Glenn maxwell: ಕನ್ನಡಿಗರ ಮನಗೆದ್ದ ಮ್ಯಾಕ್ಸ್ ವೆಲ್, ಹೆಂಡತಿಗೆ ಭಾರತೀಯ ಸಂಸ್ಕೃತಿಯಂತೆ ಸೀರೆ ಉಡಿಸಿ ಸೀಮಂತ

Glenn maxwell wife simantha: ಸ್ನೇಹಿತರೆ, ಇಂಡಿಯನ್ ಪ್ರೀಮಿಯರ್ ಲೀಗ್(Indian Premier league) ಐಪಿಎಲ್ ಶುರು ಆದರೆ ಸಾಕು ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳಿಗೂ ಪೈಸ ವಸೂಲ್ ಮನೋರಂಜನೆ ಪಕ್ಕ. ಒಂದು ಟೀಮ್ ಮತ್ತೊಂದು ಟೀಂ ಜೊತೆ ಕಿತ್ತಾಡಿಕೊಳ್ಳುವುದು, ಒಬ್ಬ ಆಟಗಾರ ಮತ್ತು ಒಬ್ಬ ಆಟಗಾರರೊಂದಿಗೆ ಬೆಳೆಸಿಕೊಳ್ಳುವ ಮಧುರವಾದ ಸ್ನೇಹ ಬಾಂಧವ್ಯ ಎಲ್ಲವನ್ನು ಒಂದೇ ಪ್ರೇಮ್ನಲ್ಲಿ ನೋಡುವಂತೆ ಕಲ್ಪಿಸಿ ಕೊಡುವುದೇ ಐಪಿಎಲ್.

ಹಲವಾರು ವರ್ಷಗಳಿಂದ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡಕ್ಕೆ ಮೊದಲ ಕ್ರಮಾಂಕದ ಭರ್ಜರಿ ಬ್ಯಾಟ್ಸ್ಮನ್ ಹಾಗೂ ಬೌಲರ್ ಆಗಿ 360 ಆಂಗಲ್ನಲ್ಲಿಯೂ ಬ್ಯಾಟನ್ನು ಬೀಸುತ್ತಾ ತಂಡದ ಯಶಸ್ಸಿಗೆ ಕಾರಣರಾಗಿರುವಂತಹ ಆರ್ಸಿಬಿ ಆಲ್ ರೌಂಡರ್ ಮ್ಯಾಕ್ಸ್ ವೆಲ್(Maxwell) ಮೂಲತಃ ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರರಾಗಿದ್ದರೂ ಕೂಡ ನಮ್ಮ ಮನೆ ಮಗ ಎಂಬಂತಾಗಿ ಬಿಟ್ಟಿದ್ದಾರೆ.

ಹೌದು ನಮ್ಮ ಭಾರತದ ತಮಿಳುನಾಡಿನವರಾದ ವಿನಿ ರಮಣ (vini ramana) ಎಂಬುವವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮ್ಯಾಕ್ಸ್ ವೆಲ್ ಭಾರತದ ಅಳಿಯನಾಗಿದ್ದು ಆಗಾಗ ಕೆಲ ಕನ್ನಡ ಪದಗಳನ್ನು ಅದ್ಭುತವಾಗಿ ಉಚ್ಚರಿಸುತ್ತಾ ಕನ್ನಡಿಗರ ಹೃದಯವನ್ನು ಕದ್ದುಬಿಟ್ಟಿದ್ದಾರೆ. ಇದೀಗ ತಮ್ಮ ಹೆಂಡತಿ ವಿನೀ ರಮಣ ಅವರ ಸೀಮಂತ ಶಾಸ್ತ್ರದಲ್ಲಿ ಹೆಂಡತಿಗೆ ಭಾರತೀಯ ಸಂಸ್ಕೃತಿಯಂತೆ ಸೀರೆಯೊಂದನ್ನು ಉಡುಗೊರೆಯನ್ನಾಗಿ ನೀಡಿ ಅದನ್ನು ಉಟ್ಟಿಕೊಳ್ಳುವಂತೆ ಕೇಳಿಕೊಂಡರಂತೆ. ಅದರಂತೆ ವಿನೀ ರಮಣ ಇಂಡಿಯನ್ ಸ್ಟೈಲ್ (Indian style) ನಲ್ಲಿ ಸೀರೆ ಉಟ್ಟು ಸೀಮಂತಕ್ಕೆ ಸಿದ್ದರಾಗಿ ಆ ಕೆಲ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸದ್ಯ ದಂಪತಿಗಳು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಸೆಪ್ಟೆಂಬರ್ ತಿಂಗಳೊಳಗೆ ತಮ್ಮ ಕುಟುಂಬಕ್ಕೆ ಮತ್ತು ಓರ್ವ ಕ್ರಿಕೆಟಿಗ ಅಥವಾ ಕ್ರಿಕೆಟ್ ಆಟಗಾರ್ತಿ ಸೇರ್ಪಡೆಯಾಗುತ್ತಾಳೆ ಎಂಬ ಖುಷಿ ವಿಚಾರವನ್ನು ಇನ್ಸ್ಟಾಗ್ರಾಮ್(Instagram) ಖಾತೆಯಲ್ಲಿ ಹಂಚಿಕೊಂಡು ಮ್ಯಾಕ್ಸ್ ವೆಲ್(Maxwell) ಸಂತಸ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯನ್ನರಿಗೆ ನಮ್ಮ ಭಾರತದ ಮೇಲೆ ಹಾಗೂ ಅಲ್ಲಿನ ಸಂಸ್ಕೃತಿ ಸಂಪ್ರದಾಯಗಳ ಮೇಲೆ ಇರುವಂತಹ ಪ್ರೀತಿ ಕಂಡು ಮನಸೋತು ಹೋಗಿದ್ದಾರೆ. ಇದನ್ನೂ ಓದಿ ಇಡೀ ಕರುನಾಡೆ ತಿರುಗಿ ನೋಡುವಂತೆ ಮಾಡಿದ್ದ ಶಿವಣ್ಣನ ಮಗಳ ಮದುವೆಯ ಅಪರೂಪದ ಫೋಟೋಸ್!

Leave a Comment

error: Content is protected !!