ಡ್ರಾಮಾ ಜೂನಿಯರ್ಸ್ ವೇದಿಕೆಯಿಂದಲೆ ಹೆಸರು ಗಳಿಸಿದ ಬಡ ಬಾಲಕ ಮಹೇಂದ್ರನಿಗೆ ಪ್ರತಿ ತಿಂಗಳು ಅಭಿಮಾನಿಗಳು ಕೊಡುವ ಬಂಪರ್ ಗಿಫ್ಟ್ ಗಳು ಏನೇನು ಗೊತ್ತಾ

ಜೀ ಕನ್ನಡ ವಾಹಿನಿಯಲ್ಲಿ 6 ವರ್ಷಗಳ ಹಿಂದೆ ಒಂದು ಅದ್ಭುತವಾದ ಶೋ ನಡೆಯುತ್ತೆ. ಆ ಶೋ ಅದೆಷ್ಟೋ ಮಕ್ಕಳಿಗೆ ಹೊಸ ಜೀವನವನ್ನೇ ಕಟ್ಟಿಕೊಟ್ಟಿದೆ ಅಂದರೆ ತಪ್ಪಾಗಲಿಕ್ಕಿಲ್ಲ. ಹೌದು, ಅದುವೆ ಡ್ರಾಮಾ ಜೂನಿಯರ್ಸ್. 2016 ಆರಂಭವಾದ ಡ್ರಾಮಾ ಜೂನಿಯರ್ಸ್ ನ 4ನೆ ಸೀಸನ್ ಈಗ ನಡೆಯುತ್ತಿದೆ. ಇದರಲ್ಲಿ ನಟಿ ಲಕ್ಷ್ಮಿ, ರವಿಚಂದ್ರನ್ ಮೊದಲಾದವರು ನಿರ್ಮಾಪಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಡ್ರಾಮಾ ಜೂನಿಯರ್ಸ್ ಮೂಲಕ ಹಲವು ಮಕ್ಕಳ ಹೆಸರು ಉತ್ತುಂಗಕ್ಕೇರಲು, ರಾಜ್ಯದ್ಯಂತ ಮಕ್ಕಳು ಗುರುತಿಸಿಕೊಳ್ಳಲು ಕಾರಣವಾಯಿತು.

ಡ್ರಾಮಾ ಜೂನಿಯರ್ಸ್ ಅಂದರೆ ಮಹೇಂದ್ರ ಎನ್ನುವ ಹುಡುಗನ ಹೆಸರು ಖಂಡಿತವಾಗಿಯೂ ನಿಮಗೆಲ್ಲರಿಗೂ ನೆನಪಾಗುತ್ತೆ. ಆತನಿಗೆ ಆರು ವರ್ಷ ಇರುವಾಗಲೇ ಡ್ರಾಮಾ ಜೂನಿಯರ್ಸ್ ನಲ್ಲಿ ಮಿಂಚಿದ ಮಹೇಂದ್ರ ಸದ್ಯ ಸಿನಿಮಾ ಚಿತ್ರೀಕರಣಗಳಲ್ಲಿ ಬ್ಯುಸಿಯಾಗಿದ್ದಾರೆ. ಡ್ರಾಮಾ ಜೂನಿಯರ್ಸ್ ನಲ್ಲಿ ತಮ್ಮ ಅದ್ಬುತ ನಟನೆಯಿಂದ ಎಲ್ಲರನ್ನೂ ರಂಜಿಸಿದ್ದ ಮಹೇಂದ್ರ ಅವರಿಗೆ ಡ್ರಾಮಾ ಜೂನಿಯರ್ಸ್ ವೇದಿಕೆ ಹಲವಾರು ಶೋಗಳಲ್ಲಿ, ಸಿನಿಮಾಗಳಲ್ಲಿ ನಟಿಸುವ ಅವಕಾಶ ಕಲ್ಪಿಸಿಕೊಟ್ಟಿತು. ಅದರಲ್ಲೂ ಅವರ ಮೊದಲ ಸಿನಿಮಾನೇ ದರ್ಶನ್ ಅವರ ಜೊತೆಗಿನ ‘ತಾರಕ್’ ಸಿನಿಮಾ. ಈ ಸಿನಿಮಾ ಶೂಟಿಂಗ್ ಮಾಡುವಾಗ ತನ್ನ ಡೇಟ್ ಗಳಿಗೆ ಸರಿಹೊಂದುವಂತೆ ದರ್ಶನ್ ಅವರು ತಮ್ಮ ಡೇಟ್ ಗಳನ್ನು ಫಿಕ್ಸ್ ಮಾಡಿಕೊಂಡಿದ್ದರು ಎಂದು ಖುಷಿಯಿಂದ ಹೇಳುತ್ತಾರೆ ಮಹೆಂದ್ರ. ಇದುವರೆಗೆ ಹಲವಾರು ಶೋಗಳನ್ನು ಕೊಟ್ಟಿರುವ ಮಹೇಂದ್ರ ಹಾಸ್ಯನಟನಾಗಿ ಕರ್ನಾಟಕದ ಜನತೆಯ ಮನಸ್ಸನ್ನು ಗೆದ್ದಿದ್ದಾರೆ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಈ ಚಿತ್ರದಲ್ಲಂತೂ ಅದ್ಭುತ ಅಭಿನಯವನ್ನು ಮಾಡಿದ ಮಹೇಂದ್ರ ಕನ್ನಡಿಗರ ನೆಚ್ಚಿನ ಹಾಸ್ಯನಟ ಎನಿಸಿದ್ದಾರೆ.

