ಸರ್ಕಾರ ಯಾಕೆ ನಮಗೆ ಬೇಕಾದಷ್ಟು ನೋಟುಗಳನ್ನು ಪ್ರಿಂಟ್ ಮಾಡೋದಿಲ್ಲ ಗೊತ್ತೇ? ಓದಿ.

ನಮಗೆಲ್ಲ ತಿಳಿದಿರುವಂತೆ ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿಯೂ ನೋಟನ್ನು ಮುದ್ರಿಸುವ ಯಂತ್ರಗಳು ಇವೆ. ಹೀಗಿರುವಾಗ ಎಲ್ಲಾ ದೇಶಗಳೂ ತಮ್ಮ ತಮ್ಮ ದೇಶಕ್ಕೆ ಅಗತ್ಯ ಇರುವಂತಹ ನೋಟುಗಳನ್ನು ಮುದ್ರಿಸಬಹುದು ಹಾಗೇ ಬೇಕಾದಷ್ಟು ನೋಡ್ತುಗಳನ್ನು ಮುದ್ರಿಸಿ ಎಲ್ಲರನ್ನೂ ಶ್ರೀಮಂತರನ್ನಾಗಿಯೂ ಮಾಡಬಹುದು ಅಲ್ಲವೇ? ಈ ರೀತಿಯ ಪ್ರಶ್ನೆ ಸಾಕಷ್ಟು ಜನರಲ್ಲಿ ಕಾಡುತ್ತಿರಬಹುದು. ಒಂದುವೇಳೆ ಸರ್ಕಾರ ಜನರಿಗೆ ಬೇಕಾದಷ್ಟು ನೋಟುಗಳನ್ನು ಮುದ್ರಿಸಿದ್ದೆ ಆಗಿದ್ದಲ್ಲಿ ಜಗತ್ತಿನಲ್ಲಿ ಯಾರೂ ಕೂಡಾ ಬಡವರು ಇರುತ್ತಲೆ ಇರಲಿಲ್ಲ ಎಲ್ಲರೂ ಶ್ರೀಮಂತರೇ ಆಗಿರುತ್ತಿದ್ದರು. ಯಾರಿಗೂ ಯಾವ ಕೆಲಸವನ್ನೂ ಮಾಡುವ ಅವಶ್ಯಕತೆ , ಅಗತ್ಯ ಆಗಲೀ ಇರುತ್ತಿರಲಿಲ್ಲ ಜಗತ್ತಿನಲ್ಲಿ ಯಾವ ರೈತನೂ ಆಗ ಆತ್ಮಹತ್ಯೆ ಮಾಡಿಕೊಳ್ಳುತ್ತಾ ಇರಲಿಲ್ಲ ಯಾರೂ ಭಿಕ್ಷೆ ಬೇಡುತ್ತಲೂ ಇರಲಿಲ್ಲ. ಆದರೆ ಒಮ್ಮೆ ಯೋಚಿಸಿ ಒಂದುವೇಳೆ ಹೀಗೆ ಆದರೆ ಕೂಡಾ ಎಲ್ಲಾ ಕಡೆ ಗಲಿಬಿಲಿ ಗೊಂದಲ ಉಂಟಾಗುತ್ತಿತ್ತು. ಸರ್ಕಾರ ಯಾತಕ್ಕಾಗಿ ಎಲ್ಲರಿಗೂ ಅಗತ್ಯ ಇರುವಷ್ಟು ನೋಟುಗಳನ್ನು ಮುದ್ರಣ ಮಾಡುವುದಿಲ್ಲ? ಹಾಗೆ ಮಾಡಿದರೆ ಅದರ ಪರಿಣಾಮ ಏನಾಗುವುದು ಇವೆಲ್ಲದರ ಕುರಿತು ಮಾಹಿತಿ ಈ ಲೇಖನದಲ್ಲಿ ಇದೆ ನೋಡಿ.

