Ruturaj Gaikwad: ರೋಹಿತ್ ಶರ್ಮಾ ಅವರ ನಾಯಕನ ಸ್ಥಾನವನ್ನು ಕಸಿದುಕೊಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಈ ಯುವ ಆಟಗಾರ.

Ruturaj Gaikwad ಸದ್ಯಕ್ಕೆ ಭಾರತ ಕ್ರಿಕೆಟ್ ತಂಡ(Indian Cricket Team) ಜಾಗತಿಕ ವಿಶ್ವ ಕ್ರಿಕೆಟ್ ನಲ್ಲಿ ಮೊದಲು ಕಾಣಿಸಿಕೊಳ್ಳುತ್ತಿದ್ದ ಹಾಗೆ ಕಾಣಿಸಿಕೊಳ್ಳುತ್ತಿಲ್ಲ ಎನ್ನುವುದು ನಿಜಕ್ಕೂ ಕೂಡ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರವನ್ನು ಮೂಡಿಸಿರುವಂತಹ ವಿಚಾರವಾಗಿದೆ. ಹೌದು, ಯಾಕೆಂದರೆ ಒಂದು ಕಾಲದಲ್ಲಿ ವಿಶ್ವ ಕ್ರಿಕೆಟ್ ನಲ್ಲಿ ಭಾರತೀಯ ಕ್ರಿಕೆಟ್ ತಂಡ ಅತ್ಯಂತ ಬಲಿಷ್ಠ ತಂಡಗಳಲ್ಲಿ ಮೊದಲನೇ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಿತ್ತು ಆದರೆ ಪರಿಸ್ಥಿತಿ ಈಗ ಅದೇ ರೀತಿ ಉಳಿದುಕೊಂಡಿಲ್ಲ.

ಯಾಕೆಂದರೆ ನಾಯಕತ್ವ ಬದಲಾಗುತ್ತಿದ್ದ ಹಾಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಕಾಣುವಂತಹ ಫಲಿತಾಂಶ ಕೂಡ ಬದಲಾಗಿದೆ. ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ರವರ ನಂತರ ವಿರಾಟ್ ಕೊಹ್ಲಿ ಅವರ ನಂತರ ರೋಹಿತ್ ಶರ್ಮ ಈಗ ಭಾರತೀಯ ಕ್ರಿಕೆಟ್ ತಂಡದ ನಾಯಕರಾಗಿದ್ದಾರೆ. ಆದರೆ ನಾಯಕತ್ವ ಬದಲಾಗುತ್ತಿದ್ದಂತೆ ತಂಡದ ಪರ್ಫಾರ್ಮೆನ್ಸ್ ಕೂಡ ತೀರಾ ಕೆಳಮಟ್ಟದ ತಳವನ್ನು ಕಾಣುತ್ತಿರುವುದು ನಿಜಕ್ಕೂ ಕೂಡ ಬೇಸರದ ಸಂಗತಿಯಾಗಿದೆ.

ಬೆಳಕಿಂದ ಪ್ರಮುಖವಾಗಿ ಈಗ ಮತ್ತೊಮ್ಮೆ ಅತಿ ಶೀಘ್ರದಲ್ಲಿ ಪ್ರಾರಂಭವಾಗಲಿರುವಂತಹ ಏಷ್ಯಾ ಗೇಮ್ಸ್(Asian Games) ನಲ್ಲಿ ಭಾರತ ತಂಡ ಪಾರ್ಟಿಸಿಪೇಟ್ ಮಾಡುತ್ತಿದ್ದು ಇದರಲ್ಲಿ ಕೂಡ ನಾಯಕತ್ವ ಬದಲಾಗಿರುವಂತಹ ಅಧಿಕೃತ ಮಾಹಿತಿಗಳು ಸಿಗುತ್ತಿವೆ. ಹೌದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯುವ ಆಟಗಾರ ಆಗಿರುವಂತಹ ಋತುರಾಜ್ ಗಾಯಕ್ವಾಡ್ ರವರು ಈ ಬಾರಿ ತಂಡದ ನಾಯಕತ್ವವನ್ನು ವಹಿಸಿಕೊಳ್ಳುತ್ತಿದ್ದಾರೆ.

ಚೆನ್ನೈ ತಂಡದ ಪರವಾಗಿ ಭರವಸೆ ಆಟವನ್ನು ಆಡುವಂತಹ ಋತುರಾಜ್ ಗಾಯಕ್ವಾಡ್(Rutiraj Gaikwad) ಡೊಮೆಸ್ಟಿಕ್ ಕ್ರಿಕೆಟ್ ನಲ್ಲಿ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ನೀಡುವ ಇವರು ನಾಯಕನಾಗಿ ಕೂಡ ಉತ್ತಮ ನಾಯಕತ್ವದ ಪ್ರದರ್ಶನವನ್ನು ಮಾಡಿದ್ದಾರೆ ಎಂದು ಹೇಳಬಹುದಾಗಿದ್ದು ಏಷ್ಯನ್ ಗೇಮ್ಸ್ ನಲ್ಲಿ ಇವರ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಉತ್ತಮ ಪರ್ಫಾರ್ಮೆನ್ಸ್ ನೀಡಲಿ ಎಂಬುದಾಗಿ ಹಾರೈಸೋಣ.

Leave a Comment

error: Content is protected !!