ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದೆ ಪ್ರಶಾಂತ್ ಸಂಬರ್ಗಿಯ ನಡುವಳಿಕೆಯ ಬಗ್ಗೆ ನೇಹಾ ಗೌಡ ಕೊಟ್ಟ ಶಾಕಿಂಗ್ ಹೇಳಿಕೆ ಏನು ಗೊತ್ತಾ?

ಈಗಾಗಲೇ ಓ ಟಿ ಟಿ ಸೀಸನ್ ಅನ್ನು ಮುಗಿಸಿ ಬಿಗ್ ಬಾಸ್ ಕನ್ನಡ ಸೀಸನ್ 9 ತನ್ನ ಐದು ವಾರಗಳನ್ನು ಈಗಾಗಲೇ ಸಂಪೂರ್ಣವಾಗಿ ಯಶಸ್ವಿಯಾಗಿ ಪೂರೈಸಿದೆ. ಸದ್ಯಕ್ಕೆ ಈಗಾಗಲೇ ಐದು ವಾರಗಳು ಪೂರೈಸಿರುವ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಸ್ಪರ್ಧಾತ್ಮಕ ಮನೋಭಾವ ಎನ್ನುವುದು ಅಗತ್ಯಕ್ಕಿಂತ ಹೆಚ್ಚಾಗಿ ಬೆಳೆದಿದೆ ಎಂದು ಹೇಳಬಹುದಾಗಿದೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಲಕ್ಷ್ಮೀ ಬಾರಮ್ಮ ಧಾರವಾಹಿಯ ಮೂಲಕ ಎಲ್ಲರ ಗಮನ ಸೆಳೆದಿದ್ದ ನಟಿ ನೇಹಾ ಗೌಡ ಅವರು ಕೂಡ ಬಿಗ್ ಬಾಸ್ ಮನೆಯ ಒಳಗೆ ಕಾಲಿಟ್ಟಿದ್ದರು. ಈ ಬಾರಿಯ ಬಿಗ್ ಬಾಸ್ ಅನ್ನು ಗೆಲ್ಲುವ ಸ್ಪರ್ಧಿಗಳಲ್ಲಿ ಫೇವರೆಟ್ ಆಗಿ ನೇಹಾ ಗೌಡ ಅವರು ಕೂಡ ಕಾಣಿಸಿಕೊಂಡಿದ್ದರು. ಪ್ರವೀಣರು ಹಾಗೂ ನವೀನರ ನಡುವೆ ನಡೆಯುತ್ತಿರುವಂತಹ ಈ ಕಾಂಪಿಟೇಶನ್ ಎನ್ನುವುದು ಸಾಕಷ್ಟು ನೆಕ್ಸ್ಟ್ ಲೆವೆಲ್ ನಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಐದನೇ ವಾರಕ್ಕೆ ನೇಹಾ ಗೌಡ ಅವರು ಮನೆಯಿಂದ ಹೊರಬರಬೇಕಾಗಿದೆ.

ಹೌದು ಗೆಳೆಯರೇ ನಟಿ ನೇಹಾ ಗೌಡ ಅವರು ಐದನೇ ವಾರಕ್ಕೆ ಎಲಿಮಿನೇಷನ್ ಆಗಿ ಮನೆಯಿಂದ ಹೊರ ಬಂದಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಿಂದ ಹೊರಬಂದವರೇ ಹಲವಾರು ಟಿವಿ ಮಾಧ್ಯಮಗಳ ಸಂದರ್ಶನದಲ್ಲಿ ಕೂಡ ಭಾಗಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಶಾಂತ್ ಸಾಂಬರ್ಗಿ ಅವರ ಕೊರಿತಂತೆ ಯಾರು ಕೂಡ ಊಹಿಸಲಾಗದ ಹೇಳಿಕೆಯನ್ನು ಕೊಟ್ಟು ಸುದ್ದಿಗೆ ಕಾರಣರಾಗಿದ್ದಾರೆ ನಟಿ ನೇಹ ಗೌಡ.

ಸಂದರ್ಶನದಲ್ಲಿ ನೇಹಾ ಗೌಡ ಅವರು ಪ್ರಶಾಂತ್ ಸಂಬರ್ಗಿ ಅವರ ಜೊತೆಗೆ ಹಗ್ ಮಾಡಿದಾಗ ನನಗೆ ಬೇರೆಯದೇ ಅನುಭವ ಆಗುತ್ತಿತ್ತು. ಅದಕ್ಕಾಗಿ ಅವರ ಬಳಿ ನಾನು ಟಚ್ ಮಾಡಿಸಿಕೊಳ್ಳುತ್ತಿರಲಿಲ್ಲ. ನನಗೆ ಅವರು ಮುಟ್ಟಿದಾಗಲೆಲ್ಲ ಅಸಹ್ಯ ಅನುಭವ ಆಗುತ್ತಿತ್ತು ಎಂಬುದಾಗಿ ಆಶ್ಚರ್ಯಕರ ಹೇಳಿಕೆ ನೀಡುವ ಮೂಲಕ ದೊಡ್ಡ ಮಟ್ಟದ ಆಪಾದನೆಯನ್ನು ಪ್ರಶಾಂತ್ ಅವರ ಮೇಲೆ ನೇಹಾ ಗೌಡ ಅವರು ಹಾಕಿದ್ದಾರೆ ಎಂದು ಹೇಳಬಹುದಾಗಿದೆ. ಮುಂದಿನ ದಿನಗಳಲ್ಲಿ ಇದು ಯಾವ ತಿರುವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Comment

error: Content is protected !!