ಇನ್ನು ಮಹೇಂದ್ರ ಕಡುಬಡತನದಲ್ಲಿ ಬೆಳೆದವನು. ಡ್ರಾಮಾ ಜೂನಿಯರ್ಸ್ ಆಮೂಲಕ ಗುರುತಿಸಿಕೊಂಡ ಮಹೇಂದ್ರ ಇದೀಗ ತುಸುಮಟ್ಟಿಗೆ ಜೀವನವನ್ನು ಆರ್ಥಿಕವಾಗಿ ಸುಧಾರಿಸಿಕೊಳ್ಳುವ ಯಶಸ್ವಿಯಾಗಿದ್ದಾರೆ. ಇದಕ್ಕೆ ಅವರೇ ಹೇಳಿಕೊಳ್ಳುವಂತೆ ತಾನು ದುಡಿದ ಹಣವನ್ನ ಈ ಮನೆಯ ರಿಜಿಸ್ಟ್ರೇಷನ್ ಗೆ ಖರ್ಚು ಮಾಡಿದ್ದೇನೆ. ಇನ್ನೂ ನನ್ನ ಬಳಿ ಏನೆಲ್ಲ ವಸ್ತುಗಳಿವೆಯೋ ಅವೆಲ್ಲವನ್ನೂ ತನ್ನ ಫ್ಯಾನ್ಸ್ ಕೊಡಿಸಿದ್ದು ಎಂದು ಮಹೇಂದ್ರ ಖುಷಿಯಿಂದ ಹೇಳಿಕೊಳ್ಳುತ್ತಾರೆ. ಮೊದಲ ಬಾರಿಗೆ ಅಭಿಮಾನಿಯೊಬ್ಬರು 10,000ರೂ ಹಣವನ್ನು ಕೊಟ್ಟಿದ್ದು, ಅದರಿಂದ ಅಮ್ಮನಿಗೆ ಮೊದಲ ಬಾರಿಗೆ ಸ್ಮಾರ್ಟ್ಫೋನ್ ತೆಗೆಸಿ ಕೊಟ್ಟಿದ್ದು, ತಮ್ಮ ಕೈಯಲ್ಲಿರುವ ಮೊಬೈಲ್, ಕುತ್ತಿಗೆಯಲ್ಲಿರುವ ಚಿನ್ನದ ಚೈನ್ ಎಲ್ಲವೂ ತಮ್ಮ ಫ್ಯಾನ್ಸ್ ಕೊಡಿಸಿದ್ದು ಎಂದು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾರೆ ನಟ ಮಹೇಂದ್ರ.

ಬಡತನದಲ್ಲಿಯೇ ಜೀವನವನ್ನು ಇಷ್ಟು ವರ್ಷ ಕಳೆದಿದ್ದು ಮಹೇಂದ್ರಅವರ ಮನೆ ಅತಿ ಚಿಕ್ಕದು ಅಲ್ಲದೆ ಮಳೆಗಾಲ ಬಂದರೆ ಮನೆ ಒಳಗೆ ನೀರು ಸೋರಿ ಮನೆಯಲ್ಲಿ ನೀರು ತುಂಬುತ್ತಿತ್ತಂತೆ. ಈಗ ತಕ್ಕಮಟ್ಟಿಗೆ ಇದನ್ನ ಸರಿ ಮಾಡಿಸಿಕೊಳ್ಳಲು ಸಾಧ್ಯವಾಗಿದೆ ಎನ್ನುತ್ತಾರೆ ಮಹೇಂದ್ರ. ಅಮ್ಮನಿಗೆ ಒಂದು ಒಳ್ಳೆಯ ಸೂರು ಕಟ್ಟಿ ಕೊಡುವ ಆಸೆ ಇರುವ ಮಹೇಂದ್ರ ನಿಟ್ಟಿನಲ್ಲಿ ಸಾಕಷ್ಟು ಕಷ್ಟಪಡುತ್ತಿದ್ದಾರೆ. ಸದ್ಯ ದ್ವಿತೀಯ ಪಿಯುಸಿ ರಿಸಲ್ಟ್ ಗಾಗಿ ಕಾಯುತ್ತಿರುವ ಮಹೇಂದ್ರ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಲು ಸಹಿ ಹಾಕಿದ್ದಾರೆ. ಬೆಳೆಯುವ ಪೈರು ಮೊಳಕೆಯಲ್ಲಿ ಎನ್ನುವಂತೆ ಬಹಳ ಸಣ್ಣ ವಯಸ್ಸಿನಲ್ಲಿ ಅದ್ಭುತ ಅಭಿನಯವನ್ನು ಮಾಡಿ ಜನರನ್ನು ಮೆಚ್ಚಿಸಿದ ಮಹೇಂದ್ರ ಇನ್ನಷ್ಟು ಬೆಳೆಯಲಿ ಎಂಬುದೇ ಎಲ್ಲರ ಹಾರೈಕೆ.

Leave A Reply

Your email address will not be published.

error: Content is protected !!