ಲಕ್ಷ ಲಕ್ಷ ಸ್ಯಾಲರಿ ಸಿಗುವ ಇಂಜಿನಿಯರಿಂಗ್ ಕೆಲಸ ಬಿಟ್ಟು ವ್ಯವಸಾಯದಲ್ಲಿ ತೊಡಗಿಕೊಂಡಿರುವ ಇಬ್ಬರು ಹೆಣ್ಣು ಮಕ್ಕಳು…ಇವರು ಮಾಡುತ್ತಿರುವ ಒಳ್ಳೆಯ ಆದಾಯದ ಕೃಷಿ ಯಾವುದು ಗೊತ್ತಾ?

Gagana megha inspirational story : ಆಧುನಿಕ ಯುಗದಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿದ ಕೂಡಲೇ ಒಳ್ಳೊಳ್ಳೆ company, lab ಗಳನ್ನು ಅರಿಸಿಕೊಂಡು ಪಟ್ಟಣದತ್ತ ಮುಖ ಮಾಡಿ ನಿಲ್ಲುವವರು ಸರ್ವೇ ಸಾಮಾನ್ಯವಾಗಿ ಕಾಣಸಿಗುತ್ತಾರೆ. ಇನ್ನು ಇಂಜಿನಿಯರಿಂಗ್(engeenering), ಮಾಸ್ಟರ್ಸ್ ಡಿಗ್ರಿ(master’s degree) ಕಂಪ್ಲೀಟ್ ಆದವರು, ನವಯುಗ ತಂತ್ರಜ್ಞಾನದ ಕಡೆಗೆ ಆಕರ್ಷಿತಗೊಳ್ಳುತ್ತಾರೆಯೇ ಹೊರತು, ವ್ಯವಸಾಯ ಭೂಮಿಯಲ್ಲಿ ಕೃಷಿ ಮಾಡಲು ಉತ್ಸಾಹ ತೋರುವುದಿಲ್ಲ.

ಇಂತಹ ಕಾಲದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡ ಎರಡು ಹೆಣ್ಣು ಮಕ್ಕಳ ಕೃಷಿ ಕತೆಯನ್ನು ಓದಿ. ಇಂಜಿನಿಯರಿಂಗ್ ಮುಗಿಸಿಯೂ ಕೂಡ ವ್ಯವಸಾಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಗಮನಾರ್ಹ. ಹೌದು. ತಂದೆ ತಾಯಿಗಳು ಕೃಷಿಯಲ್ಲಿಯೇ ಜೀವನ ಕಟ್ಟಿಕೊಂಡು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿದರು ಕೂಡ, ಒಮ್ಮೆ ಪಟ್ಟಣ ಸೇರಿದ ಮಕ್ಕಳು ತೋಟಗದ್ದೆಗಳೆಂದು ಮಣ್ಣಿನಲ್ಲಿ ಇಳಿದು ಕೆಲಸ ಮಾಡಲು, ಬಿಡುವಿನ ವೇಳೆಯಲ್ಲಿಯೂ ಸಹ ಹಿಂಜರಿಯುತ್ತಾರೆ.

ಅಂತಹದರಲ್ಲಿ ಪಟ್ಟಣ ಜೀವನವನ್ನೇ ಬಿಟ್ಟು ಹುಟ್ಟೂರಿಗೆ ಮರಳಿ ಕೃಷಿಯಲ್ಲಿ ಸಂತೋಷ ಕಂಡಿರುವ ಗಗನ ಮತ್ತು ಮೇಘನ ಇಬ್ಬರು, ಅವಳಿ ಹೆಣ್ಣು ಮಕ್ಕಳು. ಇವರು ಪಟ್ಟಣದಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿ ಲ್ಯಾಪ್ಟಾಪ್(laptop) ಮುಂದೆ ಕುಳಿತು ದಿನವಿಡಿ ವರ್ಕ್ ಮಾಡುವುದನ್ನು ಆಶಿಸದೆ, ತಂದೆ ತಾಯಿ ವಾಸಿಸಿರುವ ಹಳ್ಳಿಗೆ ಬಂದು ಒಳ್ಳೆಯ ಆದಾಯ ಬರುವ ಕೃಷಿಯನ್ನು ಹಿಡಿದಿದ್ದಾರೆ. ಓದಿನಲ್ಲಿ ಸದಾಕಾಲ ಮುಂದಿರುತ್ತಿದ್ದ ಗಗನ ಮತ್ತು ಮೇಘ ಮನಸ್ಸು ಮಾಡಿದರೆ ಲಕ್ಷಾನುಗಟ್ಟಲೆ ಸಂಬಳ ಸಿಗುವ ಕಂಪನಿಗಳಲ್ಲಿ ಕೆಲಸ ಮಾಡಬಹುದಿತ್ತು; ಅಲ್ಲದೆ ಫಾರಿನ್ ಕಂಟ್ರಿ(foreign country) ಗಳಲ್ಲಿ ಅವಕಾಶ ದೊರೆಯುತ್ತಿತ್ತು. ಆದರೆ ಇವರ ಕನಸೇ ವ್ಯವಸಾಯವಾಗಿತ್ತು.

