ಹಾವು ಹಿಡಿಯುತ್ತಿದ್ದಂತೆ ಮಹಿಳೆಯರ ಮೈ ಮೇಲೆ ಬಂದ ನಾಗದೇವ. ವಿಚಿತ್ರವಾಗಿ ಡಾನ್ಸ್ ಮಾಡಿದ ಮಹಿಳೆಯರು

ಸ್ನೇಕ್ ಕಿರಣ್ ಇವರು ಮಲೆನಾಡಿನ ಪ್ರಸಿದ್ಧ ಹಾವು ತಜ್ಞರು. ಸಾರ್ವಜನಿಕ ಸ್ಥಳಗಳಲ್ಲಿ, ಮನೆಗಳಲ್ಲಿ, ಹೊಲಗಳಲ್ಲಿ ಹಾವನ್ನು ಕಂಡಾಗ ಇವರನ್ನು ಕರೆಸುತ್ತಾರೆ. ಇವರು ಆ ಹಾವನ್ನು ಹಿಡಿದು ಕಾಡಿಗೆ ಬಿಟ್ಟು ಅದರ ಸಂರಕ್ಷಣೆ ಮಾಡುತ್ತಾರೆ. ಹೀಗೆ ಹೊನ್ನಾಳಿಯ ಬಳಿ ನರ್ಸರಿ ಒಂದರಲ್ಲಿ ಹಾವು ಹಿಡಿಯಲು ಹೋದಾಗ ಮಹಿಳೆಯ ಮೇಲೆ ನಾಗದೇವರು ಬಂದು ಅಚ್ಚರಿ ಮೂಡಿಸಿದೆ.

ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ಬಳಿಯ ಫಾರೆಸ್ಟ್ ನರ್ಸರಿಯವರು ನಾಗರ ಹಾವು ಒಂದನ್ನು ಕಂಡು ಅದರ ರಕ್ಷಣೆಗಾಗಿ ಹಾವು ತಜ್ಞರಾದ ಸ್ನೇಕ್ ಕಿರಣ್ ಅವರನ್ನು ಬರ ಹೇಳಿದರು. ವಿಷಯ ಕೇಳಿದ ತಕ್ಷಣವೇ ಸ್ನೇಕ್ ಕಿರಣ್ ಅವರು ಸ್ಥಳಕ್ಕೆ ಧಾವಿಸಿದ್ದಾರೆ. ಆ ನರ್ಸರಿಯ ಸಮೀಪದಲ್ಲಿರುವ ಮಾರಿಕಾಂಬ ದೇವಿಯ ದೇವಸ್ಥಾನವಿದ್ದು ಅಲ್ಲೂ ಸಹ ಭೇಟಿ ನೀಡಿ ಕೈ ಮುಗಿದಿದ್ದಾರೆ. ಶ್ರೀ ಮಾರಿಕಾಂಬ ದೇವಿ ವನ ಎಂದೇ ಹೆಸರಿರುವ ಆ ಸ್ಥಳದಲ್ಲಿ ನಾಗರಹಾವುಂದನ್ನು ಹಿಡಿದು ರಕ್ಷಿಸಿದ್ದಾರೆ. ಅದನ್ನು ವಿಡಿಯೋ ಕೂಡ ಮಾಡಿದ್ದಾರೆ.

