ನಟಿ ಶ್ರುತಿ ಮನೆಯಲ್ಲಿ ಭೀಮನ ಅಮಾವಾಸ್ಯೆ ಪೂಜೆ ಆಚರಣೆ ಹೇಗಿತ್ತು ನೋಡಿ

ಆಷಾಢ ಮುಗಿಯಿತು ಇನ್ನು ಶ್ರಾವಣ ಪ್ರಾರಂಭ. ಹಬ್ಬಗಳ ಸಾಲಲ್ಲಿ, ಕಳೆಗಟ್ಟಿದ ಮನೆ, ತೋರಣ, ಹೂವಿನ ಅಲಂಕಾರ, ತಿಂದು ಸುಸ್ತಾಗುವಷ್ಟು ನಾನಾ ರೀತಿಯ ಅಡುಗೆ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಹಬ್ಬಗಳು ಶುರುವಾಗುವುದೇ ಶ್ರಾವಣ ಮಾಸದಿಂದ. ದಕ್ಷಿಣ ಭಾರತದಲ್ಲಿ ಶ್ರಾವಣ ಮಾಸದಲ್ಲಿ ಮೊದಲ ಹಬ್ಬ ಎಂದರೆ ಅದು ಭೀಮನ ಅಮಾವಾಸ್ಯೆ. ಮನೆಯ ಹೆಣ್ಣು ತನ್ನ ಗಂಡನ ಜೀವನದ ಒಳಿತಿಗಾಗಿ ಮಾಡುವ ಪೂಜೆಯೇ ಭೀಮನ ಅಮಾವಾಸ್ಯೆ. ಇದು ಒಂದು ರೀತಿ ಹೆಣ್ಣು ಮಕ್ಕಳಿಗೆ ಹಬ್ಬವೇ ಎಂದು ಹೇಳಬಹುದು .ಇದಕ್ಕೆ ಎಲ್ಲಾ ಹೆಣ್ಣು ಮಕ್ಕಳು ಭಾಜನಾಗುತ್ತಾರೆ.ಇನ್ನೂ ನಮ್ಮ ಹಿರಿಯ ನಟಿ ಶ್ರುತಿ ಅವರ ಮನೆಯಲ್ಲಿ ಭೀಮನ ಅಮಾವಾಸ್ಯೆ ವ್ರತ ಆಚರಣೆ ಮಾಡಲಾಗುತ್ತದೆ ಅದರ ಒಂದಿಷ್ಟು ಮಾಹಿತಿ ಇಲ್ಲಿದೆ.

ಗಂಡನ ಆಯಸ್ಸು ವೃದ್ದಿಯಾಗಲೆಂದು ಪತ್ನಿಯರು ಆಚರಿಸುವ ಭೀಮನ ಅಮಾವಾಸ್ಯೆಯನ್ನು ಆಷಾಡದ ಅಮವಾಸ್ಯೆಯಂದು ಕೂಡ ಆಚರಿಸಲಾಗುತ್ತೆ. ಭೀಮನ ಅಮಾವಾಸ್ಯೆಯನ್ನು ಮಹಿಳೆಯರು ಭಕ್ತಿಯಿಂದ ಆಚರಿಸುತ್ತಾರೆ. ಜುಲೈ 28 ಭೀಮನ ಅಮಾವಾಸ್ಯೆಯ ಈ ದಿನ ಜ್ಯೋತಿರ್ಭೀಮೇಶ್ವರ ವ್ರತ ಮಾಡಲಾಗುತ್ತೆ.

ಹಿಂದೂ ಸಂಪ್ರದಾಯದಲ್ಲಿ ಆಷಾಢ ಮಾಸದ ಕೊನೆಯ ದಿನವಾದ ಅಮಾವಾಸ್ಯೆಯನ್ನು ಭೀಮನ ಅಮಾವಾಸ್ಯೆ ಎಂದು ಆಚರಿಸಲಾಗುತ್ತದೆ. ಭೀಮ ಎಂದರೆ ಪಾಂಡವ ವಂಶಜ ಭೀಮಸೇನನಲ್ಲ. ಈಶ್ವರನನ್ನು ಈ ಹೆಸರಿನಿಂದ ಕರೆಯಲಾಗುತ್ತದೆ. ಅಪರಿಮಿತ ಬಲ, ಭಕ್ತರ ಮನೋಭಿಷ್ಟ ಈಡೇರಿಕೆಯಂತಹ ಸದ್ಗುಣಗಳುಳ್ಳ ಶ್ರೀರುದ್ರದೇವರನ್ನೂ ಭೀಮ ಎಂದು ಕರೆಯಲಾಗುತ್ತದೆ. ಈ ಭೀಮನಾಮಕ ಶ್ರೀರುದ್ರದೇವರನ್ನು ಜ್ಯೋತಿ ರೂಪದ ದೀಪದಲ್ಲಿ ಆವಾಹಿಸಿ ಪೂಜಿಸುವುದರಿಂದ ಜ್ಯೋತಿರ್ಭೀಮೇಶ್ವರ ವ್ರತ ಎಂದು ಕರೆಯಲಾಗುತ್ತದೆ.

