ನಟಿ ದಿವ್ಯ ಶ್ರೀಧರ್ ಪತಿ ಗೆ ತೃತೀಯ ಲಿಂಗಿ ಜೋತೆ ಸಂಬಂಧ. ದಿವ್ಯ ಬಾಳಲ್ಲಿ ಊಹಿಸಲಾಗದ ಟ್ವಿಸ್ಟ್ !

ಕನ್ನಡ ಮೂಲದ ತಮಿಳುನಾಡಿನ ಕಿರುತೆರೆ ನಟಿ ಆಗಿರುವ ದಿವ್ಯಶ್ರೀಧರ್ ಹಾಗೂ ಆಕೆಯ ಗಂಡ ಅನರ್ವ ಅಲಿಯಾಸ್ ಅಮ್ಜದ್ ಖಾನ್ ನಡುವಿನ ಪ್ರಕರಣ ಎನ್ನುವುದು ಈಗ ನ್ಯಾಯಾಲಯದ ಮೆಟ್ಟಿಲನ್ನು ಏರಿದೆ. ಬೇರೆ ನಟಿಯರ ಜೊತೆಗೆ ಬೇಡದ ಸಂಬಂಧವನ್ನು ಅನರ್ವ್ ಇಟ್ಟುಕೊಂಡಿದ್ದಾನೆ ಎಂಬುದಾಗಿ ದಿವ್ಯಶ್ರೀಧರ್ ನೀಡಿರುವ ದೂರಿನ ಅನ್ವಯ ಆತನನ್ನು ಚಿತ್ರೀಕರಣದ ಸ್ಥಳದಿಂದಲೇ ಪೊಲೀಸರು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಆತ ಕೂಡ ಈಗಾಗಲೇ ದಿವ್ಯ ಬೇರೆಯವನ ಜೊತೆಗೆ ಸೇರಿ ಮಗುವನ್ನು ಹೊಂದಿದ್ದು ಆ ಮಗುವನ್ನು ತೆಗೆಸಲು ಇಷ್ಟೆಲ್ಲ ನಾಟಕ ಮಾಡುತ್ತಿದ್ದಾಳೆ ಎಂಬುದಾಗಿ ಕೂಡ ಪ್ರತ್ಯಾರೋಪ ಮಾಡಿದ್ದಾನೆ.

ಆದರೆ ದಿವ್ಯ ಶ್ರೀಧರ್ ಅವರು ಇತ್ತೀಚಿಗಷ್ಟೇ ಬಿಡುಗಡೆ ಮಾಡಿರುವ ವಿಡಿಯೋ ಮೂಲಕ ಅನರ್ವ್ ಅವರೇ ಆರೋಪಿಯೆಂಬದಾಗಿ ಸಾಬೀತಾಗಿರುವಂತೆ ಕಾಣಿಸುತ್ತಿದೆ. ಇನ್ನು ಸದ್ಯಕ್ಕೆ ಈ ಪ್ರಕರಣದಲ್ಲಿ ಈಗ ಮತ್ತೊಂದು ಆಶ್ಚರ್ಯಕರ ಘಟನೆ ನಡೆದಿದ್ದು ಈ ಬೆಳವಣಿಗೆ ಎನ್ನುವುದು ಈ ಪ್ರಕರಣದ ಪ್ರಮುಖ ತಿರುವನು ನೀಡುವ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ತಿಳಿದು ಬಂದಿದೆ.

ಇದಕ್ಕೂ ಮುನ್ನ ಹತ್ತು ವರ್ಷಗಳ ಹಿಂದೆ ಅನರ್ವ್ ಅವರು ಮಲೇಶಿಯಾ ಮೂಲದ ತೃತೀಯ ಲಿಂಗಿ ಒಬ್ಬರನ್ನು ಮದುವೆಯಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಅವರೇ ಈಗ ಆಡಿಯೋ ಫೈಲ್ ಅನ್ನು ಕೂಡ ಕಳಿಸಿಕೊಟ್ಟಿದ್ದಾರೆ ಎಂಬುದಾಗಿ ಕೂಡ ತಿಳಿದು ಬಂದಿದೆ. ಈ ವಿಚಾರ ತಿಳಿದು ಬರುತ್ತಿದ್ದಂತೆ ಇಡೀ ಕಿರುತೆರೆಯ ಕ್ಷೇತ್ರವೇ ಈ ಪ್ರಕರಣದ ಬಗ್ಗೆ ಸಾಕಷ್ಟು ಕುತೂಹಲದಿಂದ ನೋಡುತ್ತಿದೆ. ಯಾಕೆಂದರೆ ಇಷ್ಟೊಂದು ದೊಡ್ಡ ತಿರುವು ಈ ಪ್ರಕರಣದಲ್ಲಿ ಸಿಗುತ್ತದೆ ಎಂಬುದನ್ನು ಯಾರು ಕೂಡ ಊಹಿಸಿರಲು ಸಾಧ್ಯವಿಲ್ಲ. ಹೀಗಾಗಿ ಇದು ಮುಂದಿನ ದಿನಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುವುದಂತೂ ಖಚಿತ.

ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ರೀತಿಯಲ್ಲಿ ಮೂಡಿ ಬರುತ್ತದೆ ಹಾಗೂ ತನಿಖೆಯಲ್ಲಿ ಇನ್ನು ಯಾವ ರೀತಿಯ ಅವ್ಯಕ್ತ ವಿಚಾರಗಳು ಹೊರಬರುತ್ತವೆ ಎಂಬುದನ್ನು ಕಾದು ನೋಡಬೇಕಾಗಿದೆ. ಈಗಾಗಲೇ ಸಿಕ್ಕಿರುವ ಪುರಾವೆಗಳ ಪ್ರಕಾರ ಅನರ್ವ್ ಅಲಿಯಾಸ್ ಅಮ್ಜದ್ ಖಾನ್ ತಪ್ಪಿತಸ್ಥ ಎಂಬುದಾಗಿ ಸಾಬೀತಾಗುತ್ತಾ ಬಂದಿದ್ದು ಇನ್ನಷ್ಟು ತನಿಖೆಗಳ ನಂತರ ಈ ಪ್ರಕರಣದಲ್ಲಿ ಯಾರು ತಪ್ಪಿತಸ್ಥ ರಾಗಿರುತ್ತಾರೋ ಅವರಿಗೆ ಸರಿಯಾದ ಶಿಕ್ಷೆ ಸಿಗಲಿ ಎಂಬುದೇ ಎಲ್ಲರ ಹಾರೈಕೆಯಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!