ಅಂದು ವಿಷ್ಣು ಸರ್ ಜೊತೆ ನಟಿಸಿದ ಈ ಪುಟ್ಟ ಹುಡುಗಿ ಈಗ ಸೂಪರ್ ಸ್ಟಾರ್ ನಟನ ಪತ್ನಿ !

ವಿಷ್ಣುದಾದಾ ಜೊತೆ ನಟಿಸಿದ್ದ ಈ ಪುಟ್ಟ ಹುಡುಗಿ ಈಗ ಸೂಪರ್ ಸ್ಟಾರ್ ನಟನ ಪತ್ನಿ ! ಈಗೇನು ಮಾಡುತ್ತಿದ್ದಾರೆ ಗೊತ್ತಾ ? ಸಿನಿಮಾದಲ್ಲಿ ಮಾಡುವ ನಟನೆಗೂ ಹಾಗೂ ನಿಜ ಜೀವನಕ್ಕೂ ಇರುವ ವ್ಯತ್ಯಾಸಗಳು ತುಂಬಾ ಇರುತ್ತವೆ ಸಿನಿಮಾದಲ್ಲಿರುವ ಸಂಬಂಧಗಳು ನಿಜ ಜೀವನದಲ್ಲಿ ಇಲ್ಲದೇ ಇರಬಹುದು. ಸಿನಿಮಾದಲ್ಲಿ ಇರುವ ನೈತಿಕತೆ ಜೀವನದಲ್ಲಿ ಇರದೇ ಇರಬಹುದು. ಸಿನಿಮಾದಲ್ಲಿ ಮಾಡುವ ಪಾತ್ರಗಳು ಮತ್ತು ಅಲ್ಲಿರುವ ಸಂಬಂಧಗಳು ಒಮ್ಮೊಮ್ಮೆ ಮನಸ್ಸಿನಲ್ಲಿ ಅಚ್ಚೊತ್ತಿದ ಹಾಗೆ ಮೂಡಿ ಅವು ನಿಜ ಜೀವನದಲ್ಲಿಯೂ ಮಾರ್ಪಾಡಾಗಬಹುದು. ಸಿನೆಮಾಕ್ಕೂ ಹಾಗೂ ಜೀವನಕ್ಕೂ ತುಂಬಾ ವ್ಯತ್ಯಾಸವಿದೆ ಆದರೂ ಅದರಲ್ಲಿರುವ ಪಾತ್ರಗಳು ನಟನೆಗೆ ಜೀವ ತುಂಬಿಸುತ್ತವೆ ಹಾಗೆಯೇ ಜೀವನದಲ್ಲಿಯೂ ಸಂಬಂಧಗಳು ಜೀವನಕ್ಕೆ ರಸ ತುಂಬಿಸುತ್ತವೆ.

ಹೀಗೆಯೇ ಇಲ್ಲೊಬ್ಬ ಬಾಲ ನಟಿ! ಆಕೆ ಚಿಕ್ಕಂದಿನಿಂದಲೂ ಸುಮಾರು ಚಿತ್ರಗಳಲ್ಲಿ ಅಭಿನಯಿಸಿ ನಟನೆಯಲ್ಲಿ ಸೈ ಎನಿಸಿಕೊಂಡಾಕೆ ಸಾಹಸ ಸಿಂಹ ಡಾ ವಿಷ್ಣುವರ್ಧನ್ ಅವರ ಜೊತೆ ಈ ಜೀವನ ನಿನಗಾಗಿ ಚಿತ್ರದಲ್ಲಿ ಅಭಿನಯ ಮಾಡಿದ ಈ ಪುಟ್ಟ ಬಾಲಕಿ ಯಾರು? ಈ ಪುಟ್ಟ ಬಾಲಕಿ ಈಗ ದಕ್ಷಿಣ ಭಾರತದ ಟಾಪ್ ನಟನ ಪತ್ನಿಯಾಗಿದ್ದಾರೆ. ಹೆಸರು ಶಾಲಿನಿ ಬೇಬಿ ಶಾಮಿಲಿ ಅವರ ಸಹೋದರಿ ಶಾಲಿನಿ ಈಗ ತಮಿಳಿನ ಖ್ಯಾತ ನಟ ಅಜಿತ್ ಅವರನ್ನು ಮದುವೆಯಾಗಿದ್ದಾರೆ. 80 ಹಾಗೂ 90ರ ದಶಕದಲ್ಲಿ ಬಂದ ಚಿತ್ರಗಳು ಈಗಲೂ ಸಹ ಜನರ ಮನದಲ್ಲಿ ಹಚ್ಚ ಹಸಿರಾಗಿ ಉಳಿದಿವೆ. ಇನ್ನು ಈಗ ಕೂಡ ಟಿವಿಯಲ್ಲಿ ಆ ಸಿನಿಮಾಗಳನ್ನ ನೋಡಿದ್ರೂ ಸಹ ಮನಸ್ಸಿನಲ್ಲಿ ಏನೋ ಪುಳಕ ಉಂಟಾಗುತ್ತದೆ. ಇನ್ನು ಆಗಿನ ಕಾಲದಲ್ಲಿ ಚಿತ್ರಗಳಲ್ಲಿ ನಟಿಸುತ್ತಿದ್ದ ಬಾಲ ಪ್ರತಿಭೆಗಳಿಗೆ ತುಂಬಾ ಪ್ರಾಮುಖ್ಯತೆಯ ಜೊತೆಗೆ ಬೇಡಿಕೆಯು ಸಹ ಇತ್ತು. ಇನ್ನು ಅವರದ್ದೇ ಮುಖ್ಯ ಪಾತ್ರದಲ್ಲಿ ಚಿತ್ರಗಳನ್ನ ಮಾಡಿ ನಿರ್ಮಾಪಕರು ತಮ್ಮ ಜೋಬು ತುಂಬಿಸಿಕೊಳ್ಳುತ್ತಿದ್ದರು. ಅದರಲ್ಲಿ ಬೇಬಿ ಶ್ಯಾಮಲಿಯಂತೆ ಈ ಬಾಲ ನಟಿಯೂ ಕೂಡ ೧೯೮೬ರಲ್ಲಿ ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಳು.