ಯಾವುದೇ ದೇಶದ ಉತ್ಪಾದನಾ ಕ್ಷಮತೆಯು ಆಯಾ ದೇಶದಲ್ಲಿ ಇರುವಂತಹ ಸರಕುಗಳು ಮತ್ತು ಸೇವೆಗಳು ಎಷ್ಟು ಇವೆ ಎನ್ನುವುದರ ಮೇಲೆ ಆ ದೇಶ ನೋಟುಗಳನ್ನು ಮುದ್ರಣ ಮಾಡಬೇಕು. ಆಯಾ ದೇಶಗಳ ನೋಟ್ ಮುದ್ರಣ ಮಾಡಲು ಇರುವ ಸೂತ್ರ ಇದಾಗಿದೆ. ಇದನ್ನು ಸ್ವಲ್ಪ ಸರಳವಾಗಿ ಹೇಳುವುದಾದರೆ , ಇಡೀ ವಿಶ್ವವನ್ನೇ ಒಂದು ಮಾರುಕಟ್ಟೆ ಎಂದು ನಾವು ತಿಳಿದರೆ ಸೀಮಿತ ಹಂತದಲ್ಲಿ ವಸ್ತುಗಳನ್ನು ನಾವು ಹಣ ಕೊಟ್ಟು ಕೊಂಡುಕೊಳ್ಳಬೇಕು. ಒಂದುವೇಳೆ ನಾವು ಹಣವನ್ನು ಹೆಚ್ಚು ಮಾಡಿದ್ದಲ್ಲಿ ವಸ್ತುವಿನ ಉತ್ಪಾದನೆಯಲ್ಲಿ ಎಂದಿಗೂ ವೃದ್ಧಿ ಆಗಲು ಸಾಧ್ಯವಿಲ್ಲ. ಹೆಚ್ಚೆಚ್ಚು ನೋಟುಗಳನ್ನು ಮುದ್ರಣ ಮಾಡಿದರೆ ನೋಟುಗಳು ಹೆಚ್ಚು ಆಗುತ್ತಿತ್ತೆ ಹೊರತು ಯಾವ ವಸ್ತುಗಳೂ ಸಹ ಲಭ್ಯವಂತೂ ಆಗುತ್ತಿರಲಿಲ್ಲ. ಉತ್ಪಾದನೆ ಮಾಡುವವರೇ ಯಾರೂ ಇರುವುದಿಲ್ಲ ಏಕೆಂದರೆ ಎಲ್ಲರ ಬಳಿಯೂ ಹಣ ಇರುತ್ತದೆ ಯಾರೂ ಆಗ ಕೆಲಸ ಮಾಡುವುದೇ ಇಲ್ಲ. ಇನ್ನೊಂದು ಉದಾಹರಣೆ ಎಂದರೆ ಸರ್ಕಾರ ಎಷ್ಟು ನೋಟುಗಳನ್ನು ಮುದ್ರಿಸುತ್ತದೆಯೋ ವಸ್ತುಗಳ ಮೌಲ್ಯ ಕೂಡಾ ಅಷ್ಟೇ ಹೆಚ್ಚುತ್ತದೆ. ಇದನ್ನು ನಾವು ಅಪಮೌಲ್ಯ ಎನ್ನುತ್ತೇವೆ.

