ಮಾಧ್ಯಮದಲ್ಲಿ ಹೆಚ್ಚು ಸುದ್ದಿ ಮಾಡ್ತಿರೋ ಸಂಗತಿಗಳಿವು

ಜಗತ್ತಿನಲ್ಲಿ ಏನೇನು ನಡೆಯುತ್ತಿದೆ ಎಂಬುದು ನಮಗೆ ಸುದ್ದಿ ಮಾಧ್ಯಮಗಳು ಅಥವಾ ಪತ್ರಿಕೆಗಳಿಂದ ಸಿಗುತ್ತದೆ. ಅತಿ ಹೆಚ್ಚು ಜನಪ್ರಿಯತೆಯನ್ನು ಹೊಂದಿ, ಹೊಸ ಬಗೆಯ ಸುದ್ದಿಗಳನ್ನು ಹರಡುತ್ತವೆ ಮಾಧ್ಯಮಗಳು. ಅದರಂತೆ ಕೆಲವು ಮುಖ್ಯ ವಿಷಯಗಳ ಬಗೆಗೆ ಪಬ್ಲಿಕ್ ಟಿವಿ ಚಾನಲ್ ನ ರಂಗನಾಥ್ ಹಾಗೂ ಸಹೋದ್ಯೋಗಿ ಮಾತನಾಡಿದ್ದಾರೆ ಹಾಗೂ ಮಾಹಿತಿ ನೀಡಿದ್ದಾರೆ. ಹಾಗಾದರೆ ಮುಖ್ಯ ವಿಷಯಗಳ ಬಗೆಗೆ ಇಲ್ಲಿರುವ ಮಾಹಿತಿಯ ಮೂಲಕ ತಿಳಿಯೋಣ.

ಈ ನಡುವೆ ನಿರೂಪಕಿ ಹಾಗೂ ನಟಿಯಾದ ಅನುಶ್ರೀ ಅವರ ಕಾಲ್ ಡಿಟೇಲ್ಸ್ ನೋಡಿದಾಗ 4 ರಾಜಕಾರಣಿಗಳ ಜೊತೆ 38 ನಂಬರ್ ಗಳು ಯಾವುದೆ ಹೆಸರಿನಿಂದ ಸೇವ್ ಆಗಿಲ್ಲ ಎಂದು ತಿಳಿದುಬಂದಿದೆ. ಮಾಹಿತಿ ಹೊರಬರದಂತೆ ನೋಡಿಕೊಳ್ಳಬೇಕೆಂದು ಪೋಲಿಸರಿಗೆ ದೆಹಲಿಯಿಂದ ಒತ್ತಡ ಬರುತ್ತಿದೆ. ಡ್ರಗ್ಸ್ ದಂದೆಯ ಜಾಲ ದೊಡ್ಡದಾಗಿದೆ. ಅದರ ಮೂಲ ಎಲ್ಲಿಯವರೆಗೆ ಹರಡಿದೆ ಎಂಬುದರ ಕುರಿತು ವಿಚಾರಣೆ ನಡೆಯುತ್ತಿದೆ ಎಂದು ಕಮಿಷನರ್ ವಿಕಾಸ್ ಕುಮಾರ್ ಹೇಳಿಕೆ ಕೊಟ್ಡಿದ್ದಾರೆ. ಇದರ ಮೇಲೆ ಡಿಕೆ ಶಿವಕುಮಾರ್ ಅವರು ಚಿತ್ರರಂಗ ಬಿಟ್ಟು ಬೇರೆ ಯಾವುದೇ ರಂಗಗಳಲ್ಲಿ ಇರುವವರು ಡ್ರಗ್ಸ್ ತೆಗದುಕೊಳ್ಳದೆ ಇದ್ದರಾ? ಅವರು