ಮಹಿಳೆಯರು ಬೆಳಗ್ಗೆ ಎದ್ದು, ಶುಚಿರ್ಭೂತರಾಗಿ ಹೊಸ ವಸ್ತ್ರ ಧರಿಸಬೇಕು. ನಂತರ ಒಂದು ತಟ್ಟೆಯಲ್ಲಿ ಅಕ್ಕಿಯನ್ನು ಹರಡಿ, ಅದರ ಮೇಲೆ ಎರಡು ದೀಪಸ್ತಂಭಗಳನ್ನಿಟ್ಟು ತುಪ್ಪ, ಶುದ್ಧ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆ ಹಾಕಿ ಹಚ್ಚಬೇಕು. ಈ ದೀಪಗಳಲ್ಲಿ ಪುರುಷ ಹಾಗೂ ಪ್ರಕೃತಿ ಸ್ವರೂಪರಾದ ಶ್ರೀರುದ್ರದೇವರು ಮತ್ತು ಪಾರ್ವತಿ‌ ದೇವಿಯನ್ನು ಆವಾಹನೆ ಮಾಡಿ ಪೂಜಿಸಬೇಕು. ಜ್ಯೋತಿಯಲ್ಲಿ ಶ್ರೀಜ್ಯೋತಿರ್ಭೀಮೇಶ್ವರ ನನ್ನು ಅನುಸಂಧಾನ ಮಾಡಬೇಕು. ಪೂಜೆಯ ನಂತರ ಕೈಗೆ ಕಟ್ಟಿಕೊಳ್ಳಲು ಬೇಕಾಗುವ ದಾರವನ್ನು ಪೂಜೆಗೆ ಮೊದಲು ಸಿದ್ಧಪಡಿಸಬೇಕು. ಒಂಭತ್ತು ಅಥವಾ ಹನ್ನೆರಡು ಎಳೆಯ ದಾರವನ್ನು ತೆಗೆದುಕೊಂಡು ಒಂಭತ್ತು ಗಂಟು ಹಾಕಬೇಕು. ಇದನ್ನು ದೇವರ ಸಮೀಪದಲ್ಲಿ ವೀಳೆಯದೆಲೆ ಅಥವಾ ಬೆಳ್ಳಿತಟ್ಟೆಯಲ್ಲಿಡಬೇಕು.

ಆವಾಹನೆ ಮಾಡಿದ ದೇವರಿಗೆ ಗಂಧ, ಪುಷ್ಪ ಅರ್ಪಿಸಬೇಕು. ಈ ದಿನ ಕರಿಗಡಬು ಸಮರ್ಪಣೆ ವಿಶೇಷವಾದ್ದರಿಂದ ನೈವೇದ್ಯಕ್ಕೆ ಕರಿಗಡಬು ಹಾಗೂ ಪಾಯಸ ಮತ್ತಿತರ ಭಕ್ಷ್ಯಗಳನ್ನು ಸಮರ್ಪಿಸಬೇಕು. ನಂತರ ಆರತಿ ಮಾಡಿ ಪ್ರಾರ್ಥಿಸಬೇಕು. ದೇವ ದೇವಿಗೆ ನಮಿಸಿ, ಭಕ್ತಿಯುಂದ ಪ್ರಾರ್ಥಿಸಿ ತರುವಾಯ ಗೌರಿ ದಾರವನ್ನು ಕೈಗೆ ಕಟ್ಟಿಕೊಳ್ಳಬೇಕು. ಸುಖ, ಸಂಪತ್ತು, ಸಂತಾನ ಪ್ರದಾಯಕಳಾದ ಪಾರ್ವತಿದೇವಿಯನ್ನು ವಿಶೇಷವಾಗಿ ಪ್ರಾರ್ಥಿಸಿ, ಸ್ಥಿರ ಮಾಂಗಲ್ಯ ಭಾಗ್ಯ ನೀಡುವ ಮೂಲಕ ಪತಿಗೆ ಆಯುಷ್ಯ ಕರುಣಿಸುವಂತೆ ಬೇಡ ಬೇಕು.

