ಐಪಿಎಲ್ ನಲ್ಲಿ ಪ್ರಸಾರವಾಗುವ ಹತ್ತು ಸೆಕೆಂಡ್ ಜಾಹೀರಾತಿಗೆ ಆಟಗಾರರು ಪಡೆಯುವ ಆದಾಯ ಎಷ್ಟು ಗೊತ್ತಾ ಕೇಳಿದ್ರೆ ದಂಗಾಗ್ತಿರಾ !

ಐಪಿಎಲ್ ಹಬ್ಬ ಇಂದಿನಿಂದ (26 march) ಶುರುವಾಗಲಿದೆ. ಪ್ರಪಂಚದಲ್ಲೇ ಅತ್ಯಂತ ಅದ್ಧೂರಿ ಆದಂತಹ ಕ್ರಿಕೇಟ್ ಮೇಳ ಎಂದೇ ಹೆಸರಾಗಿರುವ ಐಪಿಎಲ್ ಪ್ರೇಕ್ಷಕರಿಗೆ ಮನೋ ರಂಜಿಸುವುದರಲ್ಲಿ ಯಶಸ್ವಿಯಾಗಿದೆ. ಜಗತ್ತಿನ ಎಲ್ಲಾ ದೇಶದ ಆಟಗಾರರು ಒಂದೇ ಕಡೆ ಸೇರಿ ಒಟ್ಟಿಗೆ ಆಟ ಆಡುವುದನ್ನು ನೋಡಕ್ಕೆ ಕ್ರಿಕೆಟ್ ಅಭಿಮಾನಿಗಳಿಗೆ ಎಲ್ಲಿಲ್ಲದ ಖುಷಿ. 2007 ರಲ್ಲಿ ಶುರುವಾದ ಐಪಿಎಲ್ ಹದಿನೈದು ವರ್ಷಗಳು ಕಳೆದರೂ ಕೂಡ ಯಶಸ್ವಿಯಾಗಿ ಮುನ್ನುಗುತ್ತಿದೆ.

ಐಪಿಎಲ್ ಆಟದ ಮೇಲೆ ದೊಡ್ಡ ದೊಡ್ಡ ಕಂಪೆನಿಗಳು ಇನ್ವೆಸ್ಟ್ ಮಾಡುತ್ತಿದ್ದಾರೆ ಮತ್ತು ದೊಡ್ಡ ಮಟ್ಟದಲ್ಲಿ ಲಾಭ ಪಡೆಯುತ್ತಿದ್ದಾರೆ . ಈ ವರ್ಷ ಹೊಸದಾಗಿ 2 ಐಪಿಎಲ್ ಟೀಮ್ ಗಳು ಸೇರಿಕೊಂಡಿವೆ ಒಟ್ಟಾರೆ ಈ ವರ್ಷ ಹತ್ತು ತಿಂಗಳು ಐಪಿಎಲ್ ಆಟದಲ್ಲಿ ಭಾಗವಹಿಸಲಿದ್ದಾರೆ. ಹತ್ತೂ ಫ್ರಾಂಚೈಸಿಗಳು ತೊಂಬತ್ತು ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ. ಒಟ್ಟಾರೆ 900 ಕೋಟಿ ರುಪಾಯಿಗಳನ್ನು ಐಪಿಎಲ್ 2022 ಕ್ಕೆ ಬಂಡವಾಳ ಹಾಕಿದ್ದಾರೆ.

ನೂರಾರು ಕೋಟಿ ಹೂಡಿಕೆ ಮಾಡುವ ಐಪಿಎಲ್ ಫ್ರಾಂಚೈಸ್ ಗಳಿಗೆ ಹಣವಾದರೂ ಎಲ್ಲಿಂದ ಬರುತ್ತೆ ಎಂದು ಹಲವು ಜನರಿಗೆ ಕುತೂಹಲ ಮೂಡಬಹುದು. ಈ ಟೀಮ್ ಗಳು ಹೂಡಿಕೆ ಮಾಡಿರುವ ಅರ್ಧದಷ್ಟು ಹಣವನ್ನು ಇವರಿಗೆ ಜಾಹೀರಾತುಗಳ ಮೂಲಕವೇ ಬರುತ್ತೆ. ನೀವೆಲ್ಲ ಕ್ರಿಕೆಟ್ ನೋಡುವಾಗ ಪ್ರತಿ ಓವರ್ ಮುಗಿದ ಮೇಲೆ ಹತ್ತು ಸೆಕೆಂಡುಗಳ ಜಾಹೀರಾತುಗಳು ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಈ ಹತ್ತು ಸೆಕೆಂಡ್ ಗಳ ಜಾಹೀರಾತಿಗೆ ಆಟಗಾರರು ದೊಡ್ಡ ಮಟ್ಟದ ಆದಾಯವನ್ನು ಪಡೆಯುತ್ತಾರೆ.

