ರಾತ್ರಿ ತಡವಾಗಿ ನಿದ್ರೆ ಬರುತ್ತದೆಯೇ? ನಿದ್ರಾಹೀನತೆ ದೂರ ಮಾಡುವ ವಿಧಾನ

ಯಾಂತ್ರಿಕ ಬದುಕಿನಲ್ಲಿ ಆರೋಗ್ಯದ ಕಡೆಯೂ ಗಮನ ಹರಿದಷ್ಟು ಕೆಲಸದಲ್ಲಿ ನಿರತರಾಗಿದ್ದೆವೆ. ಹೀಗಿರುವಾಗ ಮನುಷ್ಯನಿಗೆ ಒಂದಿಲ್ಲೊಂದು ಆರೋಗ್ಯ ಸಮಸ್ಯೆಗಳು ಕಾಡುತ್ತಿರುತ್ತದೆ. ಅದರಲ್ಲೂ ಈ ನಿದ್ರಾ ಹೀನತೆಯಿಂದ ಬಳಲುವವರ ಸಂಖ್ಯೆಯು ಅಧಿಕವಾಗಿದೆ. ನಿದ್ರಾಹೀನತೆ ಸಾಮಾನ್ಯವಾದ ಅನಾರೋಗ್ಯಕರ ಸಮಸ್ಯೆಯಾಗಿದ್ದು, ಇದರಿಂದ ನೆಮ್ಮದಿಯ ನಿದ್ರೆಗೆ ಕತ್ತರಿ ಬಿಳುತ್ತಿದೆ. ಸರಿಯಾದ ನಿದ್ರೆ ಇಲ್ಲದೆ ಆರೋಗ್ಯ ದಲ್ಲಿ ಏರುಪೇರಾಗುತ್ತಿದೆ. ಹಾಗಾದರೆ ಸುಖನಿದ್ರೆಗೆ ಈ ಟಿಪ್ಸ್ ಫಾಲೋ ಮಾಡಿ.

ಹಾರ್ಮೋನ್ ಗಳ ವ್ಯತ್ಯಾಸದಿಂದ ನಿದ್ರಾ ಹೀನತೆ ಸಮಸ್ಯೆ ಉಂಟಾಗುತ್ತದೆ. ದಿನದಲ್ಲಿ 6 ಗಂಟೆ ನಿದ್ರೆ ಮಾಡಿದರೆ ಮಿದುಳಿನಲ್ಲಿನ ಪ್ರಕ್ರಿಯೆಗಳು ವ್ಯವಸ್ಥಿತವಾಗಿ ನಡೆಯುತ್ತದೆ. ನಿದ್ರೆ ಬರುತ್ತಿಲ್ಲ ವೆಂದರೆ 10 ನಿಮಿಷಗಳ ದೇವರ ಧ್ಯಾನ ಮಾಡಿ. ಈ ರೀತಿ ಮಾಡುವುದರಿಂದ ಒತ್ತಡ ಕಡಿಮೆಯಾಗಿ ನೆಮ್ಮದಿಯಾಗಿ ನಿದ್ರೆ ಮಾಡಬಹುದಾಗಿದೆ.

ತಲೆಗೆ ಮತ್ತು ಕಾಲಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿಕೊಂಡರೆ ನಿಮ್ಮ ಶರೀರವು ತಂಪಾಗಿ ನಿರಾಳವಾಗುತ್ತದೆ ಇದರಿಂದ ಆರಾಮಾಗಿ ನಿದ್ರೆ ಮಾಡಬಹುದು. ಒಂದು ಬಕೆಟ್ ಬೆಚ್ಚಗಿನ ನೀರಿನಲ್ಲಿ ನಿಮ್ಮ ಎರಡು ಕಾಲುಗಳನ್ನು ಅರ್ಧಗಂಟೆ ಇಟ್ಟರೆ ನಿಮ್ಮ ದೇಹವು ಉಷ್ಣತೆಯಿಂದ ನೀರಾಳವಾಗಿ ಸುಖನಿದ್ರೆ ನಿಮ್ಮದಾಗುತ್ತದೆ.

ನಿದ್ರಾ ಹೀನತೆಯಿಂದ ಬಳಲುವವರು ಪ್ರತಿದಿನ ಒಂದು ಲೋಟ ಹಾಲು ಕುಡಿದು ಮಲಗಿದರೆ ಚೆನ್ನಾಗಿ ನಿದ್ದೆ ಮಾಡಬಹುದು. ಅಧಿಕ ನಿದ್ರಾ ಹೀನತೆಯಿಂದ ಸಮಸ್ಯೆಬಳಲುವವರು ಸೋಮಿನಿ ಎನ್ನುವ ಆರ್ಯುವೇದಿಕ್ ಮಾತ್ರೆಗಳನ್ನು ಪ್ರತಿರಾತ್ರಿ 1 ರಂತೆ ತೆಗೆದುಕೊಂಡರೆ ನಿದ್ರಾ ಹೀನತೆ ಕ್ರಮೇಣವಾಗಿ ಕಡಿಮೆ ಆಗುತ್ತದೆ. ಇದರಲ್ಲಿ ಯಾವುದೇ ರೀತಿಯಾದ ಅಡ್ಡ ಪರಿಣಾಮಗಳಿರುವುದಿಲ್ಲ.ಈ ರೀತಿಯ ನೈಸರ್ಗಿಕ ಟಿಪ್ಸ್ ಗಳನ್ನು ನಿಯಮಿತವಾಗಿ ಅನುಸರಿದರೆ ನಿದ್ರಾ ಹೀನತೆ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.

Leave A Reply

Your email address will not be published.

error: Content is protected !!