇನ್ನೊಂದು ಸಲಿಂಗಕಾಮಿಗಳು ಅಥವಾ ಗೇಗಳ ವಿವಾಹ. ಇದೀಗ ಈ ಮದುವೆಯನ್ನೂ ಕೂಡ ಲೀಗಲ್ ಮಾಡಲಾಗಿದ್ದು ಹುಡುಗ ಹುಡುಗನನ್ನು ಹುಡುಗಿ ಹುಡುಗಿಯನ್ನೇ ಮದುವೆಯಾಗಬಹುದು. ಇದೆಲ್ಲಾ ಸರಿ ಆದರೆ ತನ್ನನ್ನು ತಾನು ಮದುವೆಯಗೋದು ಅಂದ್ರೆ ಏನು?
ಇದ್ಯಾವುದಪ್ಪಾ ಹೊಸ ರೀತಿಯ ವಿವಾಹ ಪದ್ಧತಿ ಅಂತ ನಿಮಗೂ ಆಶ್ಚರ್ಯವಾಗಬಹುದು. ಇದು ವಿದೇಶದಲ್ಲಿ ಚಾಲ್ತಿಯಲ್ಲಿದೆ. ಆದರೆ ಇಂದು ದೇಶಕ್ಕೂ ಕಾಲಿಟ್ಟಿರುವುದು ನಿಜಕ್ಕೂ ಶಾಕಿಂಗ್ ವಿಷಯ. ಹೌದು, ವಡೋದರಾ ನಿವಾಸಿ ಕ್ಷಮಾ ಬಿಂದು ಎನ್ನುವ 24 ವರ್ಷದ ಹುಡುಗಿ ತನ್ನನ್ನೇ ತಾನು ಮದುವೆಯಾಗುತ್ತಿರುವುದಾಗಿ ಘೋಷಿಸಿ ಹಲವರಿಗೆ ಅಚ್ಚರಿ ಮೂಡಿಸಿದ್ದರು. ಜೊತೆಗೆ ಈ ಸಂಪ್ರದಾಯವನ್ನು ದೇಶದಲ್ಲಿ ಬೆಳೆಸದಂತೆ, ಹಾಗೆ ಮದುವೆ ಆಗಲೇ ಬಾರದು ಎಂದು ಜನ ವಿರೋಧಿಸಿದ್ದರು. ವಡೋದರಾದ ಮಾಜಿ ಉಪಮೇಯರ್ ಹಾಗೂ ಬಿಜೆಪಿ ನಾಯಕಿ ಸುನೀತಾ ಶುಕ್ಲಾ ಈ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಕ್ಷಮಾ ಬಿಂದು ತಾನು ತನ್ನನ್ನೇ ವರಿಸುತ್ತಿರುವುದಾಗಿ ತಮ್ಮ ಸಾಮಾಜಿಕ ಖಾತೆಯಲ್ಲಿ ಹಂಚಿಕೊಂಡಿದ್ದರು. ಜೊತೆಗೆ ಇದೇ ತಿಂಗಳ 11 ನೇ ತಾರಿಕಿಗೆ ದೇವಸ್ಥಾನವೊಂದರಲ್ಲಿ ತಾನು ಹಸೆಮಣೆ ಏರುತ್ತಿರುವುದಾಗಿಯೂ ಹೇಳಿಕೊಂಡಿದ್ದರು. ಆದರೆ ಈ ಮದುವೆಗೆ ಅಪಾರವಾದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕ್ಷಮಾ ಎರಡು ದಿನ ಮುಂಚಿತವಾಗಿಯೇ ತನ್ನ ಮನೆಯಲ್ಲಿ ಹಿಂದೂ ಸಂಪ್ರದಾಯದಂತೇ ಶಾಸ್ತ್ರೋಕ್ತವಾಗಿ ತನ್ನನ್ನು ತಾನೇ ವರಿಸಿದ್ದಾರೆ. ಇದಕ್ಕೆ ಯಾವ ಅರ್ಚಕರು ಬಾರದಿದ್ದರೂ ಕ್ಷಮಾ ಅವರ ಆಪ್ತರು ಹಾಗೂ ಸ್ನೇಹಿತರು ಮದುವೆ ನೆರವೇರಲು ಅವರ ಜೊತೆಗೆ ನಿಂತಿದ್ದರು.
ಕ್ಷಮಾ ಬಿಂದು ಅವರ ಈ ನಿರ್ಧಾರಕ್ಕೆ ಅವರ ಪಾಲಕರೂ ಒಪ್ಪಿಗೆ ಸೂಚಿಸಿದ್ದು, ಇದೀಗ ಕ್ಷಮಾ ಬಿಂದು ಅವರ ಮದುವೆ ಅವರೊಂದಿಗೇ ನೆರವೇರಿದೆ. ಮೆಹೆಂದಿ, ಅರಿಶಿನ ಶಾಸ್ತ್ರ, ಮದುವೆ ಎಲ್ಲವನ್ನೂ ನೆರವೇರಿಸಿಕೊಂಡ ಕ್ಷಮಾ ತಮ್ಮ ಮದುವೆ ವಿಡೀಯೋ ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಕ್ಷಮಾ ಮದುವೆಯ ನಂತರ ತಾನು ಗೋವಾಗೆ ಮಧುಚಂದ್ರಕ್ಕೆ ಹೋಗುವುದಾಗಿ ಹೇಳಿಕೊಂಡಿದ್ದರು. ಇದೀಗ ಅದರ ಸಿದ್ಧತೆಯಲ್ಲಿರುವ ಕ್ಷಮಾ, ಜೀವನ ಪರ್ಯಂತ ನಾನು ನನ್ನ ಜೊತೆಯೇ ಬದುಕುತ್ತೇನೆ, ಬೇರೆ ಯಾವ ವರನನ್ನು ಮದುವೆಯಾಗಲು ಇಷ್ಟವಿಲ್ಲ ಎಂಬ ಕಾರಣಕ್ಕೆ ಈ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ!