ತನ್ನ ಗಂಡನ ಕಥೆ ಮುಗಿಸೋಕೆ ಈಕೆ ಕೊಟ್ಟ ಹಣವೆಷ್ಟು ಗೊತ್ತಾ! ಅಬ್ಬಬ್ಬಾ ಎಂತಹ ಪತಿವ್ರತೆ

ಇಂದು ಹಣಕ್ಕೆ ಇರುವಷ್ಟು ಮೌಲ್ಯ ಯಾವ ಸಂಬಂಧಕ್ಕೂ ಇಲ್ಲ. ಯಾಕಂದ್ರೆ ಹಣವೊಂದಿದ್ದರೆ ಸಾಕು ಹೇಗಾದರೂ ಜೀವನ ಮಾಡಬಹುದು ಅನ್ನೋದು ಹಲವರ ತಲೆಯಲ್ಲಿ ಇರುವ ವಿಚಾರ. ಹಾಗಾಗಿ ಸಂಬಂಧಗಳಿಗಿಂತ ಹಣಕ್ಕೆ ಹೆಚ್ಚಿನ ಬೆಲೆ ಕೊಡುತ್ತಾರೆ. ಇದಕ್ಕಾಗಿ ಗಂಡ, ಹೆಂಡತಿಯನ್ನು ಹೆಂಡತಿ ಗಂಡನನ್ನ ಅಥವಾ ಹತ್ತಿರದ ಸಂಬಂಧಿಗಳನ್ನು ಕಳೆದುಕೊಳ್ಳುವುದು ಅಥವಾ ಬೆದರಿಕೆ ಒಡ್ಡುವುದು ಇಂಥ ವಿಚಾರಗಳು ಸಹಜವಾಗಿಬಿಟ್ಟಿದೆ. ಇಲ್ಲಿ ನೋಡಿ ಗಂಡನ ಆಸ್ತಿಗಾಗಿ, ತನ್ನ ಸಾಲವನ್ನೆಲ್ಲ ತೀರಿಸಿ ಕೊಳ್ಳಬೇಕು ಎನ್ನುವ ಇರಾದೆಯಿಂದ ಗಂಡನನ್ನ ಮುಗಿಸಲು ಸುಪಾರಿಯನ್ನು ಕೊಟ್ಟಿದ್ದಳು ಬೆಂಗಳೂರಿನ ಈ ಮಹಿಳೆ.

ಪತಿಯನ್ನು ಮುಗಿಸುವುದಕ್ಕೆ ಸುಪಾರಿ ಕೊಟ್ಟಿದ್ದ ಆಕೆಯ ಹೆಸರು ಮಮತಾ. ಆಕೆ ಬೆಂಗಳೂರಿನ ಟಿ. ದಾಸರಹಳ್ಳಿಯ ನಿವಾಸಿ. ಆಕೆಯ ಗಂಡ ಮುಕುಂದ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ ಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಎಪ್ ಡಿ ಎ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಕುಂದ ಅವರು ತಮ್ಮ ಸ್ಯಾಂಟ್ರೋ ಕಾರ್ ನಲ್ಲಿ ದಿನವೂ ತನ್ನ ಸಹೋದ್ಯೋಗಿಗಳೊಂದಿಗೆ ಕೆಲಸಕ್ಕೆ ಹೋಗಿ ಬರುತ್ತಿದ್ದರು.

ಹೀಗೆ ಕೆಲಸದಿಂದ 6:00 ಗಂಟೆಗೆ ವಾಪಸಾಗುವಾಗ ದೊಡ್ದಬಳ್ಳಾಪುರದ ಬಳಿ ಅವರ ಕಾರ್ ಮೇಲೆ ಬಿಳಿಯ ಬಣ್ಣದ ಕಾರಿನಲ್ಲಿ ಬಂದ ಕೆಲವು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡಿದ್ದಾರೆ. ಅದೃಷ್ಟವಶಾತ್ ಸ್ಥಳಕ್ಕೆ ಸ್ಥಳೀಯರು ಬಂದಿದ್ದಕ್ಕೆ ದುಷ್ಕರ್ಮಿಗಳು ಮುಕುಂದ ಅವರ ಪ್ರಾಣಕ್ಕೆ ಅಪಾಯ ಮಾಡದೆ ಓಡಿ ಹೋಗಿದ್ದಾರೆ. ಇದು ದರೋಡೆಗಾಗಿ ಮಾಡಿದ ಪ್ರಯತ್ನ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ವಿಚಾರಣೆಯ ವೇಳೆ ಬಯಲಾದ ಸತ್ಯವೇ ಬೇರೆ!

ಮುಕುಂದ ಅವರ ಪತ್ನಿ ಮಮತಾಳೆ ತನ್ನ ಗಂಡನ ಪಾಲಿಗೆ ಯಮ ಆಗುವುದಕ್ಕೆ ಹೊರಟಿದ್ದಳು. ತನ್ನ ಸ್ನೇಹಿತೆ ತಸ್ಲೀಮಾ ಬಳಿ ಬರೋಬ್ಬರಿ ನಲವತ್ತು ಲಕ್ಷ ರೂಪಾಯಿ ಕೊಟ್ಟು ತನ್ನ ಗಂಡನ ಕಥೆ ಮುಗಿಸುವಂತೆ ಭರ್ಜರಿ ಸುಪಾರಿ ನೀಡಿದ್ದಳು. ಈ ಪ್ರಕರಣ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಈಗಾಗಲೇ ಮಮತಾ, ಆಕೆಯ ಸ್ನೇಹಿತೆ ತಸ್ಲೀಮಾ, ಸುಪಾರಿ ಹಂ’ತ’ಕರಾದ ಮೌಲ, ಸೈಯದ್ ನಯಿಮ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಇನ್ನು ವಿಚಾರಣೆಯ ವೇಳೆ ಮಮತಾ ತನ್ನ ಗಂಡ ತನಗೆ ಅವಮಾನ ಮಾಡುತ್ತಿದ್ದರು ನನಗೆ ಬೈತಿದ್ರು, ಅವರ ಟಾ’ರ್ಚ’ರ್ ಸಹಿಸೋಕೆ ಆಗುತ್ತಿರಲಿಲ್ಲ ಅಂತ ತನ್ನ ಸ್ವಂತ ಗಂಡನನ್ನು ಮುಗಿಸಲು ಸ್ಕೆಚ್ ರೂಪಿಸಿರುವುದಾಗಿ ಹೇಳಿಕೆ ಕೊಟ್ಟಿದ್ದಾಳೆ. ಆದರೆ ಇದರ ಹಿಂದೆ ಇರುವ ಕಾರಣ ಬೇರೆನೇ ಇದೆ ಮೂಲತಃ ಮಮತಾ ಗೆ ತನ್ನ ಗಂಡನ ಆಸ್ತಿ ಮತ್ತು ಹಣವನ್ನು ಕಬಳಿಸಬೇಕೆನ್ನುವ ಆಸೆ ತುಂಬಾ ದಿನದಿಂದ ಇತ್ತು ಇದೇ ಕಾರಣಕ್ಕೆ ಅವಳು ಈ ಕೆಲಸ ಮಾಡಿದ್ದಾಳೆ ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

Leave a Comment

error: Content is protected !!