ಕನ್ನಡದ ಯಾವೆಲ್ಲ ಸ್ಟಾರ್ ನಟರು ತಲೆಗೆ ಹೇರ್ ಫಿಕ್ಸಿಂಗ್ ಮಾಡಿಸಿಕೊಂಡಿದ್ದಾರೆ ಗೊತ್ತಾ? ಇಲ್ಲಿದೆ ನೋಡಿ

ಒಬ್ಬ ಪರ್ಫೆಕ್ಟ್ ನಟನಿಗೆ ಯಾವತ್ತೂ ವ್ಯಾಲ್ಯೂ ಕಡಿಮೆ ಆಗುವುದಿಲ್ಲ. ಹಾಗೇ ಆ ನಟ ಕೂಡ ಫಿಟ್ನೆಸ್ ಹಾಗೂ ಬಾಡಿವ್ಯಾಲ್ಯೂವನ್ನ ಅಷ್ಟೇ ಪರಿಪೂರ್ಣವಾಗಿ ಪಾಲಿಸಬೇಕು. ಹಾಗೇ ಕೆಲವು ಪ್ರಸಿದ್ಧ ನಟರು ತಮ್ಮ ಯಂಗ್ ಏಜ್ ನಲ್ಲಿ ಸಮೃದ್ಧ ತಲೆ ಕೂದಲನ್ನು ಹೊಂದಿದ್ದು ನಂತರದ ದಿನಗಳಲ್ಲಿ ಬೋಳು ತಲೆಯನ್ನ ಹೊಂದಿದ್ದಾರೆ. ಪಬ್ಲಿಕ್ ಫಿಗರ್ ಆದ ಕಾರಣ ಅವರು ತಮ್ಮ ತಲೆಗೆ ಹೇರ್ ಫಿಕ್ಸಿಂಗ್ ಮತ್ತು ಕೆಲವೊಮ್ಮೆ ವಿಗ್ ಧರಿಸುತ್ತಾರೆ. ಈ ಲೇಖನದಲ್ಲಿ ಯಾವೆಲ್ಲ ಸ್ಯಾಂಡಲ್ ವುಡ್ ಸ್ಟಾರ್ ನಟರು ಬೋಳು ತಲೆಯನ್ನ ಹೊಂದಿದ್ದು ಹೇರ್ ಫಿಕ್ಸಿಂಗ್ ಅಥವಾ ವಿಗ್ ಧರಿಸುತ್ತಾರೆ ಎಂಬುದನ್ನ ನೋಡೋಣ.

ರಮೇಶ್ ಅರವಿಂದ್ ಇವರು ಫ್ಯಾಮಿಲಿ ಓರಿಯಂಟ್ ಮತ್ತು ರೊಮ್ಯಾಂಟಿಕ್ ಸಿನೆಮಾಗಳ ಮೂಲಕ ಪ್ರಸಿದ್ಧರಾಗಿರುವ ಇವರು ತಮ್ಮ ಅದ್ಭುತ ನಟನೆಯಿಂದ ಎಲ್ಲಾ ವರ್ಗದ ಜನರಿಗೆ ಅಚ್ಚುಮೆಚ್ಚು. ಇವರು ತಮ್ಮ 57ನೇ ವಯಸ್ಸಿನಲ್ಲೂ ಕೂಡಾ ತುಂಬಾ ಯಂಗ್ ಆಗಿ ಕಾಣುವ ರಮೇಶ್ ಅರವಿಂದ್ ಅವರು ತುಂಬಾನೇ ಎನರ್ಜಿ ಇಂದ ಸಿನೆಮಾ ಇಂಡಸ್ಟ್ರಿ ಅಲ್ಲಿ ಕೆಲಸ ಮಾಡುತ್ತಾರೆ. ಸಿನೆಮಾಗಳಲ್ಲಿ ತುಂಬಾನೇ ಯಂಗ್ ಆಗಿ ಕಾಣಿಸಿಕೊಳ್ಳುವ ಇವರು ರಿಯಲ್ ಲೈಪ್ನಲ್ಲಿ ಬೋಳು ತಲೆಯನ್ನ ಹೊಂದಿದ್ದಾರೆ. 90ರ ದಶಕದಲ್ಲಿ ಜಾರಿಗೆ ಬಂದ ಅವರ ಸಿನೆಮಾಗಳಲ್ಲಿ ಗಮನಿಸಿದರೆ ಅವರ ಬೊಳುತಲೆಯನ್ನ ಕಾಣಬಹುದು.

ಆ ನಂತರ ಇವರು ಹೇರ್ ಫಿಕ್ಸಿಂಗ್ ಮಾಡಿಸಿಕೊಂಡಿದ್ದು ಈಗಲೂ ಯಂಗ್ ಆಗಿ ಕಾಣಿಸಿಕೊಳ್ಳುತ್ತಾರೆ. ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಇವರು ಕನ್ನಡ ಚಿತ್ರರಂಗಕ್ಕೆ ಹೊಸ ಮೆರುಗನ್ನು ನೀಡಿದ್ದಾರೆ. ಇವರ ಒಂದೊಂದು ಸಿನೆಮಾಗಳು ವಿಭಿನ್ನ ಶೈಲಿಯಲ್ಲಿ ಮೂಡಿ ಬಂದಿದೆ. ಇವರು ತಮ್ಮ ಸಿನೆಮಾಗಳಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಾರೆ. ಇವರು ಸಹ ಬೋಳು ತಲೆಯನ್ನ ಹೊಂದಿದ್ದಾರೆ. ಸಿನೆಮಾ ಶೂಟಿಂಗ್ ವೇಳೆಯಲ್ಲಿ ವಿಗ್ ಧರಿಸುವ ರವಿಚಂದ್ರನ್ ಅವರು ಪಬ್ಲಿಕ್ ಸ್ಥಳಗಳಲ್ಲಿ ಕ್ಯಾಪ್ ಧರಿಸುತ್ತಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನ ಅಭಿಮಾನಿಗಳು ಡಿ ಬಾಸ್ ಎಂದೇ ಕರೆಯುತ್ತಾರೆ.

ಇಂಡಿಯನ್ ಸಿನೆಮಾ ಇಂಡಸ್ಟ್ರಿ ಅಲ್ಲಿ ಅತಿ ಹೆಚ್ಚು ಫ್ಯಾನ್ ಫಾಲೋವರ್ ಹೊಂದಿರುವ ನಟ. ಇವರು ತಮ್ಮ ಮೊದ ಮೊದಲ ಸಿನೆಮಾಗಳಲ್ಲಿ ತಲೆ ತುಂಬಾ ಕೂದಲನ್ನು ಹೊಂದಿದ್ದು ಸುಂದರವಾಗಿ ಕಾಣುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವರ ತಲೆ ಕೂದಲು ಉದುರಿ ಮುಂಭಾಗ ಬೋಳು ಆಗಿದ್ದು ಕ್ರಾಂತಿ ಸಿನಿಮಾಕ್ಕಾಗಿ ತಲೆಯ ಮುಂಭಾಗಕ್ಕೆ ