ತಂದೆಯ ಒಪ್ಪಿಗೆ ಇಲ್ಲದೆ ಪ್ರಿಯಕರನನ್ನು ಮದುವೆಯಾದ ಮಗಳು. ನಂತರ ಅಪ್ಪ ಮಗಳಿಗೆ ಮಾಡಿದ್ದೇನು ನೋಡಿ

ದಿನವೂ ನಮ್ಮ ಸುತ್ತಮುತ್ತ ಅದೆಂಥ ಆಘಾತಕಾರಿ ಘಟನೆಗಳು ನಡೆಯುತ್ತವೆ ಅಂತ ಹೇಳುವುದೇ ಕಷ್ಟ. ಕೆಲವು ಘಟನೆಗಳನ್ನು ನೋಡಿದರಂತೂ ಸಂಬಂಧಗಳಿಗೆ ಬೆಲೆಯೇ ಇಲ್ಲವಾ ಅಂತ ಅನಿಸುತ್ತೆ. ನೆಲಮಂಗಲದಲ್ಲಿ ನಡೆದ ಒಂದು ಘಟನೆ ಯಾರಿಗಾದರೂ ಬಹಳ ದುಃಖವನ್ನ ತರುವಂತದ್ದು. ಯಾಕಂದ್ರೆ ನವವಿವಾಹಿತೆ ಮಗಳನ್ನೇ ಆಕೆಯ ಮನೆಯವರು ಅಪಹರಿಸಿದ್ದಾರೆ.

ಹೌದು, ನೆಲಮಂಗಲ ತಾಲೂಕಿನ ವೀರಸಾಗರ ನಿವಾಸಿಯಾದ ಜಲಜ ಪ್ರೀತಿಸಿ ಮದುವೆಯಾಗಿದ್ದಾರೆ. ನೆಲಮಂಗಲದ ನಿವಾಸಿಯಾಗಿರುವ ಗಂಗಾಧರ ಅವರನ್ನು ಜಲಜಾ ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ ಮದುವೆಗೆ ಆಕೆಯ ಪಾಲಕರು ಸುತಾರಾಂ ಒಪ್ಪಿಗೆ ನೀಡಲಿಲ್ಲ. ಹಾಗಾಗಿ ಪ್ರೀತಿಸಿದ ಜೀವಗಳು ಬೇರೆಯಾಗದೆ ತಾವೇ ಮದುವೆಯಾಗುವ ನಿರ್ದಾರ ಮಾಡಿದ್ದರು. ಸರಳವಾಗಿ ಮೇ 25ನೇ ತಾರೀಕಿಗೆ ಜಲಜ ತಾನು ಪ್ರೀತಿಸಿದ ಹುಡುಗ ಗಂಗಾಧರ ನೊಂದಿಗೆ ದೇವಸ್ಥಾನದಲ್ಲಿ ಮದುವೆಯಾಗಿ ಮೇ 30ರಂದು ನೆಲಮಂಗಲದ ನೋಂದಣಾಧಿಕಾರಿಗಳ ಕಚೇರಿಯಲ್ಲಿ ತಮ್ಮ ಮದುವೆಯನ್ನು ರಿಜಿಸ್ಟರ್ ಕೂದ ಮಾಡಿಸಿದರು.

