ಶಿವಣ್ಣ ಅಪ್ಪಿ ಮುದ್ದಾಡುತ್ತಿರುವ ಈ ಮಕ್ಕಳು ಯಾರದ್ದು ಗೊತ್ತಾ? ಕೊನೆಗೂ ಮೂಡಿತು ನಗುವಿನ ಸಂಭ್ರಮ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿಧನದ ನಂತರ ಅವರ ಕುಟುಂಬದವರು ಚೇತರಿಸಿಕೊಳ್ಳಲು ಸಮಯ ತೆಗೆದುಕೊಂಡರು. ಶಿವರಾಜ್ ಕುಮಾರ್ ಅವರು ಅಪ್ಪು ಅವರ ಸಮಾಜ ಮುಖಿ ಕೆಲಸಗಳ ಜವಾಬ್ದಾರಿಯನ್ನು ವಹಿಸಿಕೊಂಡರು. ಇದೀಗ ಅವರ ಮಡಿಲಲ್ಲಿ ಇಬ್ಬರು ಮಕ್ಕಳು ಇರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಹಾಗಾದರೆ ಅವರು ಯಾರ ಮಕ್ಕಳು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಎಂಬ ದೊಡ್ಮನೆ ನಂದಾದೀಪ ಹೃದಯಾಘಾತದ ಸಮಸ್ಯೆಯಿಂದಾಗಿ ಅಕ್ಟೋಬರ್ 29 ನೆ ತಾರೀಖಿನಂದು ನಮ್ಮೆಲ್ಲರಿಂದ ಅಗಲಿದರು ಆಗ ಕರ್ನಾಟಕಕ್ಕೆ ಕರ್ನಾಟಕವೆ ಸ್ತಬ್ಧವಾಗಿತ್ತು. ಫಿಟ್ ಎಂಡ್ ಫೈನ್ ಆಗಿರುತ್ತಿದ್ದಂತಹ ವ್ಯಕ್ತಿ ಧಿಡೀರ್ ಎಂದು ಇಹಲೋಕ ತ್ಯಜಿಸಿದರೆ ಯಾರಿಗೆ ತಾನೆ ಸಹಿಸಿಕೊಳ್ಳಲು ಸಾಧ್ಯವಾಗುತ್ತದೆ ನಂಬಲು ಸಾಧ್ಯವಾಗಲಿಲ್ಲ. ಪುನೀತ್ ರಾಜಕುಮಾರ್ ಅವರ ಅಂತಿಮ ದರ್ಶನ ಪಡೆದುಕೊಳ್ಳಲು ವಿದೇಶದಿಂದಲೂ ಅಭಿಮಾನಿಗಳು ಓಡೋಡಿ ಬಂದರು.

ಅಷ್ಟರಮಟ್ಟಿಗೆ ಎಲ್ಲರಲ್ಲೂ ಅಗಾದ ನೋವನ್ನು ಮೂಡಿಸಿದಂತ ಅಪ್ಪು ಸಾವು ಅವರ ಕುಟುಂಬಕ್ಕೆ ಎಷ್ಟರಮಟ್ಟಿಗೆ ದುಃಖವನ್ನುಂಟು ಮಾಡಿರಬಹುದು ಒಮ್ಮೆ ಯೋಚನೆ ಮಾಡಿದರೆ ಕಷ್ಟವಾಗುತ್ತದೆ. ಹೀಗೆ ಬರೋಬ್ಬರಿ ಮೂರು ತಿಂಗಳುಗಳಕಾಲ ನೋವಿನ ಛಾಯೆ ಒಳಗೆ ಮುಳುಗಿದ್ದಂತಹ ದೊಡ್ಡಮನೆ ಅನಂತರ ಹಂತಹಂತವಾಗಿ ಅದರಿಂದ ಹೊರಬರುತ್ತಾ ಕೆಲಸಗಳಲ್ಲಿ ಮತ್ತೆ ತೊಡಗಿಸಿಕೊಳ್ಳುತ್ತಿದ್ದಾರೆ.

ಹೌದು ಅಪ್ಪು ಹೋದ ಮೇಲೆ ತನ್ನ ಇಡಿ ಕುಟುಂಬದ ಜವಾಬ್ದಾರಿಯೊಂದಿಗೆ ಸಾಮಾಜಿಕ ಸೇವೆಗಳ ಹೊರೆಯನ್ನು ತಮ್ಮ ಮೇಲೆ ಹೊತ್ತಿರುವಂತಹ ಡಾಕ್ಟರ್ ಶಿವರಾಜಕುಮಾರ್ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಬರುವ ಮೂಲಕ ತಮ್ಮನ ಅಗಲಿಕೆಯ ನೋವನ್ನು ಮರೆಯುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಿರುವಾಗ ಕಳೆದ ಕೆಲವು ದಿನಗಳ ಹಿಂದಷ್ಟೆ ಡಾಕ್ಟರ್ ಶಿವರಾಜಕುಮಾರ್ ಅವರು ಮುದ್ದಾದ ಮಕ್ಕಳನ್ನು ಮುದ್ದಾಡುತ್ತಿರುವ ಫೋಟೊ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದರು. ಅಭಿಮಾನಿಗಳು ಅಷ್ಟಕ್ಕೂ ಈ ಮಕ್ಕಳು ಯಾರದಿರಬಹುದೆಂದು ತಲೆಗೆ ಹುಳ ಬಿಟ್ಟುಕೊಂಡರು. ಈ ಫೋಟೊ ಬಾರಿ ವೈರಲ್ ಆಗುತ್ತಿದ್ದ ಹಾಗೆ ಸಾಕಷ್ಟು ಜನರು ಇದು ಶಿವರಾಜ್ ಕುಮಾರ್ ಅವರ ಮೊದಲ ಮಗಳಾದ ನಿರುಪಮಾ ಅವರ ಮಕ್ಕಳಿರಬೇಕು ಎಂದು ಊಹಿಸಿದರು. ಆದರೆ ಈ ಮಕ್ಕಳು ಶಿವರಾಜ್ ಕುಮಾರ್ ಅವರ ಸಂಬಂಧಿಕರದ್ದು.

ಕಳೆದ ಕೆಲವು ದಿನಗಳ ಹಿಂದಷ್ಟೆ ಶಿವರಾಜಕುಮಾರ್ ಅವರ ಸಂಬಂಧಿಕರ ಮಕ್ಕಳ ನಾಮಕರಣ ಕಾರ್ಯಕ್ರಮಕ್ಕೆ ಹೋಗಿ ಮಕ್ಕಳೊಂದಿಗೆ ಮಕ್ಕಳಾಗಿರುವಂತಹ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು. ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರಿಗೆ ಮಕ್ಕಳೆಂದರೆ ಬಹಳ ಪ್ರೀತಿ ಕೆಲವು ತಿಂಗಳುಗಳ ಹಿಂದೆಯೂ ಕೂಡ‌ ಶಿವರಾಜ್ ಕುಮಾರ್ ಹಾಗೂ ಗೀತಾ ಅವರು ಅವರ ಸಂಬಂಧಿಕರ ಮಗುವನ್ನು ನೋಡಲು ಆಸ್ಪತ್ರೆಗೆ ಹೋಗಿದ್ದರು ಆ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು. ಶಿವರಾಜ್ ಕುಮಾರ್ ಅವರ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ತಿಳಿಸಿ.

Leave A Reply

Your email address will not be published.

error: Content is protected !!