ಯಾರೂ ಸಿಗದೆ ಇರುವುದು ತಮಗೆ ಆಶ್ಚರ್ಯಕರವಾಗಿ ಕಂಡಿದೆ ಎಂದು ಹೇಳಿದ್ದರೆ. ಡಿಕೆ ಸುರೇಶ್ ಅವರು ಪೋಲಿಸರು ಕಳ್ಳ ಪೋಲಿಸ್ ಆಟ ಆಡುತ್ತಿದ್ದಾರೆ ಅವರಿಗೆ ಡ್ರಗ್ಸ್ ದಂದೆಯ ಎಲ್ಲಾ ಮಾಹಿತಿಗಳು ಗೊತ್ತಿದೆ ಎಂದು ಹೇಳಿದ್ದಾರೆ. ಆದರೆ ಕಳ್ಳ ಪೋಲಿಸ್ ಆಟ ಬಿಜೆಪಿ ಸರ್ಕಾರದಲ್ಲಿ ಮಾತ್ರ ಅಲ್ಲ ಎಲ್ಲಾ ಸರ್ಕಾರದ ಸಮಯದಲ್ಲೂ ನಡೆದಿರುವುದೆ ಆಗಿದೆ. ಇಷ್ಟು ದೊಡ್ಡದಾಗಿ ಬೆಳೆದಿರಲಿಲ್ಲ ಎಂಬುದು ನಿಜ. ಸಣ್ಣ ಪ್ರಮಾಣದಲ್ಲಿ ಡ್ರಗ್ಸ್ ಹಿಡಿಯುವುದು, ಕ್ರ ಕೈಗೊಳ್ಳುವ ಪ್ರಕ್ರಿಯೆ ನಡೆಯುತ್ತಲೆ ಬಂದಿದೆ ಎಂದು ರಂಗನಾಥ್ ಹೇಳುತ್ತಾರೆ. ಡ್ರಗ್ಸ್ ಸಮಾಚಾರಗಳ ಮಧ್ಯೆ ಸಿಸಿಬಿ ಇನ್ಸ್ಪೆಕ್ಟರ್ ಶಿವಪ್ರಕಾಶ್ ಅವರನ್ನು ವರ್ಗಾವಣೆ ಮಾಡಲಾಗಿದೆ ಅವರು ಚಾರ್ಜ್ ವಹಿಸಿಕೊಳ್ಳಲಿಲ್ಲ ಹಾಗೆಯೆ ರಮೇಶ್ ಪ್ರಸಾದ್ ಅವರನ್ನು ಚಾರ್ಜ್ ತೆಗೆದುಕೊಳ್ಳಲು ನಿರಾಕರಿಸಲಾಗಿದೆ ಇದರಿಂದ ಒತ್ತಡ ಹೆಚ್ಚಾಗಿದೆ ಹಾಗೂ ವಿವಾದಗಳಿಗೆ ಎಡೆ ಮಾಡಿಕೊಟ್ಟಿದೆ. ಪ್ರಾಥಮಿಕ ವಿಚಾರಣೆ ಪ್ರಾರಂಭಿಸಿದಾಗ ವರ್ಗಾವಣೆ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂಬುದು ರಂಗನಾಥ್ ಅವರ ವಾದ. ಆರೋಪಿಗಳಾದ ವೀರೆನ್ ಖನ್ನಾ ಮತ್ತಿತರರು ಡ್ರಗ್ಸ್ ದಂದೆಯ ಜೊತೆಗೆ ಹವಾಲಾ ದಂದೆಯನ್ನು ಮಾಡಿ ಸಾವಿರಾರು