ಇದಾದ ಬಳಿಕ ಗಂಗಾಧರ್ ಆಕೆಯ ಪತ್ನಿಯನ್ನು ತನ್ನ ಅಕ್ಕನ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಇನ್ನೇನು ಎಲ್ಲವೂ ಸುಖಾಂತ್ಯವಾಗುತ್ತದೆ ಎಂದು ನವದಂಪತಿಗಳು ಪರಸ್ಪರ ಸಂತೋಷದ ಘಳಿಗೆಯನ್ನು ಕಳೆಯಬೇಕು ಎನ್ನುವಷ್ಟರಲ್ಲಿ ನವವಿವಾಹಿತೆಯ ಮನೆಯವರೇ ಆಕೆಯನ್ನ ಅಪಹರಣ ಮಾಡಿದ್ದಾರೆ!. ಜಲಜಾ ಹಾಗೂ ಗಂಗಾಧರ್ ಇಬ್ಬರು ಗಂಗಾಧರ್ ಅವರ ಅಕ್ಕನ ಮನೆಯಲ್ಲಿ ಉಳಿದುಕೊಂಡಿದ್ದರು. ಗಂಗಾಧರ ಅವರ ಅಕ್ಕನ ಮನೆ ಬ್ಯಾಡರ್ ಹಳ್ಳಿಯ ವಿದ್ಯಾಮಾನ್ಯ ನಗರದಲ್ಲಿ ಇದೆ. ಇಲ್ಲಿಗೆ ಸುಮಾರು 20 ಜನರು ಏಕಾಏಕಿ ಆಕ್ರಮಣ ಮಾಡಿ ಅಲ್ಲಿಂದ ಜಲಜಾ ಅವರನ್ನು ಕರೆದೊಯ್ದಿದ್ದಾರೆ. ಇದನು ತಡೆಯಲು ಬಂದ ಎಲ್ಲರ ಮೇಲೆಯೂ ದಾ’ಳಿ ಮಾಡಿ ಅಲ್ಲಿಂದ ಮದುಮಗಳನ್ನೇ ಎಸ್ಕೇಪ್ ಮಾಡಿದ್ದಾರೆ.

ಈ ಘಟನೆಯ ಟ್ವಿಸ್ಟ್ ಎಂದರೆ ಈ ಅಪರಾಧವನ್ನು ಮಾಡಿಸಿದ್ದೇ ಜಲಜಾ ಅವರ ತಂದೆ. ಜಲಜಾ ಅವರ ತಂದೆ ದೇವರಾಜು ಹಾಗೂ ಅವರ ಸಂಬಂಧಿಕರಾದ ಮಹೇಶ್ ಹಾಗೂ ಸುರೇಶ್ ಎನ್ನುವವರು ದೊಡ್ಡ ಗ್ಯಾಂಗ್ ಒಂದನ್ನು ಕಟ್ಟಿಕೊಂಡು ಗಂಗಾಧರ ಅಕ್ಕನ ಮನೆ ಮೇಲೆ ದಾ’ಳಿ ಮಾಡಿ, ಗಂಗಾಧರ ಅವರ ಅಕ್ಕ ಸಾಕಮ್ಮ ಮೇಲೆಯೂ ಹಲ್ಲೆ ಮಾಡಿದ್ದಾರೆ. ಈಗಾಗಲೇ ಈ ಪ್ರಕರಣ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಪ್ರೀತಿಸಿ ಮದುವೆಯಾಗಿದ್ದಾರೆ, ಅದರಲ್ಲೂ ತಮ್ಮ ವಿರೋಧವನ್ನು ಕಟ್ಟಿಕೊಂಡು ತಮ್ಮ ಮಗಳು ತಮ್ಮ ಕೈಮೀರಿ ಹೋಗಿದ್ದಾಳೆ ಎಂಬುದನ್ನ ಅರಿತು ತಂದೆಯೇ ಇಂತಹ ಕೃತ್ಯವನ್ನು ಎಸಗಿದ್ದಾರೆ. ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆಯನ್ನು ನಡೆಸುತ್ತಿದ್ದಾರೆ. ನವವಿವಾಹಿತರಾದ ಜಲಜಾ ಹಾಗೂ ಗಂಗಾಧರ್ ಸುಖವಾಗಿ ಸಂಸಾರವನ್ನು ಆರಂಭಿಸುವ ಹೊತ್ತಿನಲ್ಲಿ ಬೇರೆಬೇರೆಯಾಗಿ ನೋವನ್ನು ಅನುಭವಿಸುವಂತ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

Leave a Comment

error: Content is protected !!