ಇನ್ನು ಸಾಹಸಸಿಂಹ ವಿಷ್ಣುವರ್ಧನ ಅವರ ಜೊತೆ ನಟಿಸಿ ಕನ್ನಡಿಗರ ಮನಗೆದ್ದಿದ್ದ ಈ ಪುಟ್ಟ ಬಾಲಕಿ ಈಗ ಎಲ್ಲಿದ್ದಾರೆ, ಏನುಮಾಡುತ್ತಿದ್ದಾರೆ ಎನ್ನುವುದರ ಬಗ್ಗೆ ನೋಡುವುದಾದರೆ , ಈ ಜೀವ ನಿನಗಾಗಿ ಚಿತ್ರದಲ್ಲಿ ಡಾ.ವಿಷ್ಣುವರ್ಧನ್ ಅವರೊಂದಿಗೆ ನಟಿಸಿದ್ದ ಈ ನಟಿ ಆ ಚಿತ್ರದಲ್ಲಿ ತನ್ನ ತಾಯಿ ಇಹಲೋಕ ತ್ಯಜಿಸಿದ್ದರೂ ಸ್ವರ್ಗಕ್ಕೆ ಫೋನ್ ಮಾಡಿ ತನ್ನ ತಾಯಿ ಜೊತೆ ಮಾತನಾಡುತ್ತಾ ತಾಯಿಯನ್ನ ಮಮಕಾರವನ್ನ ಹುಡುಕುವ ಪಾತ್ರದಲ್ಲಿ ನಟಿಸಿದ್ದ ಈ ಬಾಲನಟಿ ಹೆಸರು ಶಾಲಿನಿ.

ಇನ್ನು ಕನ್ನಡದಲ್ಲಿ ಒಂದೇ ಚಿತ್ರದಲ್ಲಿ ನಟಿಸಿದ್ದ ಈ ಬಾಲನಟಿ ತನ್ನ ಅಭೂತಪೂರ್ವ ಅಭಿನಯದಿಂದ ಕನ್ನಡಿಗರ ಮನಸೂರೆಗೊಳ್ಳುವಲ್ಲಿ ಯಶಸ್ಸಿಯಾಗಿದ್ದಳು. ಇನ್ನು ಈ ಜೀವ ನಿನಗಾಗಿ ಚಿತ್ರದಲ್ಲಿ ನಟಿಸಿದ್ದ ಬೇಬಿ ಶಾಲಿನಿ ತಾನು ಮಾತನಾಡುವ ಭಾಷೆ ಮಲಯಾಳಂ ಆಗಿದ್ದರೂ ಸಹ ಕನ್ನಡ ಭಾಷೆಯನ್ನ ಕಲಿತು ಈ ಚಿತ್ರದಲ್ಲಿ ಒಂದು ಹಾಡನ್ನ ತಾವೇ ಸ್ವತಃ ಕನ್ನಡದಲ್ಲಿ ಹಾಡಿದ್ದಾರೆ ಈ ಪ್ರತಿಭಾವಂತ ಬಾಲನಟಿ. ಇನ್ನು ಬೇಬಿ ಶಾಲಿನಿ ದೊಡ್ಡವರಾದ ಮೇಲೆ ಹಿಟ್ ಮೇಲೆ ಹಿಟ್ ಚಿತ್ರಗಳನ್ನ ಕೊಟ್ಟಿದ್ದು, ದಕ್ಷಿಣ ಭಾರತದ ಖ್ಯಾತ ನಟಿಯಾಗಿ ಬೆಳೆದರು.