ಕೋಟಿ ಹಣ ಮಾಡಿದ್ದಾರೆಂಬ ಹೊಸ ಸುದ್ದಿಯೊಂದು ಹರಿದಾಡುತ್ತಿದ್ದು. ಇದನ್ನು ಮುಚ್ಚಿಡಲು ಇ- ಮೇಲ್ ಮತ್ತು ಪಾಸ್ವರ್ಡ್ ಕೊಡಲು ನಿರಾಕರಿಸುತ್ತಿದ್ದಾರಂತೆ, ಕೊಲಂಬೊದ ಕ್ಯಾಸಿನೊ ಜೊತೆ ಸಂಬಂಧ ಇತ್ತು ಹಾಗೆ ಇದರಲ್ಲಿ ಒಬ್ಬ ನಟಿಯು ಇದ್ದಾರೆ ಮುಂತಾದ ಮಾಹಿತಿಗಳು ಹರಿದಾಡುತ್ತಿವೆ. ಎಲ್ಲವೂ ಗೊತ್ತಾಗುತ್ತಿದೆ ಆದರೆ ಉಳಿದವರ ಸುಳಿವು ಎಲ್ಲಿದೆ. ಅವರನ್ನು ಬಂಧಿಸಿಲ್ಲ ಏಕೆ, ಮಧ್ಯೆ ಶಿವಪ್ರಕಾಶ್ ಹಾಗೂ ಆದಿತ್ಯ ಆಳ್ವ ಸರೆಗೆ ಸಿಕ್ಕಿಲ್ಲ ಏನು ಮಾಡುತ್ತಾರೆ ನೋಡೊಣ ಎಂದರು ರಂಗನಾಥ್.

ಇವರ ಮಧ್ಯೆ ಕಾಂಗ್ರೆಸ್ ಶಾಸಕರಾದ ಅಮರೇಗೌಡ ಬಯ್ಯಾಪುರ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪ್ರತಿಯೊಬ್ಬ ಮಾನವನಿಗೂ ಡ್ರಗ್ಸ್ ಅವಶ್ಯಕತೆ ಇದೆ, ರಾಜರ ಕಾಲ ಅಂದರೆ ಬಹಳ ಹಿಂದಿನ ಕಾಲದಿಂದಲೂ ಡ್ರಗ್ಸ್ ಸೇವನೆ ಇತ್ತು, ನಟಿಯರು ಅಗತ್ಯಕ್ಕಿಂತ ಹೆಚ್ಚು ಬಳಸಿರುವುದು ತಪ್ಪು, ಅರೆಸ್ಟ್ ಆದ ನಟಿಯರು ಒಳ್ಳೆಯ ಸಂದೇಶಗಳನ್ನು ಹೊಂದಿದ ಚಿತ್ರ ನೀಡಿದ್ದಾರೆ, ಅವರನ್ನು ಗೌಪ್ಯವಾಗಿ ವಿಚಾರಿಸಬಹುದಿತ್ತು ಎಂದಿದ್ದಾರೆ. ಆದರೆ ಹೇಳುವ ಮಾತನ್ನು ಸ್ವಲ್ಪ ಯೋಚಿಸಿ ಹೇಳಬೇಕಿತ್ತು. ಹಳೆಯ ಕಾಲದಲ್ಲಿ ಹೆರಾಯಿನ್, ಓಪಿಯಂ, ಹ್ಯಾಸ್ಯುಸ್ ಎಲ್ಲವನ್ನು