ಗ್ಯಾಸ್ಟ್ರಿಕ್ ಸಮಸ್ಯೆ ಗೆ ಇಲ್ಲಿದೆ ಸುಲಭ ಪರಿಹಾರ

ಗ್ಯಾಸ್ಟ್ರಿಕ್ ಇಂದು ಎಲ್ಲರಿಗೂ ಕಾಡುವ ಸಾಮಾನ್ಯವಾದ ಸಮಸ್ಯೆಯಾಗಿದೆ. ಸರಿಯಾದ ಸಮಯಕ್ಕೆ ಊಟ ಮಾಡದೆ ಇದ್ದರೆ ಇಂತಹ ಸಮಸ್ಯೆ ಉದ್ಭವ ವಾಗುತ್ತದೆ. ಹೊಟ್ಟೆಯಲ್ಲಿ ಉರಿ, ಕಣ್ಣು ಮಂಜಾಗುವುದು, ಆಯಾಸ, ಇವು ಗ್ಯಾಸ್ಟ್ರಿಕ್ ನ ಲಕ್ಷಣಗಳಾಗಿವೆ. ಗ್ಯಾಸ್ಟ್ರಿಕ್ ಸಮಸ್ಯೆಗೆ ಇರುವ ಪರಿಹಾರವೇನು ಇಲ್ಲಿದೆ ಅದಕ್ಕೆ ಉತ್ತರ.

ಗ್ಯಾಸ್ಟ್ರಿಕ್ ಸಮಸ್ಯೆ ಗೆ ಮನೆಮದ್ದು ಸೂಕ್ತವಾಗಿದ್ದು. ಆಹಾರ ಚಿಕಿತ್ಸೆಯಿಂದ ಪರಿಹಾರ ಕಂಡುಕೊಳ್ಳಬಹುದು. ಗ್ಯಾಸ್ಟ್ರಿಕ್ ಸಮಸ್ಯೆಗೆ ಪ್ರತಿದಿನ ಔಷಧಿ ಮಾತ್ರೆಗಳನ್ನು ತಗೆದುಕೊಳ್ಳುವ ಬದಲು ತಮ್ಮ ಆಹಾರ ಶೈಲಿಯಲ್ಲಿ ಒಂದಿಷ್ಟು ಜಾಗ್ರತೆವಹಿಸುವದು ತುಂಬಾನೇ ಒಳ್ಳೆಯದು ಅನ್ನೋದನ್ನ ತಗಣರು ಹೇಳುತ್ತಾರೆ

ಆಹಾರ ಚಿಕಿತ್ಸೆ: ಮನೆಯಲ್ಲಿನ ಆಹಾರ ಪದಾರ್ಥಗಳಿಂದ ಗ್ಯಾಸ್ಟ್ರಿಕ್ ಸಮಸ್ಯೆ ದೂರ ಮಾಡಬಹುದು. ಈ ಸಮಸ್ಯೆಗೆ ಆಹಾರ ವಿಧಾನದ ಪರಿಹಾರ ಹೀಗಿದೆ. ಐದು ಚಮಚ ಕಪ್ಪು ಜೀರಿಗೆ, ಐದು ಚಮಚ ಅಜ್ವಾನ ಕಾಳು, ಐದು ಚಮಚ ಒಣ ಶುಂಠಿ ಪೌಡರ್, ಐದು ಚಮಚ ಸೋಪಿನ ಕಾಳು, ಇವುಗಳನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ ನಂತರ ಬಿಸಿ ನೀರಿನೊಂದಿಗೆ ಪ್ರತಿದಿನ ಸೇವಿಸಿದರೆ ಗ್ಯಾಸ್ಟ್ರಿಕ್ ಕಡಿಮೆ ಆಗುತ್ತದೆ.

ಇದಲ್ಲದೆ ಜೀರಿಗೆ ಹಾಗೂ ಬೆಲ್ಲವನ್ನ ನೀರಿನಲ್ಲಿ ಹಾಕಿ ಕುದಿಸಿ ಕಶಾಯ ಮಾಡಿ ಕುಡಿಯುವುದರಿಂದ ಈ ಸಮಸ್ಯೆ ದೂರವಾಗುತ್ತದೆ.ಇನ್ನೂಂದು ರೀತಿಯ ಆಹಾರ ವಿಧಾನದಿಂದಲೂ ಗ್ಯಾಸ್ಟ್ರಿಕ್ ಸಮಸ್ಯೆ ದೂರ ಮಾಡಿಕೊಳ್ಳಬಹುದು. ಪುದಿನ ಎಲೆಗಳನ್ನು ಒಣಗಿಸಿ ಅದನ್ನು ಪುಡಿ ಮಾಡಿ ಬಿಸಿ ನೀರಿನಲ್ಲಿ ಸೇವಿಸಿದರೆ ಈ ಸಮಸ್ಯೆ ಪರಿಹಾರ ವಾಗುತ್ತದೆ.

Leave a Comment

error: Content is protected !!