ರಾಧೇಶ್ಯಾಮ್ ಸಿನಿಮಾ ಸೋತ ಬೆನ್ನಲ್ಲೇ ಮತ್ತೊಂದು ಶಾಕ್ ಗೆ ಒಳಗಾದ ರೆಬೆಲ್ ಸ್ಟಾರ್ ಪ್ರಭಾಸ್

ಸ್ನೇಹಿತರೆ ಒಂದು ಕಾಲದಲ್ಲಿ ರೆಬೆಲ್ ಸ್ಟಾರ್ ಪ್ರಭಾಸ್ ರವರು ಬಾಹುಬಲಿ ಸರಣಿ ಚಿತ್ರಗಳ ಮೂಲಕ ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಕೂಡ ತಮ್ಮ ಪಾರುಪಥ್ಯವನ್ನು ಸಾಧಿಸಿದ್ದರು. ಅಷ್ಟರಮಟ್ಟಿಗೆ ಅವರ ಜನಪ್ರಿಯತೆ ಎನ್ನುವುದು ಎಲ್ಲಾ ಭಾಷೆಗಳಲ್ಲಿ ಕೂಡ ಹರಡಿತ್ತು.

ರಾಜ ಮೌಳಿ ನಿರ್ದೇಶನದ ಬಾಹುಬಲಿ ಸರಣಿ ಸಿನಿಮಾಗಳಲ್ಲಿ ನಟಿಸಿದ ನಂತರ ಅವರ ಜನಪ್ರಿಯತೆ ಹಾಗೂ ಬೇಡಿಕೆ ಎನ್ನುವುದು ಅಗತ್ಯಕ್ಕಿಂತ ಹೆಚ್ಚಾಗಿತ್ತು ಎಂದರೆ ತಪ್ಪಾಗಲಾರದು ಇದಕ್ಕಾಗಿ ಅದಾದ ನಂತರ ಬಂದ ಸಾಹೋ ಹಾಗೂ ರಾಧೇಶ್ಯಾಮ್ ಸಿನಿಮಾಗಳು ಹೇಳಿಕೊಳ್ಳುವಷ್ಟರ ಮಟ್ಟಿಗೆ ಪ್ರದರ್ಶನವನ್ನು ನೀಡಲಿಲ್ಲ. ಅದರಲ್ಲಿಯೂ ವಿಶೇಷವಾಗಿ ಇತ್ತೀಚಿಗಷ್ಟೇ ಬಿಡುಗಡೆ ಆಗಿರುವ ರಾಧೇಶ್ಯಾಮ್ ಸಿನಿಮಾ ಸಂಪೂರ್ಣವಾಗಿ ನೆಲಕಚ್ಚಿ ಸೋತು ಸುಣ್ಣವಾಗಿತ್ತು.

ರಾಧೇಶ್ಯಾಮ್ ಸಿನಿಮಾ ಸೋತ ಬೆನ್ನಲ್ಲೇ ಈಗ ರೆಬೆಲ್ ಸ್ಟಾರ್ ಪ್ರಭಾಸ್ ರವರಿಗೆ ಈಗ ಮತ್ತೊಂದು ಶಾಕಿಂಗ್ ಸಂಗತಿ ಎದುರಾಗಿದೆ. ಹೌದು ಮಿತ್ರರೇ ರೆಬೆಲ್ ಸ್ಟಾರ್ ಪ್ರಭಾಸ್ ರವರು ಇಂದು ತಮ್ಮ ಕುಟುಂಬದ ಅತ್ಯಂತ ಆಪ್ತರೊಬ್ಬರನ್ನು ಕಳೆದುಕೊಂಡಿದ್ದಾರೆ. ಇದು ಅವರ ದುಃಖವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ.

ಯಾಕೆಂದರೆ ರೆಬೆಲ್ ಸ್ಟಾರ್ ಪ್ರಭಾಸ್ ರವರು ಕಳೆದುಕೊಂಡಿರುವುದು ಅವರ ದೊಡ್ಡಪ್ಪ ಆಗಿರುವ ಕೃಷ್ಣಂ ರಾಜು ಅವರನ್ನು. ಹೌದು ಒಂದು ಕಾಲದಲ್ಲಿ ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದಂತಹ ದೊಡ್ಡಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದ ಕೃಷ್ಣಂರಾಜು ಅವರು ರೆಬೆಲ್ ಸಾರ್ ಪ್ರಭಾಸ್ ಅವರು ಚಿತ್ರರಂಗಕ್ಕೆ ಕಾಲಿಡಲು ಕೂಡ ಮೂಲ ಕಾರಣವಾಗಿದ್ದರು. ದೊಡ್ಡಪ್ಪನನ್ನು ಕಳೆದುಕೊಂಡಿರುವ ದುಃಖದಲ್ಲಿ ಪ್ರಭಾಸ್ ರವರು ಇದ್ದಾರೆ ಅವರಿಗೆ ಈ ದುಃಖವನ್ನು ಸಹಿಸುವ ಶಕ್ತಿ ದೇವರು ನೀಡಲಿ ಎಂಬುದಾಗಿ ಆಶಿಸೋಣ.

Leave A Reply

Your email address will not be published.

error: Content is protected !!