ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಮದುವೆ ಸಂಭ್ರಮ

ಡಾರ್ಲಿಂಗ್ ಕೃಷ್ಣ ಮದರಂಗಿ ಮತ್ತು ಲವ್ ಮಾಕ್ಟೇಲ್ ಚಿತ್ರದ ಮೂಲಕ ತನ್ನ ಹೆಸರನ್ನು ಪ್ರಚಲಿತಗೊಳಿಸಿ ಕೊಂಡವರು ಜೊತೆಗೆ ಅತ್ಯುತ್ತಮ ಪ್ರೇಕ್ಷಕರ ಮನ ಗೆದ್ದವರು ಕೂಡ ಆಗಿದ್ದಾರೆ. ಇವರ ಒಂದು ವಿಭಿನ್ನ ಪ್ರಯತ್ನ ಚಿತ್ರವು ಗೆಲುವನ್ನು ಕಂಡಿದೆ. ಇವರ ಮೊದಲ ಹೆಸರು ಸುನಿಲ್ ನಾಗಪ್ಪ. ಸುನಿಲ್ ನಾಗಪ್ಪ ಅವರು 12 ಜೂನ್ 1985 ರಂದು ಮೈಸೂರಿನಲ್ಲಿ ಜನಿಸುತ್ತಾರೆ. ಇವರ ತಂದೆ ನಾಗಪ್ಪ ಅವರು ರಿಟೈರ್ಡ್ ಪೊಲೀಸ್ ಆಫೀಸರ್ ಆಗಿದ್ದಾರೆ. ಸುನಿಲ್ ನಾಗಪ್ಪ ಅವರು ಎಂಬಿಎ ಗ್ರಾಜುಯೇಷನ್ ಪಡೆದಿರುತ್ತಾರೆ. ಇವರ ಮದುವೆಯ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಇವರು ಜಾಕಿ ಚಿತ್ರದ ಮೂಲಕ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಜೊತೆಗೆ ಸಣ್ಣ ಪಾತ್ರದಲ್ಲಿಯೂ ಕಾರ್ಯನಿರ್ವಹಿಸುತ್ತಾರೆ. ನಂತರ 2011ರಲ್ಲಿ ಹುಡುಗರು ಚಿತ್ರದಲ್ಲಿ ಗೆಸ್ಟ್ ರೋಲ್ ಜೊತೆಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಾರೆ.2013ರಲ್ಲಿ ಮದರಂಗಿ ಚಿತ್ರದ ಮೂಲಕ ನಾಯಕ ನಟರಾಗಿ ಪಾದಾರ್ಪಣೆ ಮಾಡುತ್ತಾರೆ. ನಂತರ 2020ರಲ್ಲಿ ಲವ್ ಮಾಕ್ಟೇಲ್ ಎಂಬ ಚಿತ್ರವನ್ನು ಮಾಡಿ ಯಶಸ್ಸನ್ನು ಕಾಣುತ್ತಾರೆ. ಈಗ ಲವ್ ಮಾಕ್ಟೇಲ್ ಭಾಗ ಎರಡು ಚಿತ್ರವನ್ನು ನಿರ್ದೇಶನದ ಮೂಲಕ ನಾಯಕ ನಟರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತೆಯೇ ಮಿಲನ ನಾಗರಾಜ್ ಅವರು ನಾಗರಾಜ್ ಹಾಗೂ ಚಂದ್ರಕಲಾ ದಂಪತಿಗೆ 25 ಏಪ್ರೀಲ್ 1989ರಲ್ಲಿ ಹಾಸನದಲ್ಲಿ ಜನಿಸುತ್ತಾರೆ.

