ಮೇಕಪ್ ಮಹಿಮೆ 30ರ ತರುಣಿ ಎಂದು 54ರ ಆಂಟಿಯನ್ನು ಮದುವೆಯಾಗಿ ಮೋಸ ಹೋದ ವರ

ಮನುಷ್ಯನ ಆಂತರಿಕ ಸೌಂದರ್ಯಕ್ಕಿಂತ ಬಾಹ್ಯ ಸೌಂದರ್ಯ ಶಾಶ್ವತವೇನು ಅಲ್ಲ. ಹೀಗೆ ಮೇಕಪ್ ಮಾಡಿಕೊಂಡು ತಾನೇ ಸುಂದರಿ ಅಂತ ಮೆರೆಯುತ್ತಿದ್ದ ಮಹಿಳೆ ಇಂದು ಕಂಬಿ ಹಿಂದೆ ನಿಂತಿದ್ದಾಳೆ. ಹೌದು ಈಕೆಯ ಹೆಸರು ಶರಣ್ಯ ವಯಸ್ಸು ಸುಮಾರು ಹತ್ತತ್ರ 50. ಲೇಟಾಗಿ ಮದುವೆಯಾಗಿರೋರು ಅಥವಾ ಹೆಂಡತಿಯನ್ನು ಕಳೆದುಕೊಂಡಿರುವ ಗಂಡಸರೇ ಇವಳ ಟಾರ್ಗೆಟ್. ಈಗಾಗಲೇ ಎರಡು ಮದುವೆಗಳನ್ನು ಆಗಿ, ಮೂರನೇ ಮದುವೆಯನ್ನು ಅದ್ದೂರಿಯಾಗಿ ಆಗಿ ಕೊನೆಗೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾಳೆ. ಶರಣ್ಯ ಅವಳ ಮೊದಲನೆಯ ಗಂಡ ರವಿ. ರವಿ ಬಿಎಸ್ಎನ್ಎಲ್ ನಲ್ಲಿ ವೃತ್ತಿ ನಿರ್ವಹಿಸಿದ್ದ ನಿವೃತ್ತ ನೌಕರ. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ನಂತರ ಗಂಡನಿಂದ ಬೇರೆಯಾಗಿ ತಾಯಿ ಮನೆ ಸೇರಿದ ಶರಣ್ಯ ರವೀಯಿಂದ ಸಾಕಷ್ಟು ಹಣವನ್ನು ಪಡೆದಿದ್ದಳು ಎನ್ನಲಾಗುತ್ತಿದೆ. ಆರ್ಥಿಕವಾಗಿ ಸಮಸ್ಯೆಯನ್ನು ಎದುರಿಸುತ್ತಿದ್ದ ಶರಣ್ಯ ದುಡ್ಡು ಮಾಡೋದಕ್ಕೆ ಹುಡುಕಿಕೊಂಡ ದಾರಿ ಎರಡನೇ ಮದುವೆ ಆಗೋದು.

ಶರಣ್ಯ ತನ್ನ ಹೆಸರಿನ ಬದಲಾಯಿಸಿಕೊಂಡು ಬೇರೆ ಗಂಡಸರೊಂದಿಗೆ ಮಾತನಾಡುತ್ತಿದ್ದಳು. ಶರಣ್ಯ ಆಗಾಗ ಸುಕನ್ಯಾ ಆಗಿ ಸಂಧ್ಯಾ ಆಗಿ ಬದಲಾಗುತ್ತಿದ್ದಳು. ಇನ್ನು ಮ್ಯಾರೇಜ್ ಬ್ರೋಕರ್ ಅನ್ನ ಹಿಡಿದು ಶರಣ್ಯ ಮತ್ತೊಂದು ಮದುವೆಗೆ ಸಿದ್ದಳಾಗುತ್ತಾಳೆ. ಆಗ ಜೋಲಾರ್ ಪೇಟೆಯಲ್ಲಿ ರೈಲ್ವೆ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ ಸುಬ್ರಮಣಿ ಪರಿಚಯವಾಗುತ್ತೆ. ಶರಣ್ಯ ಸುಬ್ರಮಣ್ಯ ಬಳಿ ತನ್ನ ಹೆಸರು ಸುಕನ್ಯ ಎಂದು ಹೇಳಿಕೊಂಡು ಆತನನ್ನ ಎರಡನೇ ಮದುವೆ ಆಗುತ್ತಾಳೆ. ಕೆಲವು ವರ್ಷ ಆತನೊಂದಿಗೆ ಸಂಸಾರ ಮಾಡಿ ಕರೋನಾ ಸಮಯದಲ್ಲಿ ಪುತ್ತೂರಿನಲ್ಲಿರುವ ತನ್ನ ತಾಯಿ ಮನೆಗೆ ಹಿಂದಿರುಗಿದ್ದಳು. ಇಲ್ಲಿಗೆ ಬಂದ ಬಳಿಕ ಮತ್ತೆ ಬ್ರೋಕರ್ ನ ಸಂಪರ್ಕಿಸಿ ಇನ್ನೊಂದು ಮದುವೆಗೆ ಸಿದ್ದಳಾಗಿ ಬಿಡುತ್ತಾಳೆ ಶರಣ್ಯ!

ಆಗ ಶರಣ್ಯ ಬಲೆಗೆ ಸಿಕ್ಕಿಹಾಕಿಕೊಂಡ ಮೀನು ತಮಿಳುನಾಡಿನ ಇಂದ್ರಾಣಿ ಹಾಗೂ ಅವರ ಮಗ ಹರಿ. 65 ವರ್ಷದ ಇಂದ್ರಾಣಿ ತಮಿಳುನಾಡಿನ ತಿರುವಲ್ಲೂರಿನ ಪುದುಪೇಟೆ ಎಲ್ಲಿ ತನ್ನ ಮಗ ಹರಿ ಜೊತೆ ವಾಸವಾಗಿದ್ದಾರೆ. ಹರಿ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು ಇವರಿಗೂ ಮದುವೆಯಾಗಿತ್ತು. ಆದರೆ ಹರಿ ಮತ್ತು ಆತನ ಪತ್ನಿಗೆ ವಿಚ್ಛೇದನವಾಗಿರುವ ಕಾರಣ ಮಗನಿಗೆ ಮರು ಮದುವೆ ಮಾಡಲು ಇಂದ್ರಾಣಿ ಶತ ಪ್ರಯತ್ನ ಪಟ್ಟಿದ್ದರು. ಆಗ ಅವರಿಗೆ ಒಬ್ಬ ಬ್ರೋಕರ್ ಮೂಲಕ ತಿರುಪತಿ ಜಿಲ್ಲೆಯ ಪುತ್ತೂರು ಮೂಲದ ಶರಣ್ಯ ಪರಿಚಯವಾಗುತ್ತದೆ. ಇಂದ್ರಾಣಿ ಫೋನ್ ನಲ್ಲಿ ಶರಣ್ಯ ಜೊತೆ ಮಾತನಾಡಿ ಆಕೆ ಉತ್ತಮ ಸಂಸ್ಕಾರ ಇರುವ ಹೆಣ್ಣು ಎಂದು ಭಾವಿಸಿ ತನ್ನ ಮಗುವನಿಗೆ ಸರಿಯಾದ ಜೋಡಿ ಎಂದು ನಿರ್ಧರಿಸುತ್ತಾರೆ.

ಕೊನೆಗೆ ಒಂದು ದಿನ ಹರಿ ಮತ್ತು ಇಂದ್ರಾಣಿ ಶರಣ್ಯ ಅವರ ಮನೆಗೆ ಮದುವೆ ಮಾತುಕತೆಗೆ ಹೋಗುತ್ತಾರೆ. 50ರ ಶರಣ್ಯ ಮೇಕಪ್ ಮಾಡಿಕೊಂಡು ತನ್ನ ನಿಜವಾದ ಸೌಂದರ್ಯವನ್ನು ಅಡಗಿಸಿರುತ್ತಾಳೆ. ಲಕ್ಷಣವಾಗಿದ್ದಾಳೆ ಈಕೆ ಎಂದು ಇಂದ್ರಾಣಿ ತನ್ನ ಮಗನಿಗೆ ತನ್ನದೇ ಖರ್ಚಿನಲ್ಲಿ ಮದುವೆ ಮಾಡಿಸಿಬಿಡುತ್ತಾರೆ ಜೊತೆಗೆ 25,000 ಚಿನ್ನವನ್ನು ಕೂಡ ಶರಣ್ಯ ಅವರಿಗೆ ಹಾಕಿರುತ್ತಾರೆ. ಹರಿಯ ಜೊತೆ ಚೆನ್ನಾಗಿ ಸಂಸಾರ ಮಾಡಿಕೊಂಡಿದ್ದ ಶರಣ್ಯ ಕೆಲವೇ ತಿಂಗಳುಗಳಲ್ಲಿ ತನ್ನ ವರಸೆಯನ್ನು ತೋರಿಸುತ್ತಾಳೆ. ಹರಿ ತನ್ನ ತಿಂಗಳ ಸಂಬಳವನ್ನು ತನ್ನ ಕೈಯಲ್ಲಿ ತಂದುಕೊಡಬೇಕು ಆಸ್ತಿಯನ್ನೆಲ್ಲ ತನ್ನ ಹೆಸರಿಗೆ ಮಾಡಬೇಕು ಎಂದು ಪಟ್ಟು ಹಿಡಿಯುತ್ತಾಳೆ.

ಶರಣ್ಯಳ ಈ ನಡವಳಿಕೆಯನ್ನು ನೋಡಿ ಇಂದ್ರಾಣಿ ಹಾಗೂ ಹರಿಗೆ ಅನುಮಾನ ಬರುತ್ತದೆ ಆಗ ಆಸ್ತಿಯನ್ನು ನಿನ್ನ ಹೆಸರಿಗೆ ಮಾಡುತ್ತೇವೆ ಎಂದು ಹೇಳಿ ಶರಣ್ಯ ಅವಳ ಆಧಾರ್ ಕಾರ್ಡನ್ನು ತೆಗೆದುಕೊಳ್ಳುತ್ತಾರೆ. ಆಧಾರ್ ಕಾರ್ಡ್ ನಲ್ಲಿ ಶರಣ ಗಂಡ ರವಿ ಎಂಬ ಹೆಸರು ಇರುವುದು ಗೊತ್ತಾಗುತ್ತದೆ. ಆಗ ಶರಣ ಮೂಲ ಹಿಡಿದು ಜಾಲಾಡಿದಾಗ ಆಕೆಯ ಅಸಲಿಯತ್ತು ಬಯಲಾಗುತ್ತದೆ. ಇದೀಗ ಇಂದ್ರಾಣಿ ಶರಣ ಪೊಲೀಸ್ ವೊಶಕ್ಕೆ ಒಪ್ಪಿಸಿದ್ದಾರೆ. ಕಂಬಿ ಎಣಿಸುತ್ತಿರುವ ಶರಣ್ಯ ಇಂತಹ ಅದೆಷ್ಟು ವಂಚನೆಯನ್ನು ಮಾಡಿದ್ದಾರೆ ಎನ್ನುವುದು ಇನ್ನೂ ಬಯಲಾಗಬೇಕಿದೆ.

Leave A Reply

Your email address will not be published.

error: Content is protected !!