20 ನವೆಂಬರ್ 1979ರಲ್ಲಿ ಮಲಯಾಳಿ ಪೋಷಕರಾದ ಬಾಬು ದಂಪತಿಗಳಿಗೆ ಶಾಲಿನಿ ಜನಿಸಿದರು. ಮಲಯಾಳಂನ ಮಮ್ಮುಟ್ಟಿ ಕುಟ್ಟಿಯಾಕಂ ಚಿತ್ರದಲ್ಲಿ ಬಾಲನಟಿಯಾಗಿ ಮೂರು ವರ್ಷ ವಯಸ್ಸಿನವಳಿದ್ದಾಗ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಳು ನಂತರ ಇವರ ಪೋಷಕರು ಚೆನ್ನೈಗೆ ಸ್ಥಳಾಂತರವಾದರು. ಅನಿಯತಿ ಪ್ರವು ಎಂಬ ಸಿನಿಮಾಕ್ಕೆ ನಾಯಕ ನಟಿಯಾಗಿ ಕಾಣಿಸಿಕೊಂಡರು. ಈ ಸಿನಿಮಾ ಸೂಪರ್ ಹಿಟ್ಟಾಗಿ ಇವರನ್ನು ಉತ್ತುಂಗಕ್ಕೆ ಏರಿಸಿತು. ಶಾಲಿನಿ ಅವರು ಬಾಲಕಿಯಾಗಿದ್ದಾಗಲೇ ಬಾಲನಟಿಯಾಗಿ ಅತಿ ಹೆಚ್ಚು ಸಿನಿಮಾಗಳನ್ನು ಮಾಡಿ ಜನಪ್ರಿಯರಾಗಿದ್ದರು ನಾಯಕ ನಟಿಯಾಗಿ ಹತ್ತು ಹನ್ನೆರಡು ಸಿನಿಮಾ ಮಾಡಿದ್ದಾರೆ. ಇನ್ನು ನಾವು ತಿಳಿಯಬೇಕಾದ ಮತ್ತೊಂದು ವಿಷಯ ಏನೆಂದರೆ, ಕನ್ನಡಿಗರಿಗೆ ಅಚ್ಚುಮೆಚ್ಚಿನ ಬಾಲನಟಿಯಾಗಿದ್ದ ಬೇಬಿ ಶ್ಯಾಮಲಿ ಇದೇ ನಟಿ ಶಾಲನಿಯವರ ತಂಗಿ. ಆದರೆ ಬೇಬಿ ಶ್ಯಾಮಲಿ ಬಲ ನಟಿಯಾಗಿದ್ದಾಗ ಇದ್ದ ಬೇಡಿಕೆ ದೊಡ್ಡವರಾದ ಮೇಲೆ ಸಿಗಲಿಲ್ಲ. ಅದರ ಅಕ್ಕ ಶಾಲಿನಿ ಮಾತ್ರ ದೊಡ್ಡವರಾದ ಮೇಲೆ ಹಿಟ್ ಚಿತ್ರಗಳನ್ನ ಕೊಟ್ಟರು. ತ

ನಟ ಅಜಿತ್ ಜೊತೆ 1999ರಲ್ಲಿ ಅಮರ್ಕಲಂ ಎಂಬ ಸಿನಿಮಾ ಮಾಡುತ್ತಿದ್ದರು ಆಗ ಅತಿ ಅಜಿತ್ ಜೊತೆಗೆ ಇವರಿಗೆ ಪ್ರೀತಿ ಮೂಡಿ ನಂತರ ಪೋಷಕರ ಅನುಮತಿ ಪಡೆದು ಮದುವೆಯಾದರು. ಈಗ ಇಬ್ಬರು ಮಕ್ಕಳಿದ್ದು ಸಂತೋಷದಿಂದ ಸಂಸಾರ ನಡೆಸುತ್ತಿದ್ದಾರೆ. ಆದರೆ ತಾವು ಸ್ಟಾರ್ ನಟ ಅಜಿತ್ ಅವರ ಜೊತೆ ವಿವಾಹವಾದ ಮೇಲೆ ನಟನೆಯಿಂದ ದೂರ ಉಳಿದರು. ಇವರು ಮುಂದೆ ಹೀಗೆಯೇ ನಟಿಸುತ್ತಾ ಜನರನ್ನು ರಂಜಿಸುತ್ತಾ ಇರಲಿ ಎಂಬುದು ಅಭಿಮಾನಿಗಳ ಆಶಯ.

Leave A Reply

Your email address will not be published.

error: Content is protected !!