ತನ್ನ ಧರ್ಮವನ್ನು ಮುಚ್ಚಿಟ್ಟು ಹದಿ ಹರೆಯದ ಹಿಂದೂ ಬಾಲಕಿಯೊಂದಿಗೆ ವಿವಾಹವಾಗಲು ಪ್ರಯತ್ನಿಸಿದ 50ರ ವಯಸ್ಸಿನ ಮುಸಲ್ಮಾನ್

ನೂರು ಕಾಲ ಒಬ್ಬರಿಗೊಬ್ಬರು ಆಸರೆಯಾಗಿ ನಿಂತು, ಕಷ್ಟಕಾಲದಲ್ಲಿ ಕೈಹಿಡಿದು ಧೈರ್ಯವಾಗಿ ಎದುರಿಸಿ, ಇಬ್ಬರ ಕನಸನ್ನು ನನಸು ಮಾಡುವಲ್ಲಿ ಒಬ್ಬರಿಗೊಬ್ಬರು ಪ್ರೋತ್ಸಾಹಿಸುತ್ತಾ, ಪ್ರೀತಿಯ ಸುಖಮಯ ಜೀವನವನ್ನು ಸಾಗಿಸಲು ವಿವಾಹವಾಗುವ ಕಾಲವು ಕಳೆದು, ಮತಾಂತರಕ್ಕಾಗಿ ಹಣಕ್ಕಾಗಿ ಅಥವಾ ಇನ್ಯಾವುದೋ ದುರುದ್ದೇಶದ ಬೆನ್ನು ಹತ್ತಿ ಮೋಸದಿಂದ ವಿವಾಹವಾಗುವುದೆ ಹೆಚ್ಚಾಗಿದೆ.

‘ಲವ್ ಜಿಹಾದ್’ ಇದು ಹೊಸದಾಗಿ ಕೇಳುತ್ತಿರುವ ಶಬ್ದವಲ್ಲ ಹಿಂದೂ ಹೆಣ್ಣು ಮಕ್ಕಳನ್ನು ಮತಾಂತರಗೊಳಿಸಲು ತಮ್ಮ ಬಲೆಯಲ್ಲಿ ಬೀಳಿಸಿಕೊಂಡು, ಮನವೊಲಿಸಿ ವಿವಾಹವಾದ ಅದೆಷ್ಟೋ ಉದಾಹರಣೆಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಪೋಲಿಸ್ ಅಧಿಕಾರಿ ತಾನೆಂದು ಹೇಳಿಕೊಳ್ಳುತ್ತಾ 50ರ ವಯಸ್ಸಿನ ಧರ್ಮಾಂಧನೊಬ್ಬ ಅಪ್ರಾಪ್ತ ವಯಸ್ಸಿನ ಹಿಂದೂ ಬಾಲಕಿಯೊಬ್ಬಳನ್ನು ವಿವಾಹವಾಗಲು ಪ್ರಯತ್ನಿಸಿರುವ ಕಥೆ ಇಲ್ಲಿದೆ ಓದಿ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಝಾರ್ಖಂಡದ ಬೊಕಾರೋ ಜಿಲ್ಲೆಯಲ್ಲಿ 50 ವರ್ಷ ವಯಸ್ಸಿನ ಮುಸಲ್ಮಾನ್ ಗಂಡಸೊಬ್ಬ ತಾನು ಪೊಲೀಸ್ ಅಧಿಕಾರಿ ಎಂದು ಸುಳ್ಳು ಹೇಳಿ ಚಿಕ್ಕ ಬಾಲಕಿ ಒಬ್ಬಳನ್ನು ವಿವಾಹವಾಗಲು ಯೋಚಿಸಿ ಆಕೆಯ ಕುಟುಂಬಸ್ಥರ ವಿಶ್ವಾಸವನ್ನು ಗಳಿಸಿದನಂತೆ.

ಬಾಲಕಿಯ ತಾಯಿಯು ಸಾಲ ಪಡೆಯಲೆಂದು ಬ್ಯಾಂಕಿಗೆ ತೆರಳಿದ್ದಾಗ ಈ ಮುಸಲ್ಮಾನ್ ಆರೋಪಿಯ ಪರಿಚಯವಾಗಿತ್ತಂತೆ. ತಾನು ಸಂಜಯ್ ಬೆಸ್ರಾ ಎಂದು ಹೇಳಿಕೊಂಡಿದ್ದಲ್ಲದೆ ವಧುವಿನ ತಾಯಿಗೆ ಸಾಲ ದೊರಕಿಸಿ ಕೊಡುವುದಾಗಿ ಭರವಸೆಯನ್ನು ನೀಡಿ ತಾನೊಬ್ಬ ಪೊಲೀಸ್ ಅಧಿಕಾರಿ ಎಂದು ಹೇಳುತ್ತಾ ನಂಬಿಸಿದನಂತೆ. ಹೀಗೆ ಮನೆಯ ಉಳಿದ ಸದಸ್ಯರ ನಂಬಿಕೆಯನ್ನು ಗಳಿಸಿಕೊಂಡು ಮೋಸದಿಂದಲೇ ಹದಿಹರೆಯದ ಬಾಲಕಿಯನ್ನು ವಿವಾಹವಾಗಲು ಎಲ್ಲಾ ತಯಾರಿ ನಡೆಸಿಕೊಂಡು, ಹಾರ ಬದಲಿಸುವ ಕಾರ್ಯದ ವರೆಗೂ ಬಂದು ನಿಂತಿದ್ದನಂತೆ.

ಆದರೆ ಇದೇ ರೀತಿ ಹಿಂದೊಮ್ಮೆ ತನ್ನ ಹೆಸರು, ಉದ್ಯೋಗ, ಜಾತಿ, ಧರ್ಮವನ್ನು ಬಚ್ಚಿಟ್ಟು ಅಪ್ರಾಪ್ತ ವಯಸ್ಸಿನ ಹಿಂದೂ ಬಾಲಕಿಯೊಬ್ಬಳನ್ನು ವಿವಾಹ ಮಾಡಿಕೊಳ್ಳಲು ಹೋಗಿ ಜೈಲು ಶಿಕ್ಷೆಯನ್ನು ಕೂಡ ಅನುಭವಿಸಿರುವ ವಿಚಾರವು ಪೊಲೀಸರಿಗೆ ನೆನಪಿದ್ದು, ಇದೀಗ ಮುಸಲ್ಮಾನ್ ಮತಾಂಧನು ಮತ್ತೊಮ್ಮೆ ಈ ರೀತಿಯ ಪ್ರಯತ್ನಕ್ಕೆ ಕೈ ಹಾಕಿರುವ ಸುದ್ದಿಯು ಕೇಳಿಬಂದಿದ್ದೆ ಪೊಲೀಸರು ಸ್ಥಳಕ್ಕೆ ಧಾವಿಸಿದರಂತೆ. ಆದರೆ ಆರೋಪಿಯು ಪೊಲೀಸರು ಆಗಮಿಸುತ್ತಿರುವ ವಿಚಾರ ತಿಳಿಯುತ್ತಲೇ ವಿವಾಹ ಸ್ಥಳದಿಂದ ಪರಾರಿಯಾಗಿದ್ದು, ಮೋಸದ ಮದುವೆಯ ಬಲೆಯಿಂದ ಬಾಲಕಿಯು ಬಚಾವಾಗಿದ್ದಾಳೆ.

Leave a Comment

error: Content is protected !!