BCCI: ವರ್ಷ ಪೂರ್ತಿ ಆಡ್ದೇ ಇದ್ರು ಬುಮ್ರಾ ವಿಚಾರದಲ್ಲಿ ಪಕ್ಷಪಾತ ಮಾಡಿದ BCCI?

Jasprith Bumrah ಇಡೀ ವಿಶ್ವದಲ್ಲಿ ಕ್ರಿಕೆಟ್ ಎಂಬ ಪದ ಕೇಳಿ ಬಂದಾಗ ಎಲ್ಲರೂ ತಿರುಗಿ ನೋಡುವಂತಹ ದೇಶ ಎಂದರೆ ಅದು ನಮ್ಮ ಭಾರತ ದೇಶ. ಕ್ರಿಕೆಟ್(Cricket) ಎನ್ನುವ ಕ್ರೀಡೆಯನ್ನು ಕಂಡುಹಿಡಿದಿದ್ದು ಆಂಗ್ಲರೇ ಆಗಿದ್ದರು ಕೂಡ ಅದನ್ನು ಜನಪ್ರಿಯಗೊಳಿಸಿದ್ದು ಮಾತ್ರ ನಮ್ಮ ಭಾರತೀಯರು ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಅದರಲ್ಲೂ ವಿಶೇಷವಾಗಿ ನಾವು ಮಾತನಾಡಲು ಹೊರಟಿರುವುದು ಜಸ್ಪ್ರೀತ್ ಬೂಮ್ರಾ( ಅವರ ಕುರಿತಂತೆ.

ನಿಮಗೆಲ್ಲರಿಗೂ ತಿಳಿದಿರಬಹುದು ಮುಂಬೈ ಇಂಡಿಯನ್ಸ್(Mumbai Indians) ತಂಡದ ಪರವಾಗಿ ಐಪಿಎಲ್ ನಲ್ಲಿ ಮಿಂಚಿಸುವ ಮೂಲಕ ಬೂಮ್ರ ಅವರು ಭಾರತೀಯ ಕ್ರಿಕೆಟ್ ತಂಡಕ್ಕೆ ಸೇರ್ಪಡೆಯಾಗುತ್ತಾರೆ. ಆರಂಭಿಕ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಪರಿಣಾಮಕಾರಿ ಬೌಲಿಂಗ್ ಮಾಡುತ್ತಾರೆ.

ಆದರೆ ಇತ್ತೀಚಿನ ವರ್ಷಗಳಲ್ಲಿ ಅದರಲ್ಲಿಯೂ ವಿಶೇಷವಾಗಿ ಸಂಜನಾ ಗಣೇಶನ್(Sanjana Ganesan) ಅವರನ್ನು ಮದುವೆಯಾದ ನಂತರ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಕ್ರಿಕೆಟ್ ಆಡುವುದನ್ನು ನಿಲ್ಲಿಸಿ ಬಿಟ್ಟಿದ್ದಾರೆ ಎಂದರು ಕೂಡ ತಪ್ಪಾಗಲಾರದು. ಇನ್ನು ಈ ಬಾರಿ ಐಪಿಎಲ್ ನಲ್ಲಿ ಕೂಡ ಬೂಮ್ರ ಪಾಲ್ಗೊಳ್ಳುತ್ತಿಲ್ಲ. ಇಂಜೂರಿಯ ಕಾರಣದಿಂದಾಗಿ ವರ್ಷವಿಡಿ ತಂಡದಿಂದ ಹೊರಗುಳಿದಿದ್ದರೂ ಕೂಡ ಈ ಬಾರಿ ಬಿಸಿಸಿಐ ಅಧಿಕೃತವಾಗಿ ಪ್ರಕಟಿಸಿರುವ ಆಟಗಾರರ ಕಾಂಟ್ರಾಕ್ಟ್ ಲಿಸ್ಟ್ ನಲ್ಲಿ ಏ ಪ್ಲಸ್ ದರ್ಜೆಯನ್ನು ಹೊಂದಿದ್ದಾರೆ.

ಅಂದರೆ ಈ ದರ್ಜೆಯ ಪ್ರಕಾರ ವರ್ಷಕ್ಕೆ ಏಳು ಕೋಟಿ ರೂಪಾಯಿ ಸಂಭಾವನೆಯನ್ನು ಬೂಮ್ರ ಆಡದೆ ಪಡೆಯುತ್ತಿದ್ದಾರೆ. ಈ ಲಿಸ್ಟಿನಲ್ಲಿ ವಿರಾಟ್ ಕೊಹ್ಲಿ(Virat Kohli) ರೋಹಿತ್ ಶರ್ಮಾ ಅವರ ಜೊತೆಗೆ ರವೀಂದ್ರ ಜಡೇಜಾ ಕೂಡ ಇದ್ದಾರೆ. ಹೀಗಿದ್ದರೂ ಕೂಡ ಆಡದೇ ಇರುವ ಬೂಮ್ರಾ ಅವರಿಗೆ ಇಷ್ಟೊಂದು ಮನ್ನಣೆ ನೀಡುತ್ತಿರುವುದು ಯಾವ ಕಾರಣಕ್ಕಾಗಿ ಎನ್ನುವುದು ಎಲ್ಲರ ಪ್ರಶ್ನೆಯಾಗಿದೆ.

Leave a Comment

error: Content is protected !!