ಕೆಮ್ಮಿಗೆ ಪರಿಹಾರ ನೀಡುವ ಸುಲಭ ಮನೆ ಔಷಧಿಗಳಿವು

ಕೆಮ್ಮು ಅನ್ನೋದು ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕಾಡುವಂತ ಸಮಸ್ಯೆಯಾಗಿದೆ ಇದು ಯಾವ ಕಾರಣಕ್ಕೆ ಬರುತ್ತದೆ ಅನ್ನೋದನ್ನ ತಿಳಿವುಯುವುದಾರೆ ನೆಗಡಿಯ ಸೋಂಕಿನ ವೈರಸ್ ಗಂಟಲಲ್ಲಿ ಸೋಂಕು ಉಂಟುಮಾಡಿದಾಗ ಕೆಮ್ಮು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಧೂಳಿನಿಂದ ಹೋಗೆ ಕಲುಷಿತ ವಾತಾವರಣ ಅಲರ್ಜಿಯಿಂದ ಹೀಗೆ ಅನೇಕ ಕಾರಣಗಳಿಂದ ಕೆಮ್ಮು ಸಮಸ್ಯೆ ಉಂಟಾಗುತ್ತದೆ ಇದಕ್ಕೆ ಸೂಕ್ತ ಪರಿಹಾರ ನೀಡುವಂತ ಮನೆಮದ್ದುಗಳನ್ನು ತಿಳಿಯೋಣ.

ನಿಂಬೆಹಣ್ಣಿನ ರಸ ಹಾಗೂ ಹಸಿಶುಂಠಿಯನ್ನು ಬೆರಸಿ ತಯಾರಿಸಿದ ಟೀ ದೀರ್ಘಕಾಲದ ಕೆಮ್ಮನ್ನು ಪರಿಹರಿಸುವಲ್ಲಿ ಅತ್ಯಂತ ಪರಿಣಾಮಕಾರಿ, ಶುಂಠಿಯಲ್ಲಿ ಇರುವಂತ ಮುಖ್ಯವಾದ ಔಷದಿಯ ಗುಣ ಏನು ಅನ್ನೋದನ್ನ ತಿಳಿಯುವುದಾದರೆ ಅದು ಕೆಮ್ಮು ಕಫ ನೆಗಡಿ ಶ್ವಾಸಕೋಶ ಸಂಬಂಧಿತ ರೋಗಗನ್ನು ಗುಣ ಪಡಿಸುತ್ತದೆ. ನಿಂಬೆಯಲ್ಲಿರುವಂತ ಆಸ್ಕೊರ್ಬಿಕ್ ಆಮ್ಲವು ಕೆಮ್ಮನ್ನು ಉಂಟು ಮಾಡುವಂತ ಕಫವನ್ನು ನಿರ್ಮೊಲನೆ ಮಾಡಲು ಸಹಕಾರಿಯಾಗಿರುತ್ತದೆ.

ಜೇನುತುಪ್ಪವು ಕೆಮ್ಮನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ನಿವಾರಿಸುವುದರ ಮೂಲಕ ಪರಿಹಾರ ನೀಡುವಂತ ಕೆಲಸ ಮಾಡುವುದು, ಇನ್ನು ರೋಗನಿವಾರಕದಂತೆ ಕೆಲಸ ಮಾಡುವುದು ರಾತ್ರಿ ವೇಳೆಗಳಲ್ಲಿ ಮಾತ್ರವೇ ಕೆಮ್ಮು ಕಾಡುತ್ತಿದ್ದರೆ ಊಟದ ಬಳಿಕ ಮಲಗುವಮುನ್ನ ಎರಡು ಚಮಚ ಜೇನುತುಪ್ಪವನ್ನು ಹಾಗೆ ತಿನ್ನುವುದರಿಂದ ಪರಿಣಾಮಕಾರಿಯಾಗಿ ಕೆಮ್ಮು ಕಡಿಮೆಯಾಗುವುದನ್ನು ಕಾಣುವಿರಿ.

ಒಂದು ಚಮಚ ಜೇನುತುಪ್ಪದೊಂದಿಗೆ ಕರಿಮೆಣಸಿನ ಪುಡಿಯನ್ನು ಬೆರಸಿ ದಿನಕ್ಕೆರಡು ಬಾರಿ ಸೇವಿಸುವದರಿಂದ ಕೆಮ್ಮು ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲದೆ ಎರಡು ಚಮಚ ಜೇನುತುಪ್ಪವನ್ನು ಒಂದು ಲೋಟ ಅಲೋವೆರಾ ರಸದೊಂದಿಂಗೆ ಬೆರಸಿ ಸೇವಿಸಿದರೆ ಒಣಕೆಮ್ಮು ಬಹುಬೇಗನೆ ಗುಣವಾಗುವುದು.

ಸೋಂಪು ಹಾಗೂ ತುಳಸಿ ಎಲೆಗಳನ್ನು ಹಾಕಿ ತಯಾರಿಸಿದ ಟೀ ಕುಡಿಯುವುದರಿಂದ ಗಂಟಲಿಗೆ ಆರಾಮ ದೊರೆಯುತ್ತದೆ. ಅಷ್ಟೇ ಅಲ್ಲದೆ ನೆನೆಹಾಕಿದ ಬಾದಾಮಿಯನ್ನು ಅರೆದು ಬೆಣ್ಣೆಯೊಂದಿಗೆ ಸೇವಿಸುವುದರಿಂದ ಸಹ ಕೆಮ್ಮನ್ನು ಪರಿಣಾಮಕಾರಿಯಾಗಿ ನಿವಾರಿಸಿಕೊಳ್ಳಬಹುದು.

Leave A Reply

Your email address will not be published.

error: Content is protected !!