ಇದಾದ ಮೇಲೆ ವಿವಾಹಿತ ಮಹಿಳೆ ತನ್ನ ಪತಿಯ ಪಾದಪೂಜೆ ನಡೆಸಿ ನಮಸ್ಕರಿಸಿ ಆಶೀರ್ವಾದ ಪಡೆಯಬೇಕು. ಹೊಸದಾಗಿ ಮದುವೆಯಾದ ದಂಪತಿಗೆ ಇದು ವಿಶೇಷ ದಿನ. ಆಷಾಢಮಾಸ ಕಳೆಯಲು ತವರಿಗೆ ಬಂದ ನವವಧು, ಶ್ರಾವಣದಲ್ಲಿ ಗಂಡನ ಮನೆಗೆ ತೆರಳುತ್ತಾಳೆ. ಪತ್ನಿಯನ್ನು ಕರೆದೊಯ್ಯಲು ಬರುವ ಪತಿಯ ಪಾದಪೂಜೆ ನಡೆಸಿ ಆತನಿಗೆ ವಿಶೇಷ ಆತಿಥ್ಯ ನೀಡುವ ದಿನವಿದು.

ಭೀಮನ ಅಮಾವಾಸ್ಯೆ ಯಂದು ನಟಿ ಶ್ರುತಿ ಅವರ ತಾಯಂದಿರು ಮುಂಜಾನೆಯೇ ಎದ್ದು ಮಡಿಯುಟ್ಟು ತಮ್ಮ ಗಂಡನಾದ ಕೃಷ್ಣ ಅವರಿಗೆ ಭಕ್ತಿಯಿಂದ ಇಬ್ಬರೂ ಮಡದಿಯರು ಒಟ್ಟಿಗೆ ಪಾದಪೂಜೆ ಮಾಡಿ ತಮ್ಮ ಪತಿಯಿಂದ ಆಶೀರ್ವಾದ ಪಡೆದುಕೊಂಡು ನಂತರ ಮೂವರೂ ಜೊತೆಯಾಗಿ ಕೂತು ನೀನಾದೇ ಬಾಳಿಗೆ ಜ್ಯೋತಿ ಎಂದು ಕೃಷ್ಣ ಅವರು ಹಾಡಿದ್ದರೆ , ನಾ ಕಂಡೆ ಕಾಣದ ಪ್ರೀತಿ ,ಮನಸ್ಸು ಹೂವಾಗಿ ,ಕನಸ್ಸು ನೂರಾಗಿ ಈ ಜೀವ ಬಾನಲ್ಲಿ ಹಾರಾಡಿದೆ ಎಂದು ಒಟ್ಟಿಗೆ ಖುಷಿಯಿಂದ ಹಾಡು ಹೇಳುತ್ತಿರುವ ಆ ಮುದ್ದಾದ ವಿಡಿಯೋ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಅದನ್ನು ನೋಡಲು ಎರಡು ಕಣ್ಣು ಸಾಲದಾಗಿದೆ. ಇವರ ಸಂಸಾರದ ಮೇಲೆ ಯಾರ ಕೆಟ್ಟ ದೃಷ್ಟಿಯೂ ಬೀಳದಿರಲಿ.ಹಾಗೆ ಶ್ರುತಿ ಅವರು ಕೂಡ ಅಂದು ದೇವಸ್ಥಾನಕ್ಕೆ ಭೇಟಿ ನೀಡಿ ತಾವೇ ಸ್ವತಃ ದೇವಿಗೆ ಪೂಜೆ ಸಲ್ಲಿಸಿ ,ಅಲ್ಲಿನ ಸ್ವಾಮೀಜಿಯವರ ಆಶೀರ್ವಾದ ಪಡೆದು ಅವರ ಬಳಿಯಲ್ಲಿ ಕೆಲವೊಂದು ಪುಸ್ತಕ ಪಡೆದು ದೇವರ ಕೃಪೆಗೆ ಪಾತ್ರರಾಗಿದ್ದಾರೆ.

Leave A Reply

Your email address will not be published.

error: Content is protected !!