ತುರಿಕೆಗೆ ಸೂಕ್ತ ಪರಿಹಾರ ನೀಡುವ ಮನೆಮದ್ದು ನಿಮ್ಮ ಅಂಗೈಯಲ್ಲೇ ಇದೆ

ತುರಿಕೆ ಸಮಸ್ಯೆ ಎಂಬುದು ಮಾನವನ ಜೀವನದಲ್ಲಿ ಆತನ ಜೀವನದುದ್ದಕ್ಕೂ ಆಗಿಂದಾಗ್ಗೆ ಬಾದಿಸುತ್ತಲೇ ಬರುವಂತಹ ಒಂದು ಸಾಂಕ್ರಾಮಿಕ ರೋಗ ಎಂದರೂ ತಪ್ಪಾಗಲಾರದು, ಯಾಕೆಂದರೆ ಮೈ ಮೇಲೆ ಕೈ ಕಾಲುಗಳ ಮೇಲೆ ಮತ್ತು ಗುಪ್ತಾಂಗಗಳ ಅಕ್ಕ ಪಕ್ಕ ಹೀಗೆ ದೇಹದ ಹಲವಾರು ಭಾಗಗಳಲ್ಲಿ ಚಿಕ್ಕ ಚಿಕ್ಕ ಗಂಧೆಗಳು ಆಗಿ ಅದು ತುರಿಕೆಯಾಗಿ ಪರಿವರ್ತನೆಯಾಗುತ್ತದೆ. ಅದರಲ್ಲೂ ಒಣ ಚರ್ಮ ಹೊಂದಿರುವವರಿಗಂತೂ ತುರಿಕೆಯ ಸಮಸ್ಯೆ ಇದ್ದಿದ್ದೇ ಈ ತುರಿಕೆಯನ್ನು ನಿವಾರಿಸಲು ಜನರು ಹರಸಾಹಸ ಪಡುತ್ತಾರೆ, ಅಲ್ಲದೇ ಹಲವಾರು ಡಾಕ್ಟರ್ ಗಳ ಸಲಹೆ ಪಡೆದೂ ಕೂಡ ಅದರಿಂದ ಪರಿಹಾರ ಸಿಗದೇ ಸದಾ ನವೆ ಉಂಟಾಗುವ ತುರಿಕೆಯನ್ನು ಕೆರೆದು ಕೆರೆದು ಕೊನೆಗೆ ರಕ್ತ ಬರುವ ವರೆಗೂ ಕೆರೆದು ಗಾಯ ಮಾಡಿಕೊಂಡವರಿದ್ದಾರೆ.

ಆದರೆ ತುರಿಕೆಯನ್ನು ನಿವಾರಿಸಿಕೊಳ್ಳಲು ಇಷ್ಟೆಲ್ಲಾ ಅರಸಾಹಸ ಪಡುವುದಕ್ಕಿಂತ ನಾವು ಹೇಳುವ ಈ ಕೆಲವು ಮನೆ ಮದ್ಧುಗಳನ್ನು ನಿಮ್ಮ ಮನೆಯಲ್ಲಿಯೇ ಯಾವ ಕರ್ಚೂ ಸಹ ಇಲ್ಲದೆಯೇ ನಿಮ್ಮ ತುರಿಕೆಯೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ, ಹಾಗಾದ್ರೆ ತುರಿಕೆಗೆ ಮನೆಯಲ್ಲಿಯೇ ನಾವು ಪರಿಹಾರ ಕಂಡುಕೊಳ್ಳಬಹುದಾದ ಅದ್ಭುತ ಸಲಹೆಗಳನ್ನು ನಿಮಗಿಂದು ನೀಡುತ್ತೇವೆ ಬನ್ನಿ.

ಮೊದಲಿಗೆ ನೀವು ಸ್ನಾನ ಮಾಡುವ ತೊಟ್ಟಿಯಲ್ಲಿ ನಿಯಮಿತವಾಗಿ ಅಡುಗೆ ಮಾಡಲು ಉಪಯೋಗಿಸುವ ಸೋಡಾವನ್ನು ಹಾಕಿ ನಂತರ ಆ ಸೋಡಾ ಮಿಶ್ರಿತ ನೀರಿನಲ್ಲಿ ಅರ್ಧ ಗಂಟೆಗಳ ಕಾಲ ಹಾಗೆ ಮುಳುಗಿ ಅದರಲ್ಲಿಯೇ ಸ್ನಾನವನ್ನೂ ಮಾಡಿಕೊಂಡು ನಂತರ ಒಂದು ದಪ್ಪವಿರುವ ಟವಲ್ ನಿಂದ ನಿಮ್ಮ ದೇಹವನ್ನು ಒರೆಸಿಕೊಳ್ಳುವುದರಿಂದ ಕ್ರಮೇಣ ತುರಿಕೆ ಕಡಿಮೆಯಾಗುತ್ತದೆ, ಒಂದು ವಾರ ಹೀಗೆ ಮಾಡಿ ನೋಡಿ ನಿಮ್ಮ ತುರಿಕೆಯಲ್ಲಿ ಅತೀ ವೇಗವಾಗಿ ಬದಲಾವಣೆಗಳನ್ನು ಗಮನಿಸಬಹುದು.

ಇನ್ನು ಎರಡನೆಯದಾಗಿ ರಾತ್ರಿ ಮಲಗುವ ಸಮಯದಲ್ಲಿ ಸ್ವಲ್ಪ ಕೊಬ್ಬರಿಯನ್ನು ಬಿಸಿ ಮಾಡಿಕೊಂಡು ನಂತರ ಅದನ್ನು ನಿಮ್ಮ ದೇಹಕ್ಕೆ ಮಾತು ತುರಿಕೆ ಇರುವ ದೇಹದ ಭಾಗಕ್ಕೆ ಅರ್ಧ ಗಂಟೆಗಳ ಕಾಲ ಮಸಾಜ್ ಮಾಡಿಕೊಒಂದು ಅದು ಸಂಪೂರ್ಣ ಎಣ್ಣೆಯನ್ನು ಹೀರಿಕೊಂಡಾಗ ಮಲಗಬೇಕು, ನಂತರ ಬೆಳಿಗೆ ಎದ್ದು ನಿಮ್ಮ ದೇಹಕ್ಕೆ ಬಿಸಿ ನೀರಿನಿಂದ ಸ್ನಾನ ಮಾಡಿಕೊಳ್ಳಬೇಕು ಹೀಗೆ ಮಾಡುವುದರಿಂದಲೂ ಸಹ ನಿಮ್ಮ ತುರಿಕೆ ನಿವಾರಣೆಯಾಗುವುದರಲ್ಲಿ ಸಂಶಯವಿಲ್ಲ. ಅಲ್ಲದೇ ಆರರಿಂದ ಏಳು ತುಲಸಿ ಎಲೆಗಳನ್ನು ಸ್ವಲ್ಪವೇ ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಆ ಎಣ್ಣೆಯನ್ನು ತುರಿಕೆ ಇರುವ ದೇಹದ ಭಾಗಗಳಿಗೆ ಹಚ್ಚಿ ಅರ್ಧ ಘಂಟೆಯ ನಂತರ ಬಿಸಿ ನೀರಿನಿಂದ ತೊಳೆದುಕೊಳ್ಳುವುದರಿಂದ ನಿಮ್ಮ ತುರಿಕೆಯಲ್ಲಿ ಸುದಾರಣೆಯನ್ನು ಕಾಣಬಹುದಾಗಿದೆ.

Leave A Reply

Your email address will not be published.

error: Content is protected !!