Yuvaraj Singh: ಮದುವೆಗೂ ಮುಂಚೆ ಕ್ರಿಕೇಟಿಗ ಯುವರಾಜ್ ಸಿಂಗ್ ಡೇಟಿಂಗ್ ಮಾಡಿದ್ದ ನಟಿಯರ ಸಂಖ್ಯೆ ಒಂದಲ್ಲ ಎರಡಲ್ಲ. ಲೆಕ್ಕ ಹಾಕುತ್ತಾ ಹೋದರೆ ಸುಸ್ತಾಗುತ್ತೆ.

Yuvaraj Singh 2007 ಹಾಗೂ 2011ರ ವಿಶ್ವಕಪ್ ನಲ್ಲಿ ಭಾರತ ತಂಡ ಕ್ರಿಕೆಟ್ ವಿಶ್ವಕಪ್ ಗೆಲ್ಲಲು ಮೂಲಕಾರಣಿಕರ್ತರು ಯುವರಾಜ್ ಸಿಂಗ್ ಎಂದರೆ ಅತಿಶಯೋಕ್ತಿ ಎನಿಸಲಾರದು. ಪ್ರಾಣವನ್ನು ಕೂಡ ಲೆಕ್ಕಿಸದೆ ತಂಡಕ್ಕಾಗಿ ದೇಶಕ್ಕಾಗಿ ಆಡಿ ವಿಶ್ವಕಪ್ ಅನ್ನು ಗೆಲ್ಲಿಸಿಕೊಟ್ಟಂತಹ ಸ್ಪೂರ್ತಿ ನಮ್ಮ ನೆಚ್ಚಿನ ಯುವರಾಜ್ ಸಿಂಗ್. ಇನ್ನು ಅವರ ವಯಕ್ತಿಕ ಜೀವನದ ಕುರಿತಂತೆ ಮಾತನಾಡುವುದಾದರೆ ಸದ್ಯಕ್ಕೆ ಅವರು ಹೇಜಲ್ ಕೀಚ್ ಎನ್ನುವವರನ್ನು ಮದುವೆಯಾಗಿ ಮಗುವನ್ನು ಕೂಡ ಪಡೆದಿದ್ದಾರೆ.

ಆದರೆ ನಿಮಗೆ ಗೊತ್ತಾ ಅವರನ್ನು ಮದುವೆಯಾಗುವುದಕ್ಕೂ ಮುನ್ನ ಸಾಕಷ್ಟು ನಟಿಯರ ಜೊತೆಗೆ ಯುವರಾಜ್ ಸಿಂಗ್ ಡೇಟಿಂಗ್ ಮಾಡಿದ್ದರು. ಹಾಗಿದ್ದರೆ ಯುವರಾಜ್ ಸಿಂಗ್(Yuvaraj Singh) ಅವರ ಗರ್ಲ್ ಫ್ರೆಂಡ್ ಗಳ ಲಿಸ್ಟಿನಲ್ಲಿ ಯಾವೆಲ್ಲ ನಟಿಯರು ಇದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಮೊದಲಿಗೆ ನಮ್ಮ ಕರ್ನಾಟಕ ಮೂಲದ ಬಾಲಿವುಡ್ ನಟಿ ಆಗಿರುವ ದೀಪಿಕಾ ಪಡುಕೋಣೆ(Deepika Padukone) ಅವರು ಕೂಡ ಇದ್ದಾರೆ.

2014ರ ಸಂದರ್ಭದಲ್ಲಿ ನಟಿ ನೇಹಾ ದೂಪಿಯ(Neha Dhupia) ಅವರ ಜೊತೆಗೆ ಕೂಡ ಯುವರಾಜ ಸಿಂಗ್ ಅವರ ಹೆಸರು ಕೇಳಿ ಬಂದಿತ್ತು. ನಟಿ ಪ್ರೀತಿ ಜಾಂಗಾನಿ ಅವರ ಜೊತೆಗೆ ಕೂಡ ನಮ್ಮ ಪಂಜಾಬಿನ ಕಿಂಗ್ ಹೆಸರು ಕೇಳಿ ಬಂದಿತ್ತು. ಪಂಜಾಬ್ ಕಿಂಗ್ಸ್ ತಂಡದ ಮಾಲಕಿಯಾಗಿರುವ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಪ್ರೀತಿ ಅವರ ಜೊತೆಗೂ ಕೂಡ ಯುವರಾಜ್ ಸಿಂಗ್ ಅವರು ಹಲವಾರು ಕಡೆಗಳಲ್ಲಿ ಸುತ್ತಾಡಿದ್ದಾರೆ ಎಂಬ ಸುದ್ದಿ ಇದೆ.

ನಟಿ ರಿಯಸೇನ್ ಅವರ ಜೊತೆಗೂ ಕೂಡ ಹಲವಾರು ಕಾರ್ಯಕ್ರಮಗಳಲ್ಲಿ ಕೈ ಕೈ ಹಿಡಿದುಕೊಂಡು ಓಡಾಡಿ ಸುದ್ದಿಯಾಗಿದ್ದರು ನಂತರ ಅದು ಕೂಡ ಗಾಳಿ ಸುದ್ದಿ ಎನ್ನುವ ಮಾತಿನಂತೆ ಮಾಯವಾಗಿ ಹೋಯಿತು. ಮಿನಿಶಾಲಾಂಬ ಹಾಗೂ ಅಂಚಲ್ ಕುಮಾರ್ ಇವರಿಬ್ಬರ ಜೊತೆಗೂ ಕೂಡ ಕೊನೆ ಕೊನೆಯಲ್ಲಿ ಯುವರಾಜ್ ಸಿಂಗ್ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಗಾಳಿ ಸುದ್ದಿಗಳು ಹರಡಿದ್ದವು, ಆದರೆ ಅಷ್ಟೇ ವೇಗದಲ್ಲಿ ಅವು ಕೂಡ ಮಾಯವಾದವು. ಸದ್ಯಕ್ಕೆ ಈಗ ಬ್ರಿಟಿಷ್ ಮೂಲದ ಬಾಲಿವುಡ್ ನಟಿ ಆಗಿರುವ ಹೇಜಲ್ ಕೀಚ್(Hazel Keech) ರವರನ್ನು ಮದುವೆಯಾಗಿ ಸುಖವಾಗಿ ಸಂಸಾರ ನಡೆಸುತ್ತಿದ್ದಾರೆ.

Leave a Comment

error: Content is protected !!