ಸೋನು ಗೌಡ ಳನ್ನು ಮರೆತು ಇದೀಗ ಅಮೂಲ್ಯ ಗೌಡ ಹಿಂದೆ ಬಿದ್ದ ರಾಕೇಶ್ ಅಡಿಗ

ಬಿಗ್ ಬಾಸ್ ಮನೆಯಲ್ಲಿ ಹೊಸ ಲವ್ವರ್ ಘೋಷಿಸಿದ ರಾಕೇಶ್ ಅಡಿಗ!

ಬಿಗ್ ಬಾಸ್ ಎನ್ನುವುದು ಸ್ಪರ್ಧಿಗಳ ನಡುವಿನ ಸ್ನೇಹ ಕಚ್ಚಾಟ ಹಾಗೂ ಪ್ರೀತಿಯ ಮಿಶ್ರಣ ಎಂದರೆ ತಪ್ಪಾಗಲಾರದು. ಸೆಲೆಬ್ರಿಟಿಗಳು ಸಾಮಾಜಿಕವಾಗಿ ಹೇಗಿರುತ್ತಾರೆ ಹಾಗೂ ನಿಜ ಜೀವನದಲ್ಲಿ ಅವರು ತಮ್ಮನ್ನು ತಾವು ಹೇಗೆ ತೋರಿಸಿಕೊಳ್ಳುತ್ತಾರೆ ಎಂಬುದರ ಪಾರದರ್ಶಕ ರಿಯಾಲಿಟಿ ಶೋ ಬಿಗ್ ಬಾಸ್ ಅನ್ನಬಹುದಾಗಿದೆ.

ಬಿಗ್ ಬಾಸ್ ಓಟಿಟಿ ಪ್ರಾರಂಭವಾದಾಗ ನಿಮಗೆ ಗೊತ್ತಿರಬಹುದು ರಾಕೇಶ್ ಅಡಿಗ ಅವರು ಸೋನು ಶ್ರೀನಿವಾಸ ಗೌಡ ಜಯಶ್ರೀ ಹಾಗೂ ಅಮೂಲ್ಯ ಅವರ ಹಿಂದೆ ಪ್ರೀತಿಯ ಕಥೆ ಕಟ್ಟಿ ತಿರುಗುತ್ತಿದ್ದರು. ಎಲ್ಲರೂ ಕೂಡ ಇವರನ್ನು ಲವರ್ ಬಾಯ್ ಎಂಬುದಾಗಿ ಕರೆಯುತ್ತಿದ್ದರು. ರಾಕೇಶ್ ಅಡಿಗ ಬಿಗ್ ಬಾಸ್ ನಲ್ಲಿ ಪ್ರೀತಿಯ ಆಟ ಆಡುತ್ತಿದ್ದಾರೆ ಎಂಬುದಾಗಿ ಬಿಗ್ ಬಾಸ್ ಪ್ರೇಕ್ಷಕರು ಕರೆಯಲು ಪ್ರಾರಂಭಿಸಿದ್ದರು. ಆದರೆ ಬಿಗ್ ಬಾಸ್ ಕನ್ನಡ ಸೀಸನ್ 9 ಪ್ರಾರಂಭ ಆಗುತ್ತಿದ್ದಂತೆ ಈಗ ರಾಕೇಶ್ ಅಡಿಗ ತಮ್ಮ ಪ್ಲೇಟ್ ಚೇಂಜ್ ಮಾಡಿದ್ದಾರೆ.

ಹೌದು ಮಿತ್ರರೇ, ರಾಕೇಶ್ ಅಡಿಗ ಇತ್ತೀಚಿಗಷ್ಟೇ ಪ್ರಸಾರವಾದ ಬಿಗ್ ಬಾಸ್ ಸಂಚಿಕೆಯಲ್ಲಿ ಸಾನಿಯಾ ಕುಡಿದು ಇಟ್ಟಿದ್ದ ಕಪ್ ಅನ್ನು ತೆಗೆದುಕೊಂಡು ಅದರಲ್ಲಿಯೇ ಟೀ ಕುಡಿದಿದ್ದಾರೆ. ಇದನ್ನು ನೋಡಿರುವ ಸಂಖ್ಯಾಶಾಸ್ತ್ರದ ಆರ್ಯವರ್ಧನ್ ಗುರೂಜಿ ಆ ಹುಡುಗಿ ಕುಡಿದ ಕಪ್ ನಲ್ಲಿಯೇ ಕುಡಿಯುತ್ತಿದ್ದಿಯಲ್ಲ ಎಂಬುದಾಗಿ ಪ್ರಶ್ನೆ ಮಾಡುತ್ತಾರೆ. ಅದಕ್ಕೆ ರಾಕೇಶ್ ಅಡಿಗ ಸಾನಿಯಾ ನನ್ನ ಲವರ್ ಎನ್ನುವುದಾಗಿ ಹೇಳುವ ಮೂಲಕ ಬಿಗ್ ಬಾಸ್ ಮನೆಯವರು ಆಶ್ಚರ್ಯ ಪಡುವಂತೆ ಮಾಡುತ್ತಾರೆ.

ಈ ಪ್ರಶ್ನೆ ಕೇಳಿದಾಗ ರಾಕೇಶ್ ಅಡಿಗ ಸಾನಿಯಾ ಕಡೆಗೆ ನನ್ನ ಬಸ್ ತಿರುಗುತ್ತಿದೆ ಎಂಬುದಾಗಿ ಹೇಳುತ್ತಾರೆ. ಅದಕ್ಕೆ ಆರ್ಯವರ್ಧನ್ ಗುರೂಜಿ ನೋಡಿಕೊಂಡು ಹಾರ್ನ್ ಹೊಡಿ ಎಂಬುದಾಗಿ ಹಾಸ್ಯಾಸ್ಪದವಾಗಿ ಕಾಲೆಳೆಯುತ್ತಾರೆ. ಇದನ್ನು ನೋಡಿರುವ ನೆಟ್ಟಿಗರು ಮಾತ್ರ ರಾಕೇಶ್ ಅಡಿಗ ಡೈಲಿ ಡ್ರೆಸ್ ಚೇಂಜ್ ಮಾಡಿದಂತೆ ದಿನಕೊಬ್ಬರು ಲವ್ವರ್ ಅನ್ನು ಚೇಂಜ್ ಮಾಡುತ್ತಿದ್ದಾರೆ ಎಂಬುದಾಗಿ ಕಾಮೆಂಟ್ ಮಾಡಲು ಪ್ರಾರಂಭಿಸಿದ್ದಾರೆ.

Leave A Reply

Your email address will not be published.

error: Content is protected !!