ಜಾಹೀರಾತುಗಳಲ್ಲಿ ಐಪಿಎಲ್ ಆಟಗಾರರು ಭಾಗವಹಿಸಲೇ ಬೇಕಾಗುತ್ತದೆ. ಯಾಕೆಂದರೆ ಐಪಿಎಲ್ ಆಟಗಾರರಿಗೆ ಹರಾಜು ಪ್ರಕ್ರಿಯೆಯಲ್ಲಿ ಇಂತಿಷ್ಟು ಹಣ ಅ0ಥ ಮುಂಚೆಯೇ ಫಿಕ್ಸ್ ಮಾಡಿರುತ್ತಾರೆ. ಜಾಹೀರಾತಿನಿಂದ ಉನ್ನತ ಹಣ ಆಟಗಾರರಿಗೆ ಸಲ್ಲುವುದಿಲ್ಲ ಬದಲಾಗಿ ಆಟಗಾರರ ಟೀಮ್ ಫ್ರ್ಯಾಂಚೈಸ್ ಗೆ ಸೇರುತ್ತೆ. ಉದಾಹರಣೆಗೆ ವಿರಾಟ್ ಕೊಹ್ಲಿಯವರು ಜಾಹೀರಾತಿನಲ್ಲಿ ಭಾಗವಹಿಸಿದರೆ ಆ ಜಾಹೀರಾತಿನಿಂದ ಸಿಗುವ ಹಣ ಆರ್ ಸಿಬಿ ಟೀಮ್ ಗೆ ಸೇರುತ್ತೆ. ಆದರೆ ವಿರಾಟ್ ಕೊಹ್ಲಿಯವರಿಗೆ ಸಿಗುವುದಿಲ್ಲ. ಹಾಗಾದರೆ ಆಟಗಾರರನ್ನು ಜಾಹೀರಾತಿನಲ್ಲಿ ಬಳಸಿಕೊಂಡು ಟೀಮ್ ಫ್ರಾಂಚೈಸ್ ಗಳು ಪಡೆಯುವ ಹಣ ಎಷ್ಟು ಗೊತ್ತಾ ಕೇಳಿದ್ರೆ ನೀವು ನಂಬಲ್ಲ .

ಕೇವಲ ಹತ್ತೇ ಹತ್ತು ಸೆಕೆಂಡುಗಳ ಜಾಹೀರಾತಿನಲ್ಲಿ ಅಭಿನಯಿಸುವ ವಿರಾಟ್ ಕೊಹ್ಲಿ ಮತ್ತು ಧೋನಿ ಮತ್ತು ಇನ್ನಿತರ ಸ್ಟಾರ್ ಆಟಗಾರರಿಗೆ ಹದಿನೇಳ ರಿಂದ ಇಪ್ಪತ್ತು ಲಕ್ಷ ರುಪಾಯಿಗಳನ್ನು ಕೊಡಬೇಕಾಗುತ್ತೆ. ಈ ಜಾಹೀರಾತಿನಿಂದ ಸಿಗುವ ಹಣ ಚಾನೆಲ್ ಗಳಿಗೆ ಸೇರುತ್ತೆ ಮತ್ತು ಚಾನೆಲ್ ಗಳು ಲಾಭದ ಅರ್ಧದಷ್ಟು ಹಣವನ್ನು ಟೀಮ್ ಫ್ರಾಂಚೈಸಿಗೆ ನೀಡುತ್ತಾರೆ. 60 ದಿನಗಳ ಐಪಿಎಲ್ ಸೀಸನ್ ನಲ್ಲಿ ಕೇವಲ ಜಾಹೀರಾತುಗಳಿಂದಲೇ ತಾವು ಹೂಡಿಕೆ ಮಾಡಿದ ಹಣಕ್ಕಿಂತ ಹೆಚ್ಚು ಹಣವನ್ನು ಈ ಫ್ರಾಂಚೈಸ್ ಗಳು ಪಡೆಯುತ್ತಾರೆ.

Leave a Comment

error: Content is protected !!