MS Dhoni: ವರ್ಲ್ಡ್ ಕಪ್ ಗೆದ್ದಿರೋ ನಾಯಕ ಆಗಿದ್ದರೂ ಕೂಡ ಧೋನಿ ಈಗ್ಲೂ ಕೂಡ ಆ ಗೇಮ್ ಆಡ್ತಾರೆ!

MS Dhoni ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡ ಕಂಡಂತಹ ಅತ್ಯಂತ ಯಶಸ್ವಿ ಕ್ಯಾಪ್ಟನ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಡೀ ವಿಶ್ವ ಕ್ರಿಕೆಟ್ ಜಗತ್ತಿನಲ್ಲಿ ಅವರನ್ನು ಕ್ಯಾಪ್ಟನ್ ಕೂಲ್ ಎಂಬುದಾಗಿ ಕರೆಯುತ್ತಾರೆ. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಹಾಗೂ ನಾಯಕನಾಗಿ ತಂಡವನ್ನು ಅವರು ಮುನ್ನಡೆಸಿರುವ ರೀತಿ ನಿಜಕ್ಕೂ ಕೂಡ ಅಸಮಾನ್ಯ.

ಕೇವಲ ಭಾರತೀಯ ಕ್ರಿಕೆಟ್ ತಂಡದ ವಿಚಾರದಲ್ಲಿ ಮಾತ್ರವಲ್ಲದೆ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ತಂಡದ ವಿಚಾರದಲ್ಲಿ ಕೂಡ ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವ ಆನ್ ಪಾಯಿಂಟ್ ಇರುತ್ತದೆ.

ಫ್ರಾಂಚೈಸಿ ಕ್ರಿಕೆಟ್ ನಲ್ಲಿ ಕೂಡ ಧೋನಿ ಅವರ ನಾಯಕತ್ವ 42ನೇ ವಯಸ್ಸಿನಲ್ಲಿ ಕೂಡ ಯಶಸ್ಸಿನ ಫಾರ್ಮುಲವನ್ನು ಕಂಡು ಹುಡುಕುತ್ತಿದ್ದು ನಿಜಕ್ಕೂ ಕೂಡ ಅವರ ನಾಯಕತ್ವ ಪ್ರತಿಯೊಂದು ಕಾಲಕ್ಕೂ ಕೂಡ ಸ್ಪೂರ್ತಿದಾಯಕವಾದದ್ದು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ವಯಸ್ಸು 42 ಆಗಿದ್ರೂ ಕೂಡ ಮಹೇಂದ್ರ ಸಿಂಗ್ ಧೋನಿ ಇನ್ನೂ ಕೂಡ ಚಿಕ್ಕ ಮಕ್ಕಳ ರೀತಿಯಲ್ಲಿ ಮೊಬೈಲ್ ಗೇಮ್ ಅನ್ನು ಆಡುತ್ತಾರೆ ಎಂದರೆ ನೀವು ಕೂಡ ನಂಬೋದಿಲ್ಲ.

ಹೌದು ಇತ್ತೀಚಿಗಷ್ಟೇ ವೈರಲ್ ಆಗಿರುವಂತಹ ಅವರ ವಿಮಾನಯಾನದ ವಿಡಿಯೋದಲ್ಲಿ ಗಗನಸಖಿ ಅವರಿಗೆ ಚಾಕಲೇಟ್ ನೀಡಲು ಹೋದಾಗ ಅವರ ಐ ಪ್ಯಾಡ್ ನಲ್ಲಿ ಕ್ಯಾಂಡಿ ಕ್ರಶ್ ಗೇಮ್(Candy Crush Game) ಅನ್ನು ಆಡುತ್ತಿರುವುದು ಕಂಡುಬಂದಿದ್ದು ಇದು ದೇಶಾದ್ಯಂತ ಈಗ ಟ್ವಿಟರ್ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದೆ.

Leave a Comment

error: Content is protected !!