ಬಳಸಲಿಲ್ಲ. ಮನುಷ್ಯನಿಗೆ ಬೇಕಾದ ಡ್ರಗ್ಸ್ ಎಂದರೆ ಔಷಧಿಗಳು ಹೆರಾಯಿನ್ ಮುಂತಾದವುಗಳು ಅಲ್ಲ ಎಂದು ಪಬ್ಲಿಕ್ ಟಿವಿ ರಿಪೋರ್ಟರ್ ಹೇಳಿದ್ದಾರೆ. ಜೊತೆಗೆ ಒಳ್ಳೆಯ ಸಂದೇಶ ಹೊಂದಿದ ಸಿನಿಮಾ ಮಾಡುವುದಕ್ಕೂ ಡ್ರಗ್ಸ್ ಬಳಸುವುದಕ್ಕೂ ಸಂಬಂಧವಿಲ್ಲ, ಸಾಮಾನ್ಯ ಜನತೆಗೆ ಹಾಗೂ ಅವರಿಗೆ ಬೇರೆ ಕಾನೂನೂ ಇಲ್ಲ ಎಂದಿದ್ದಾರೆ ರಂಗನಾಥ್. ಲಾಕ್ಡೌನ್ ನಲ್ಲಿ ಸಾಲದ ಬಡ್ಡಿಯ ಮೇಲೆ ಚಕ್ರಬಡ್ಡಿಯನ್ನು ವಿಧಿಸಲಾಗಿತ್ತು ಈಗ ಉದಾರ ಮನಸ್ಸಿನವರಂತೆ ಚಕ್ರಬಡ್ಡಿಯನ್ನು ತೆಗೆಯುವುದಾಗಿ ಹೇಳಿಕೆ ನೀಡಿದೆ. ಸುಪ್ರೀಂ ಕೋರ್ಟ್ ಗೆ ಆದೇಶ ನೀಡಲಾಗಿದೆ. ಆದರೆ ಲಾಕ್ಡೌನ್ ಪರಿಸ್ಥಿತಿಯಲ್ಲಿ ಬಡ್ಡಿಯನ್ನು ಮನ್ನಾ ಮಾಡಬೇಕೆಂಬುದು ಮಾಧ್ಯಮದ ಒತ್ತಡವಾಗಿತ್ತು. ಅತಿ ಉದ್ದದ ಸರ್ವ ಋತು ಹೆದ್ದಾರಿ ಸುರಂಗಮಾರ್ಗ ಇವತ್ತು ಪ್ರದಾನಿ ಮೋದಿಯವರಿಂದ ನೆರವೇರಿತು. ಇದು ಅಟಲ್ ಬಿಹಾರಿ ವಾಜಪೇಯಿ ಅವರ ಕನಸಾಗಿದ್ದು ಇಪ್ಪತ್ತು ವರ್ಷಗಳ ನಂತರ ನೆರವೇರಿತು ಎನ್ನಲಾಗುತ್ತಿದೆ. ಜಗತ್ತಿನಲ್ಲಿ ಅತ್ಯಂತ ಉದ್ದದ ಸುರಂಗ ಮಾರ್ಗ ಇದಾಗಿದೆ. ಲಡಾಕ್ ನಲ್ಲಿ ಇರುವ ಸೈನಿಕರಿಗೆ ಶಸ್ತ್ರಾಸ್ತ್ರ ಹಂಚಿಕೆ ಮಾಡಲು ಸಹಾಯಕವಾಗಿದೆ ಹೇಗೆಂದರೆ ಲಡಾಕ್ ಗೆ ಹೋಗುವ ದಾರಿಯಲ್ಲಿ ಐದು ತಾಸಿನವರೆಗೆ ಕಡಿಮೆ ಸಮಯ ಸಾಕಾಗುತ್ತದೆ ಎನ್ನಲಾಗಿದೆ.