ಬುಟ್ಟಿಯಿಂದ ಬುಟ್ಟಿಗೆ ಹಾವನ್ನು ದಾಟಿಸಿ ಕೊನೆಯಲ್ಲಿ ಹಿಡಿದಿದ್ದಾರೆ. ಅದೇ ಸಮಯದಲ್ಲಿ ಅಲ್ಲೇ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರಿಗೆ ಮೈಮೇಲೆ ಬಂದಿದ್ದು ವಿಡಿಯೋದಲ್ಲಿ ಸರಿಯಾಗಿದೆ. ಅವರಿಗೆ ಮೈಮೇಲೆ ಬಂದ ತಕ್ಷಣವೇ ಇನ್ನೊಬ್ಬ ಮಹಿಳೆಯ ಮೇಲು ಕೂಡ ನಾಗದೇವ ಬಂದಿದ್ದಾನೆ. ಇಬ್ಬರೂ ನಾಗರ ಹಾವಿನ ಹೆಡೆಯಂತೆ ಎರಡು ಕೈಗಳನ್ನು ತಲೆಯಿಂದ ಮೇಲಕ್ಕೆ ಚಾಚಿ, ಹಾವಿನಂತೆ ನರ್ತಿಸಿದ್ದಾರೆ. ನೊಂದ ಹಾವಿನಂತೆ ಕೂಗಿದ್ದಾರೆ. ಅದೇ ಸಮಯದಲ್ಲಿ ಸುತ್ತಲಿರುವ ಕೆಲಸಗಾರರು ‘ಇವರಿಗೆ ಮೊದಲು ದೇವರು ಬರುತ್ತಿತ್ತು. ಹೆದರುವ ಅವಶ್ಯಕತೆ ಇಲ್ಲ. ಬಂದಿರುವುದು ದೇವರೇ ತಾನೇ’ ಎಂದಿದ್ದಾರೆ. ನಂತರ ಅವರಿಬ್ಬರೂ ನೆಲಕ್ಕೆ ಮಲಗಿ ಹಾವಿನಂತೆ ವರ್ತಿಸುತ್ತಿದ್ದರು. ಅವರಲ್ಲಿಯೇ ಒಬ್ಬ ಮಹಿಳೆಯು ‘ಭಯಪಡಬೇಡಿ ನಾ ನಿಮಗೇನು ಮಾಡುವುದಿಲ್ಲಾ’ ಎಂದು ಬೇರೊಂದು ಭಾಷೆಯಲ್ಲಿ ಕೂಗಿ ಹೇಳಿದ್ದಾಳೆ.

ಈ ದೃಶ್ಯವನ್ನು ಕಂಡು ಕಿರಣ್ ಕೂಡ ಕೈ ಮುಗಿದು ನಿಂತಿದ್ದಾರೆ. ನಂತರದಲ್ಲಿ ಕರ್ಪೂರವನ್ನು ತಂದು ನಾಗದೇವರಲ್ಲಿ ಅರ್ಪಿಸಿದ್ದಾರೆ. ಹಾವುಗಳು ಕಂಡಾಗ ಅದನ್ನು ಹೊಡೆಯದೆ ರಕ್ಷಿಸಬೇಕು ಎಂದು ಸ್ನೇಕ್ ಕಿರಣ್ ಹೇಳಿದ್ದಾರೆ. ಹಾವನ್ನು ರಕ್ಷಿಸುವುದಕ್ಕಾಗಿ ನಿಮ್ಮನ್ನು ಕರೆಸಿರುವುದು ಎಂದು ಅಲ್ಲಿಯ ಮಾಲೀಕರು ತಿಳಿಸಿದ್ದಾರೆ. ಮಹಿಳೆಯರಿಬ್ಬರ ಮೇಲೆ ಬಂದ ನಾಗ ದೇವರಲ್ಲಿ, ಹಿಡಿದ ಹಾವಿಗೆ ನೋವು ಉಂಟಾಗದಂತೆ ರಕ್ಷಿಸಿ ಅಲ್ಲೇ ಪಕ್ಕದಲ್ಲಿರುವ ಕಾಡಿನಲ್ಲಿ ಸುರಕ್ಷಿತವಾಗಿ ಬಿಡುವುದಾಗಿ ಹಾವುಗಳ ತಜ್ಞ ಕಿರಣ್ ಭರವಸೆ ನೀಡಿದ್ದಾರೆ. ಸ್ವಲ್ಪ ಸಮಯದಲ್ಲೇ ಮಹಿಳೆಯರಿಬ್ಬರು ಸರಿಯಾಗಿದ್ದು ಅಚ್ಚರಿ ಮೂಡಿಸಿದೆ. ಹಾವು ಹಿಡಿದ ಸಂದರ್ಭದಲ್ಲಿ ಸ್ಥಳದಲ್ಲಿರುವ ಎಲ್ಲರೂ ಭಕ್ತಿಯ ಲೋಕಕ್ಕೆ ಹೋಗಿಬಂದಂತಾಗಿತ್ತು

Leave a Comment

error: Content is protected !!