ಜಗತ್ತಿನ ಎರಡು ರಾಷ್ಟ್ರಗಳು ಇಂತಹ ಪ್ರಯತ್ನವನ್ನು ಮಾಡಿ ನಷ್ಟ ಅನುಭವಿಸಿದವು. ಅದರಲ್ಲಿ ಮೊದಲ ದೇಶ ಜರ್ಮನಿ. ಜರ್ಮನಿ ಮೊದಲ ಮಹಾ ಯುದ್ದದ ಬಳಿಕ ಜರ್ಮನಿಯ ಅರ್ಥ ವ್ಯವಸ್ಥೆ ಪಾತಾಳಕ್ಕೆ ಕುಸಿದಿತ್ತು. ಯುದ್ಧದ ಸಂದರ್ಭದಲ್ಲಿ ಜರ್ಮನಿ ಬೇರೆ ಬೇರೆ ರಾಷ್ಟ್ರಗಳಿಂದ ಸಾಲ ಪಡೆದಿತ್ತು. ಮುಂದೆ ಜರ್ಮನಿ ಸಾಕಷ್ಟು ನೋಟುಗಳನ್ನು ಮುದ್ರಣ ಮಾಡುತ್ತದೆ ಇದರಿಂದಾಗಿ ಅಲ್ಲಿ ಹಣದ ಅಪಮೌಲ್ಯ ಉಂಟಾಗುತ್ತದೆ. ಇನ್ನು ಈ ಪ್ರಯತ್ನ ಮಾಡಿದ ಎರಡನೇ ರಾಷ್ಟ್ರ ಜಿಂಬಾಬ್ವೆ. ಜರ್ಮನಿ ಮಾಡಿದ ತಪ್ಪನ್ನೇ ಜಿಂಬಾಬ್ವೆ ಕೂಡಾ ಮಾಡಿತ್ತು. ಇಲ್ಲಿಯೂ ಕೂಡಾ ಬೆಲೆ ಏರಿಕೆಯ ಬಿಸಿ ತಟ್ಟಿತು. ಎಷ್ಟರ ಮಟ್ಟಿಗೆ ಅಂದರೆ ಅಲ್ಲಿನ ಜನರು ಒಂದು ಮೊಟ್ಟೆಯನ್ನು ಕೊಂಡುಕೊಳ್ಳಬೇಕು ಅಂದರೂ ಸಹ ಮೂಟೆಯಷ್ಟು ಹಣವನ್ನು ಸುರಿಯಬೇಕಿತ್ತು. ನಮ್ಮಲ್ಲಿರುವ ಸರಕು ಸೇವೆಗಳಿಗಿಂತ ಹೆಚ್ಚಾಗಿ ನೋಟುಗಳನ್ನು ಮುದ್ರಣ ಮಾಡಿದರೆ ಏನಾಗಬಹುದು ಎನ್ನುವ ಒಂದು ಅಂದಾಜು ಬಂದಿರಬಹುದು. ಬೇಕಾದಷ್ಟು ಹಣವನ್ನು ಮುದ್ರಣ ಮಾಡಿದ್ದೆ ಆದಲ್ಲಿ ಅದಕ್ಕೆ ಯಾವುದೇ ಬೆಲೆಯೂ ಇರುವುದೇ ಇಲ್ಲ. ಪ್ರತೀ ದೇಶಕ್ಕೂ ಎಷ್ಟು ಹಣ ಬೇಕಾಗಬಹುದು ಎನ್ನುವ ನಿರ್ಧಾರ ಅನ್ನು ಆಯಾ ದೇಶಗಳ ಕೇಂದ್ರ ಬ್ಯಾಂಕುಗಳು ಮಾಡುತ್ತವೆ. ನಮ್ಮ ದೇಶದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ನಿರ್ಧಾರವನ್ನು ಮಾಡುತ್ತದೆ. ಎಷ್ಟು ಪ್ರಮಾಣದಲ್ಲಿ ನೋಟು ಮುದ್ರಣ ಮಾಡಬೇಕು ಎನ್ನುವುದನ್ನು RBI ನಿರ್ಧಾರ ಮಾಡುತ್ತದೆ.

ಇನ್ನು ನೋಟು ಮುದ್ರಣ ಮಾಡುವುದು ಹೇಗೆ? ಮುದ್ರಣಕ್ಕೆ ಬಳಸುವ ಪೇಪರ್ ಯಾವುದು? ನಮ್ಮ ದೇಶದಲ್ಲಿ ನೋಟುಗಳ ಮುದ್ರಣ ಎಲ್ಲಿ ಆಗುತ್ತದೆ ಅಂತ ನೋಡುವುದಾದರೆ ಜಗತ್ತಿನ ನಾಲ್ಕು ಪ್ರಮುಖ ದೇಶಗಳಾದ ಅಮೆರಿಕ , ಫ್ರಾನ್ಸ್ , ಸ್ವೀಡನ್ ಹಾಗೂ ಯುಸೆಂತಲ್ ಇಲ್ಲಿ ತಯಾರಾಗುತ್ತದೆ. ಅಲ್ಲಿ ನೋಟು ಮಾಡುವ ಪೇಪರ್ ಗಳನ್ನ ತಯಾರಿಸಲಾಗುತ್ತದೆ. ನಮ್ಮ ದೇಶದಲ್ಲಿ ನೋಟುಗಳನ್ನು ಮುದ್ರಣ ಮಾಡುವ ಮಶೀನ್ ಗಳು ಮಧ್ಯಪ್ರದೇಶ, ಮೈಸೂರು ಹಾಗೂ ನಾಸಿಕ್ ನಲ್ಲಿ ಹಣ ಮುದ್ರಣ ಮಾಡುವ ಮಶೀನ್ ಗಳು ಇವೆ. ಮೈಸೂರಿನಲ್ಲಿ ಈಗಿನ ಎರಡುಸಾವಿರ ರೂಪಾಯಿ ನೋಟಿನ ಮುದ್ರಣ ಮಾಡಲಾಗುತ್ತದೆ.

Leave a Comment

error: Content is protected !!