Kannada News: IAS ರೋಹಿಣಿ ಸಿಂಧೂರಿ Vs IPS ರೂಪಾ ನಡುವಿನ ಜಗಳ ಈಗ ಏನಾಗಿದೆ ಗೊತ್ತಾ?

Rohini Sindhuri ಐಎಎಸ್ ಅಧಿಕಾರಿ ಆಗಿರುವಂತಹ ರೋಹಿಣಿ ಸಿಂಧೂರಿ(Rohini Sindhuri) ಅವರು ಡಿ ರೂಪ ಅವರ ವಿರುದ್ಧ ಹೂಡಿದ್ದ ಮಾನ ನಷ್ಟ ಮೊಕದ್ದಮೆಯ ಹಿನ್ನೆಲೆಯಲ್ಲಿ ಬೆಂಗಳೂರು ಕೋರ್ಟ್ ಡಿ ರೂಪ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಏಪ್ರಿಲ್ 26ರಂದು ಆದೇಶಿಸಿದೆ. ಕಷ್ಟ ಸಮಯಗಳ ನಂತರ ರೋಹಿಣಿ ಸಿಂಧೂರಿ ಹಾಗೂ ಡಿ ರೂಪ(D Roopa) ರವರ ನಡುವಿನ ಸುದ್ದಿ ಪ್ರಚಾರಕ್ಕೆ ಬಂದಿದೆ.

ರೋಹಿಣಿ ಸಿಂಧೂರಿ(Rohini Sindhuri) ಅವರ ವಿರುದ್ಧವಾಗಿ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ತಮ್ಮ facebook ಸೇರಿದಂತೆ ಹಲವಾರು ಸಾಮಾಜಿಕ ಜಾಲತಾಣಗಳ ಖಾತೆಗಳ ಮುಖಾಂತರ ಡಿ ರೂಪ ಅವರು ಸಾಕಷ್ಟು ಆರೋಪಗಳನ್ನು ಮಾಡಿದ್ದರು. ಅವುಗಳಲ್ಲಿ ಬೆಂಗಳೂರಿನಲ್ಲಿ ಬಂಗಾಳಿ ನಿರ್ಮಾಣ ಹಾಗೂ ಜೆಡಿಎಸ್ ಶಾಸಕರೊಂದಿಗೆ ಶಾಂತಿ ಮಾತುಕತೆ, ಭೇಟಿ ಸೇರಿದಂತೆ ಹಲವಾರು ಆರೋಪಗಳು ಕೂಡ ಸೇರಿವೆ.

ಎಲ್ಲದಕ್ಕಿಂತ ಪ್ರಮುಖವಾಗಿ ಉಳಿದ ಪುರುಷ ಐಎಎಸ್ ಅಧಿಕಾರಿಗಳಿಗೆ ತಮ್ಮ ಖಾಸಗಿ ಫೋಟೋವನ್ನು ರೋಹಿಣಿ ಸಿಂಧೂರಿಯವರು ಕಳುಹಿಸಿದ್ದಾರೆ ಎನ್ನಲಾಗಿರುವಂತಹ ಫೋಟೋಗಳನ್ನು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಡಿ ರೂಪ(D Roopa) ಅವರು ಲೀಕ್ ಮಾಡುವ ಮೂಲಕ ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿ ಆಗುವಂತೆ ಕಾರಣಿಕರ್ತರಾಗಿದ್ದರು. ಈ ಕಾರಣಕ್ಕಾಗಿಯೇ ರೂಪ ಅವರು ಕ್ಷಮೆ ಕೇಳದಿದ್ದರೆ ಒಂದು ಕೋಟಿ ರೂಪಾಯಿ ಮಾನ ನಷ್ಟ ಮೊಕದ್ದಮೆಯನ್ನು ಹಾಕುವುದಾಗಿ ಹೇಳಿದ್ದ ರೋಹಿಣಿ ಸಿಂಧೂರಿ ಈಗ ಹೇಳಿದಂತ ಮಾತಿನಂತೆ ನಡೆದುಕೊಂಡಿದ್ದಾರೆ.

ಮ್ಯಾಜಿಸ್ಟ್ರೇಟರ್ ಮುಂದೆ ಇತ್ತೀಚಿಗಷ್ಟೇ ರೋಹಿಣಿ ಸಿಂಧೂರಿ ಅವರ ಪರವಾಗಿ ವಕೀಲರು ವಾದವನ್ನು ಮಾಡಿ ವಿರೂಪ ಅವರ ವಿರುದ್ಧ ಸಾಕಷ್ಟು ಸಾಕ್ಷಿಗಳನ್ನು ಒದಗಿಸಿ, ಈ ವಾದಕ್ಕೆ ಇನ್ನಷ್ಟು ಪುಷ್ಟಿಯನ್ನು ನೀಡಿದ್ದಾರೆ. ಆಗಿ ಡಿ ರೂಪ ಅವರ ವಿರುದ್ಧ ಸಮನ್ಸ್ ಜಾರಿಯಾಗಿದ್ದು ವಿಚಾರಣೆಗೆ ಇದೆ ಏಪ್ರಿಲ್ 26ರಂದು ನ್ಯಾಯಾಲಯದಲ್ಲಿ ಹಾಜರಿರಬೇಕು ಎನ್ನುವುದಾಗಿ ತೀರ್ಪನ್ನು ನೀಡಲಾಗಿದೆ.

Leave a Comment

error: Content is protected !!