ಹಳ್ಳಿಗಳಲ್ಲಿ ಸಿಗುವಂತ ಈ ಹಣ್ಣಿನಿಂದ ಶರೀರಕ್ಕೆ ಎಷ್ಟೊಂದು ಲಾಭವಿದೆ

ಹಳ್ಳಿಗಳಲ್ಲಿ ಅಥವಾ ನಗರಗಳಲ್ಲಿಯು ಕೂಡ ಈ ಹಣ್ಣನ್ನು ನಾವುಗಳು ಕಾಣಬಹುದು. ಹೌದು ಸಾಮಾನ್ಯವಾಗಿ ಈ ಹಣ್ಣು ಹೆಚ್ಚು ಹಳ್ಳಿಗಳಲ್ಲಿ ಬಳಕೆಯಲ್ಲಿರುತ್ತದೆ ಇದನ್ನು ಚಳ್ಳೆಹಣ್ಣು ಎಂಬುದಾಗಿ ಕರೆಯಲಾಗುತ್ತದೆ. ಈ ಹಣ್ಣು ಯಾವೆಲ್ಲ ಬಳಕೆಯನ್ನು ಹೊಂದಿದೆ ಹಾಗೂ ಇದರಿಂದ ಶರೀರಕ್ಕೆ ಎಷ್ಟೊಂದು ಲಾಭವಿದೆ ಅನ್ನೋದನ್ನ ತಿಳಿಯೋಣ.

ಚಳ್ಳೇಹಣ್ಣುನ್ನು ಉಪ್ಪಿನಕಾಯಿಗೆ ಬಳಸುತ್ತಾರೆ ಈ ಉಪ್ಪಿನಕಾಯಿ ವರ್ಷವಾದರೂ ಕೆಡೋದಿಲ್ಲ, ಇದು ಉತ್ತಮ ಆರೋಗ್ಯವನ್ನು ಹೊಂದಿರುವಂತ ಹಣ್ಣಾಗಿದೆ, ಈ ಹಣ್ಣಿನಲ್ಲಿ ಪ್ರೋಟೀನ್, ಕಬ್ಬಿಣಾಂಶ, ಪೊಟಾಶಿಯಮ್, ಮೆಗ್ನಿಶಿಯಮ್, ಸುಣ್ಣದ ಅಂಶವಿರುತ್ತದೆ ಆದ್ದರಿಂದ ದೇಹಕ್ಕೆ ಉತ್ತಮವಾದ ಹಣ್ಣು ಎಂಬುದಾಗಿ ಹೇಳಬಹುದು.

ಇನ್ನು ಈ ಹಣ್ಣಿನಲ್ಲಿ ಯಾವೆಲ್ಲ ಔಷದಿಯ ಗುಣಗಳಿವೆ ಅನ್ನೋದನ್ನ ನೋಡುವುದಾದರೆ, ಈ ಹಣ್ಣು ವಿರೇಚಕ, ಮೂತ್ರವರ್ಧಕ, ಶಾಮಕ ಮತ್ತು ಕೆಮ್ಮು ನಿವಾರಕವಾಗಿದೆ. ಅಷ್ಟೇ ಅಲ್ಲದೆ ತಲೆಕೂದಲು ಉದುರುವ ಸಮಸ್ಯೆಗೆ ಚರ್ಮ ರೋಗ ತುರಿಕೆ ನಿವಾರಣೆಗೆ ಉತ್ತಮ ಹಣ್ಣಾಗಿದೆ.

ಹೆಣ್ಣುಮಕ್ಕಳಲ್ಲಿ ಉಂಟಾಗುವಂತ ಗರ್ಭಕೋಶದ ಹಾಗೂ ಯಕೃತ್ ತೊಂದರೆಗೆ ಹಣ್ಣಿನ ಔಷಧಿಯಾಗಿ ಈ ಹಣ್ಣು ಕೆಲಸ ಮಾಡುತ್ತದೆ ಚಳ್ಳೆ ಬೀಜದ ಪುಡಿಯಿಂದ ಹುಳಕಡ್ಡಿಯ ಶಮನ. ತೊಗಟೆಯ ಕಷಾಯದಿಂದ ಅತಿಸಾರ ಹೊಟ್ಟೆನೋವು ಗುಣಮುಖವಾಗುವುದು. ಹೀಗೆ ಹತ್ತಾರು ಔಷದಿಯ ಗುಣಗಳನ್ನು ಹೊಂದಿರುವಂತ ಈ ಚಳ್ಳೆಹಣ್ಣು ಮನುಷ್ಯನಿಗೆ ಉಪಯೋಗಕಾರಿಯಾಗಿ ಕೆಲಸ ಮಾಡುತ್ತದೆ.

Leave a Comment

error: Content is protected !!