ಹತ್ರಾಸ್ ಅತ್ಯಾಚಾರ ಪ್ರಕರಣದ ಸಲುವಾಗಿ ದೊಡ್ಡ ಗಲಾಟೆಯೆ ನಡೆಯುತ್ತಿದೆ. ಹತ್ರಾಸ್ ಗೆ ಮಾಧ್ಯಮಗಳು ಅಥವಾ ರಾಜಕಾರಣಿಗಳು ಯಾರೂ ಭೇಟಿ ನೀಡಬಾರದು ಎಂಬ ನಿರ್ಬಂಧ ಹೇರಲಾಗಿತ್ತು. ಇವತ್ತು ತೆಗೆದಾಗ ಮಾಧ್ಯಮಗಳೊಂದಿಗೆ ಮೃತ ಕುಟುಂಬಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅವರು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ರಾಮ ಮಂದಿರ ಕಟ್ಟಿಸಿ ರಾಮರಾಜ್ಯ ನಿರ್ಮಾಣ ಮಾಡುತ್ತೇವೆ ಎಂದರು ಆದರೆ ಏನೂ ಮಾಡುತ್ತಿಲ್ಲ ಎಂದು ಹೇಳಿದರು. ಇನ್ನೂ ಆರ್.ಆರ್ ನಗರದ ಉಪಚುಣಾವಣೆಗೆ ಕಾಂಗ್ರೆಸ್ ಕಡೆಯಿಂದ ಡಿ.ಕೆ. ರವಿಯ ಪತ್ನಿಗೆ ಟಿಕೇಟ್ ನೀಡಲಾಗುತ್ತಿದೆ ಎಂದು ಸುದ್ದಿ ಕೇಳಿಬರುತ್ತಿದೆ. ಶಿರಾದಲ್ಲಿಯೂ ಚುಣಾವಣೆ ರಂಗೇರಿದೆ. ಎಂಪಿ ಮೂಡಲಗಿರಿಯಪ್ಪ ತಮ್ಮ ಮಗ ಅರುಣ್ ಗೌಡನ್ನು ಜೆಡಿಎಸ್ ನಿಂದ ಬಿಜೆಪಿಗೆ ಸೇರಿಸಿಕೊಂಡು ಶಿರಾ ಕ್ಷೇತ್ರದಲ್ಲಿ ನಿಲ್ಲಿಸಿದ್ದಾರೆ. ಬಿಎಸ್ ಯಡಿಯೂರಪ್ಪ ಸಂಪುಟ ಸರ್ಜರಿ ವಿಳಂಬ. ಇತ್ತ ಕಡೆ ಕರೋನಾ ಸೊಂಕು ಆರು ಅರ್ಧ ಲಕ್ಷದ ಗಡಿ ದಾಟಿದೆ. ಇದರ ಮಧ್ಯೆ ಮೈಸೂರಿನಲ್ಲಿ ದಸರಾ ಹಿತಮಿತವಾಗಿ ನಡೆಯುತ್ತಿವೆ. ಆದರೆ ಮಾವುತರೂ ಟೆಸ್ಟ್ ಗೆ ನಿರಾಕರಿಸಿದ್ದರು. ಅವರಿಗೂ ಟೆಸ್ಟ್ ನಡೆಸಿ ರಿಪೋರ್ಟ್ ಗೆ ಕಾಯುತ್ತಿದ್ದಾರೆ. ಹತ್ತು ಸಾವಿರ ಕರೋನಾ ಕೇಸ್ ಪತ್ತೆಯಾಗಿದೆ ಹಾಗೂ ಕರೋನಾಗೆ ನೂರು ಜನ ಬಲಿಯಾಗಿದ್ದಾರೆ. ಎಲ್ಲಾ ಕಡೆಯಲ್ಲೂ ಸಾವಿನ ಸಂಖ್ಯೆ ಏರುತ್ತಿದೆ, ನಿಯಂತ್ರಣ ಮಾಡಲಾಗುತ್ತಿದೆ ಎಂದು ಅಂದುಕೊಂಡಿದೆ ಸರ್ಕಾರ ಎಂದರು ರಂಗನಾಥ್. ಶಿಕ್ಷಣ ಇಲಾಖೆಯ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳದೆ ಶಾಲಾ- ಕಾಲೇಜುಗಳು ಪ್ರಾರಂಭವಾಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಬೆಂಗಳೂರಿನಲ್ಲಿ ಮಾಸ್ಕ್ ಹಾಕದವರಿಗೆ ದಂಡ ಹಾಕಲಾಯಿತು, ಸಾಮಾಜಿಕ ಅಂತರ ಮರೆಯಲಾಗುತ್ತಿದೆ. ಧಾರವಾಡದಲ್ಲಿ ಡಿಕೆಶಿ ಸ್ವಾಗತಕ್ಕೆ ಸಾಮಾಜಿಕ ಅಂತರ ಮರೆತಿದ್ದರು. ಜನರಿಗೆ ಜಾಗ್ರತೆ ಮೂಡಿಸಿ, ಲೀಡರ್ ಗಳು, ಅಧಿಕಾರಿಗಳು, ದೊಡ್ಡ ದೊಡ್ಡವರಿಗೂ ದಂಡ ನೀಡಿ ಎಂದು ರಂಗನಾಥ್ ಹೇಳಿದರು. ಚಿತ್ರರಂಗದಲ್ಲಿ ಬರಹಗಾರರಾದ ಕೆ. ಕಲ್ಯಾಣ್ ಅವರ ಕುಟುಂಬದಲ್ಲಿ ವಿವಾದ ಶುರುವಾಗಿದೆ ಇದರ ಮೇಲೆ ಕೆ. ಕಲ್ಯಾಣ್ ಅವರು ಕೊರ್ಟ್ ನಲ್ಲಿಯೆ ವಿವಾದ ಬಗೆ ಹರಿಯಲಿ ಎಂದು ತಿಳಿಸಿದ್ದಾರೆ. ಹೆಸರಾಂತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ವರದಿ ಮರುಪರೀಕ್ಷೆಗೆ ಒಳಪಡಿಸಿದಾಗ ಅವರದು ಆತ್ಮಹತ್ಯೆ ಎಂದು ವರದಿಯಾಗಿದೆ. ಇದರ ಮೇಲೆ ಮತ್ತೆ ಆತ್ಮಹತ್ಯೆಗೆ ಕಾರಣ ಹಾಗೂ ವಿವಾದ ಆಗುತ್ತಿರುವ ಡ್ರಗ್ಸ್ ವಿಷಯದ ಬಗ್ಗೆ ಮಾಹಿತಿ ವಿಚಾರಣೆ ಆಗಬೇಕಿದೆ ಎಂದರು ರಂಗನಾಥ್. ಆನೆಮರಿಯೊಂದು ಕಾಲಿನ ಸ್ವಾಧೀನ ಕಳೆದುಕೊಂಡು ಹಾಸನ ಜಿಲ್ಲೆಯ ಕಾಫಿ ತೋಟದಲ್ಲಿಐದು ದಿನದಿಂದ ನೋವು ಅನುಭವಿಸುತ್ತಿತ್ತು. ತಾಯಿ ಆನೆಯು ಹಾಲೂಣಿಸಲು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಪಬ್ಲಿಕ್ ನ್ಯೂಸ್ ನಲ್ಲಿ ವರದಿ ಮಾಡಿದಾಗ ಅರಣ್ಯ ಇಲಾಖೆ ಬಂದು ಆನೆ ಮರಿಯ ಚಿಕಿತ್ಸೆಗೆ ಮುಂದಾಗಿದೆ ಹಾಗೂ ಎಕ್ಸರೆ ತೆಗೆಯಲಾಗಿದೆ. ಸಕ್ಕರೆ ಬೈಲ್ ಅಭಯಾರಣ್ಯಕ್ಕೆ ಸೇರಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.

ಇವುಗಳು ಕೆಲವು ಇತ್ತೀಚಿನ ಬದಲಾವಣೆಗಳು ಹಾಗೂ ಸುದ್ದಿಯಾಗಿದೆ. ಎಲ್ಲಾ ಸುದ್ದಿಗಳ ಮಾಹಿತಿ ತಿಳಿದಿರಲು ಮಾದ್ಯಮಗಳು ನಮಗೆ ಸಹಾಯ ಮಾಡುತ್ತವೆ. ಎಲ್ಲದರ ಬಗೆಗೂ ಅರಿವು ಮೂಡಿಸಿಕೊಂಡಿರೋಣ ಅಗತ್ಯ ಬಂದಾಗ ಸಹಾಯಕ್ಕೆ ಬರುತ್ತದೆ.

Leave a Comment

error: Content is protected !!