ಅವರು ತನ್ನ ಶಾಲಾ ಶಿಕ್ಷಣ ಮತ್ತು ಕಾಲೇಜು ಶಿಕ್ಷಣವನ್ನು ಹಾಸನದಲ್ಲಿಯೇ ತೆಗೆದುಕೊಂಡರು. ಬೆಂಗಳೂರಿನ ವಿಕೆಐಟಿ ಕಾಲೇಜಿನಿಂದ ಎಂಜಿನಿಯರಿಂಗ್ ಮಾಡಿದರು. ಇವರು 12ನೇ ತರಗತಿಯಲ್ಲಿ ಇರುವಾಗ ಬೋರ್ಡ್ ಪರೀಕ್ಷೆಗೆ ಕೆಲವೇ ತಿಂಗಳುಗಳ ಮೊದಲು ಇವರು ಅಪಘಾತಕ್ಕೀಡಾದರು. ಇವರ ಕಾಲಿನ ಮೂಳೆ ತುಂಬಾ ಕೆಟ್ಟದಾಗಿ ಮುರಿದುಹೋಗಿತ್ತು. ಈ ದುರಂತದಿಂದ ಇವರಿಗೆ ಈಜಲು ಸಾಧ್ಯವಾಗಲಿಲ್ಲ. ನಂತರ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ಎಂಜಿನಿಯರಿಂಗ್ ಗೆ ಆಯ್ಕೆಯಾದರು. ಇವರು “ಮಿಸ್ ಕರ್ನಾಟಕ” ಸ್ಪರ್ಧೆಯಲ್ಲಿ “ಮಿಸ್ ಬೆಸ್ಟ್ ಪರ್ಸನಾಲಿಟಿ” ವಿಜೇತರಾದರು. ನಂತರ ಅವರು ನಮ್ ದುನಿಯಾ ನಮ್ ಸ್ಟೈಲ್ ಚಲನಚಿತ್ರದ ಮೂಲಕ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು. ನಂತರ ಹಲವು ಸಿನಿಮಾಗಳಲ್ಲಿ ಪಾತ್ರ ನಿರ್ವಹಿಸುತ್ತಾರೆ. ಲವ್ ಮಾಕ್ಟೇಲ್ ನ ಮೂಲಕ ಮಿಲನ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಅವರು ಮುಖ್ಯಪಾತ್ರದಲ್ಲಿ ಕಾರ್ಯನಿರ್ವಹಿಸುತ್ತಾರೆ. ಈ ಮೊದಲು ನಮ್ಮ ದುನಿಯಾ ನಮ್ ಸ್ಟೈಲ್ ಚಿತ್ರದಲ್ಲಿ ಇವರಿಬ್ಬರಿಗೂ ಪರಿಚಯವಾಗಿರುತ್ತದೆ. ಈ ಮೂಲಕ ಇವರು ತುಂಬಾ ಸ್ನೇಹಿತರಾಗುತ್ತಾರೆ.

ಸ್ನೇಹ ಪ್ರೀತಿಗೆ ತಿರುಗುತ್ತದೆ ಮತ್ತು ಮತ್ತು ಮೀಡಿಯಾದಲ್ಲಿ ಇವರ ಪ್ರೇಮಗಳ ವಿಚಾರವಾಗಿ ಅನೇಕ ವಿಚಾರಗಳು ಕೂಡ ಹೊರಹೊಮ್ಮುತ್ತದೆ. ಸುಮಾರು ಐದು ವರ್ಷಗಳಿಂದ ಸ್ನೇಹ, ಪ್ರೀತಿ ಸಂಬಂಧವನ್ನು ಹೊಂದಿರುತ್ತಾರೆ. ನಂತರ ಇವರ ಪ್ರೀತಿಗೆ ಎರಡು ಮನೆಯಿಂದ ಒಪ್ಪಿಗೆ ದೊರೆತು ಮದುವೆಗೆ ಸಿದ್ಧರಾಗಿದ್ದಾರೆ. ಎರಡು ಕುಟುಂಬಗಳಲ್ಲಿಯೂ ಒಳ್ಳೆಯ ಬಾಂಧವ್ಯ ಬೆಳೆದಿದೆ ಎಂದು ಹೇಳಲಾಗುತ್ತಿದೆ. ಈ ಫೆಬ್ರವರಿ 14ರಂದು ಅಂದರೆ ಪ್ರೇಮಿಗಳ ದಿನದಂದೇ ಇವರ ವಿವಾಹ ನೆರವೇರಲಿದ್ದು ಇದಕ್ಕಾಗಿ ಸಕಲ ಸಿದ್ಧತೆ ನಡೆದಿದೆ. ಈ ಮದುವೆಯ ತಯಾರಿಯನ್ನು ಇವರಿಬ್ಬರು ಸ್ನೇಹಿತರೊಂದಿಗೆ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಈ ಜೋಡಿಗೆ ಮದುವೆಯ ಶುಭ ಹಾರೈಸೋಣ.

Leave a Comment

error: Content is protected !!