ಪತಿಯ ಸಾ ವಿಗೆ ನ್ಯಾಯ ಸಿಗದ ಹಿನ್ನೆಲೆಯಲ್ಲಿ ನೊಂದುಕೊಂಡು ರಿ ಪತ್ನಿ ಪುಷ್ಪಾ ಪತ್ರ ಬರೆದಿಟ್ಟು ಇಹ ಲೋಕ ತ್ಯಜಿಸಿದ್ದಾರೆ!

ಹುಬ್ಬಳ್ಳಿಯ ಗ್ರಾಮ ಪಂಚಾಯತ್ ಸದಸ್ಯ ಆಗಿದ್ದ ಹಾಗೂ ಇತ್ತೀಚಿಗಷ್ಟೇ ಮರಣವನ್ನು ಹೊಂದಿದ್ದ ದೀಪಕ್ ಪಟದಾರಿ ಪತ್ನಿ ಪುಷ್ಪ ಅವರು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ತನ್ನ ಪತಿಯ ಮರಣಕ್ಕೆ ನ್ಯಾಯ ಸಿಗದ ಹಿನ್ನೆಲೆಯಲ್ಲಿ ಹೀಗೆ ಮಾಡಿಕೊಂಡಿದ್ದಾರೆ ಎಂಬುದಾಗಿ ಅವರು ಬರೆದಿರುವ ಪತ್ರದ ಮೂಲಕ ತಿಳಿದು ಬಂದಿದೆ. ನನ್ನ ಮರಣಕ್ಕೆ ಪ್ರಮುಖವಾಗಿ ಮೇಟಿ ಕುಟುಂಬದ ಎಲ್ಲಾ ಸದಸ್ಯರು ಕಾರಣ ಎಂಬುದಾಗಿ ಪತ್ರದಲ್ಲಿ ಬರೆದಿಟ್ಟು ಜೀವವನ್ನು ಪುಷ್ಪ ಕಳೆದುಕೊಂಡಿದ್ದಾರೆ.

ನನ್ನ ಗಂಡ ಆಗಿರುವ ದೀಪಕ್ ಅವರನ್ನು ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಸಾಕಷ್ಟು ಹೀನಾಯವಾಗಿ ಮುಗಿಸಿದ್ದಾರೆ ಇದರ ಕುರಿತಂತೆ ಪೊಲೀಸರಿಗೆ ದೂರನ್ನು ದಾಖಲಿಸಿ ತನಿಖೆ ನಡೆಸುವಂತೆ ತಿಳಿಸಿದರು ಕೂಡ ಅವರು ಯಾವುದೇ ರೀತಿಯ ನ್ಯಾಯಪರವಾದ ಪ್ರತಿಕ್ರಿಯೆಯನ್ನು ನೀಡುತ್ತಿಲ್ಲ ಎಂಬುದಾಗಿ ಪುಷ್ಪ ನೊಂದುಕೊಂಡು ಬರೆದಿದ್ದಾರೆ. ನನ್ನ ಗಂಡನಿಗೆ ನನ್ನಿಂದ ನ್ಯಾಯ ಕೊಡಿಸಲು ಸಾಧ್ಯವಾಗಿಲ್ಲ ಎಂಬುದಾಗಿ ಬೇಸರದಿಂದ ಈ ಕೆಲಸ ಮಾಡಿಕೊಂಡಿದ್ದೇನೆ ಎಂಬ ಅರ್ಥದಲ್ಲಿ ಪುಷ್ಪ ಬರೆದುಕೊಂಡಿದ್ದಾರೆ.

ಇಂತಹ ಆಡಳಿತದಲ್ಲಿ ನನಗೆ ನ್ಯಾಯ ಸಿಗುತ್ತಿಲ್ಲ. ಈ ಕೆಟ್ಟ ಕೆಲಸ ಮಾಡಿರುವ ದುಷ್ಟರಿಗೆ ಜೀವಾವಧಿ ಶಿಕ್ಷೆ ಸಿಗುವವರೆಗೂ ಕೂಡ ನನ್ನ ದೇಹಕ್ಕೆ ಅಂತಿಮ ವಿಧಿ ವಿಧಾನ ಮಾಡಬೇಡಿ ಎಂಬುದಾಗಿ ಪಾತ್ರದಲ್ಲಿ ಪುಷ್ಪ ಬರೆದಿಟ್ಟು ಮರಣ ಹೊಂದಿದ್ದಾರೆ. ಇದೇ 28 ನೇ ತಾರೀಖಿನಂದು ಪುಷ್ಪ ತಮ್ಮ ನಿವಾಸದಲ್ಲಿ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ಹಿನ್ನಲೇನು ನೋಡುವುದಾದರೆ ಪುಷ್ಪ ಮೇಟಿ ಕುಟುಂಬದವರಾಗಿದ್ದು ಅವರ ಕುಟುಂಬಸ್ಥರ ಅಸಮಾಧಾನದ ನಡುವೆಯೂ ಕೂಡ ದೀಪಕ್ ಅವರನ್ನು ಮದುವೆಯಾಗಿದ್ದರು. ರಾಜಕೀಯ ಕಾರಣದಿಂದಾಗಿ ದೀಪಕ್ ಅವರನ್ನು ಮುಗಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಕೂಡ ದಾಖಲಿಸಲಾಗಿತ್ತು. ಈ ಸಂದರ್ಭದಲ್ಲಿ ದೀಪಕ್ ಅವರ ಸಹೋದರ ಹಾಗೂ ಪತ್ನಿ ಪುಷ್ಪ ಅವರು ಕೆಲವು ಸಂಘ ಸಂಸ್ಥೆಗಳ ಜೊತೆಗೆ ಸೇರಿ ಈ ವಿರುದ್ಧವಾಗಿ ಹೋರಾಟವನ್ನು ನಡೆಸಿ ತನಿಖೆ ನಡೆಸುವಂತೆ ಒತ್ತಾಯ ಮಾಡಿದ್ದರೂ ಕೂಡ ಯಾವುದೇ ಸಮರ್ಪಕವಾದ ಪ್ರತಿಕ್ರಿಯೆ ಪೊಲೀಸ್ ಇಲಾಖೆಯಿಂದ ಸಿಕ್ಕಿರಲಿಲ್ಲ. ಈಗ ಪುಷ್ಪಾ ತನ್ನ ಜೀವವನ್ನು ಕಳೆದುಕೊಂಡಿದ್ದು ಅವರ ಇಬ್ಬರು ಮಕ್ಕಳು ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ.

Leave a Comment

error: Content is protected !!