ಜನ್ಮ ಕೊಟ್ಟ ತಾಯಿಯನ್ನೇ ಮುಗಿಸಿದ ಪಾಪಿಷ್ಟ ಮಗ. ವಿಡಿಯೋ ಸಿಸಿ ಟಿವಿಯಲ್ಲಿ ಸೆರೆ

ಸ್ನೇಹಿತರೆ ತಾಯಿಯನ್ನು ದೇವರ ಮೊದಲ ಸ್ವರೂಪ ಎಂಬುದಾಗಿ ನಮ್ಮ ಪುರಾಣ ಗ್ರಂಥಗಳಲ್ಲಿ ಹಾಗೂ ಹಿರಿಯರು ತಮ್ಮ ಅನುಭವದ ಮೂಲಕ ಹೇಳುತ್ತಾರೆ. ತಾಯಿಯೇ ಮೊದಲ ಗುರು ತಾಯಿಯೇ ದೇವರು ತಾಯಿಗಿಂತ ದೊಡ್ಡ ಶಕ್ತಿ ಈ ಜಗತ್ತಿನಲ್ಲಿ ಯಾವುದು ಇಲ್ಲ ಎನ್ನುವ ಸಂಸ್ಕೃತಿ ನಮ್ಮದು. ಆದರೆ ಇಂತಹ ಪೂಜ್ಯರೂಪದ ತಾಯಿಯನ್ನು ವಯಸ್ಸಾದ ನಂತರ ಇನ್ನೊಬ್ಬ ಮಗ ಮಾಡಿರುವ ಕಾರ್ಯ ನೋಡಿದ್ರೆ ನಿಜಕ್ಕೂ ನೀವು ಕೂಡ ಕೋಪಗೊಳ್ಳುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಬಹುದಾಗಿದೆ.

ಹೌದು ಗೆಳೆಯರೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ತನ್ನ ತಾಯಿಯನ್ನೇ ಮುಗಿಸಿರುವ ಮಗನ ಕೃತ್ಯ ಈಗ ಸಿಸಿಟಿವಿ ಕ್ಯಾಮೆರಾ ಫೂಟೇಜ್ ನಲ್ಲಿ ಸೆರೆಯಾಗಿದ್ದು, ಈತನ ಹೇಯ ಕೃತ್ಯ ನಿಜಕ್ಕೂ ಕೂಡ ಈ ಸಮಾಜವನ್ನು ಬೆಚ್ಚಿ ಬೀಳಿಸುವಂತಿದೆ ಎಂದರೆ ತಪ್ಪಾಗಲಾರದು. ಅಷ್ಟಕ್ಕೂ ನಿಜವಾಗಿ ನಡೆದಿದ್ದು ಏನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಅದು ಕೂಡ ತನ್ನ ತಾಯಿಯನ್ನು ಮುಗಿಸಿರುವ ವ್ಯಕ್ತಿ ಗುಜರಾತಿನ ಹೈಸ್ಕೂಲ್ನಲ್ಲಿ ಟೀಚರ್. ಇತನಿಗೆ ಒಳ್ಳೆಯ ಸಂಬಳ ಕೂಡ ಸಿಕ್ಕುತ್ತಿದೆ. ಹೇಗಿದ್ದರೂ ಕೂಡ ಪಾರ್ಶ್ವವಾಯುಗೆ ತುತ್ತಾಗಿರುವ ತನ್ನ ತಾಯಿಯನ್ನು ಸಾಕಲಾರದೆ ತಾಯಿಯನ್ನೆ ಮುಗಿಸಿದ್ದಾನೆ. ಮನೆಯಲ್ಲಿ ಈತನ ಹೆಂಡತಿಗೂ ಕೂಡ ಇವನ ತಾಯಿಯನ್ನು ನೋಡಿದರೆ ಆಗುತ್ತಿರಲಿಲ್ಲ. ಇದಕ್ಕಾಗಿಯೇ ಈತ ತಾನು ವಾಸಿಸುವ ಬಿಲ್ಡಿಂಗ್ ನ ಟೆರೇಸ್ಗೆ ತಾಯಿಯನ್ನು ಎತ್ತಿಕೊಂಡು ಕರೆದುಕೊಂಡು ಹೋಗಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಆದರೆ ವಾಪಸು ಬರುವಾಗ ಆತ ಒಬ್ಬನೇ ಬಂದಿದ್ದ ಅಂದರೆ ಅಲ್ಲಿಂದಲೇ ಮೇಲಿನಿಂದ ತಾಯಿಯನ್ನು ಕೆಳಗೆ ಎಸೆದಿದ್ದ. ಆತ ಬಾಗಿಲು ಹಾಕಿಕೊಂಡ ತಕ್ಷಣವೇ ಕೆಳಗೆ ಅವರ ತಾಯಿ ಬಿದ್ದಿದ್ದನ್ನು ನೋಡಿ ಕೂಡಲೇ ಪಕ್ಕದ ಮನೆಯವರು ಬಂದು ಬಾಗಿಲು ತಟ್ಟಿದ್ದಾರೆ ಆತ ಏನೂ ಅರಿಯದವನಂತೆ ಕೆಳಗೆ ಹೋಗಿ ನೋಡಿದ್ದಾನೆ. ಆದರೆ ಪೊಲೀಸ್ ತಣಿಕೆಯಲ್ಲಿ ಈತ ಮಾಡಿರುವ ಕಾರ್ಯದ ವಿವರ ಎಲ್ಲಾ ತಿಳಿದು ಬಂದಿದ್ದು ಈಗ ಈತ ಪೊಲೀಸರ ಅತಿಥಿ ಆಗಿದ್ದಾನೆ. ಈತನಿಗೆ ನ್ಯಾಯ ಪ್ರಕಾರ ಏನು ಮಾಡಬೇಕು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ ಸ್ನೇಹಿತರೆ.

Leave a Comment

error: Content is protected !!