Gagana megha inspirational story
Gagana megha inspirational story

ಮೂಲತಃ ಶಿವಮೊಗ್ಗದ, ಸಾಗರ ತಾಲೂಕಿನ ಹೊಸಳ್ಳಿ ಗ್ರಾಮದವರಾದ ಈ ಇಬ್ಬರು ಹೆಣ್ಣು ಮಕ್ಕಳಿಗೆ ಅವರ ತಂದೆ ರಾಜೇಂದ್ರ ಅವರೇ inspiration ಆಗಿದ್ದರು. ಔಷಧಿ ಗಿಡಗಳನ್ನು( medicinal plants) ಬೆಳೆದು ಕೃಷಿಯಲ್ಲಿ ಯಶಸ್ಸು ಕಂಡಿದ್ದ ರಾಜೇಂದ್ರ ಅವರಂತೆ, ಅವರ ಇಬ್ಬರು ಹೆಣ್ಣು ಮಕ್ಕಳಾದ ಗಗನ ಮತ್ತು ಮೇಘ ಕೂಡ, ತಾವು ಕಲಿತದ್ದರಿಂದ ಕೆಲವು ಅಂಶಗಳನ್ನು ಉಪಯೋಗಿಸಿಕೊಂಡು ಇಸ್ರೇಲ್(Israel) ಮಾದರಿಯ ಔಷಧಿ ಸಸ್ಯಗಳನ್ನು ಬೆಳೆಯುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.

ಇದನ್ನೂ ಓದಿ : ಲಂಡನ್ ನಲ್ಲಿ ತಿಂಗಳಿಗೆ ಎರಡು ಲಕ್ಷ ಸಂಬಳ ಸಿಗುತ್ತಿದ್ದ ಕೆಲಸವನ್ನು ಬಿಟ್ಟು ಕೋಮಲ್ ಪತ್ನಿ ಇಂಡಿಯಾಗೆ ಬಂದಿದ್ದೇಕೆ

ಅಲ್ಲದೆ ಈಗಿನ ಮಾರುಕಟ್ಟೆಯ ( marketing system) ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದ ಗಗನ ಮತ್ತು ಮೇಘನ ತಮ್ಮ ತಂದೆ ತಾಯಿಗಳೊಂದಿಗೆ ಸೇರಿಕೊಂಡು ಬೆಳೆದ ಔಷಧಿ ಸಸ್ಯಗಳನ್ನು ಉತ್ತಮ ಬೆಲೆಯಲ್ಲಿ ಮಾರಾಟ ಮಾಡಿ ಯಶಸ್ಸನ್ನು ಕಂಡಿದ್ದಾರೆ. ಅಲ್ಲದೆ ಹತ್ತಾರು ಹಳ್ಳಿಗರಿಗೆ ಕೆಲಸವನ್ನು ಕೂಡ ನೀಡಿದ್ದಾರೆ. ಇದೀಗ ಗಗನ ಮತ್ತು ಮೇಘ ಕೃಷಿಯಲ್ಲಿ ತೋರಿಸಿದ ಆಸಕ್ತಿಗೆ ಮತ್ತು ಮಾಡಿದ ಸಾಧನೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Gagana aand megha inspirational story
Leave A Reply

Your email address will not be published.

error: Content is protected !!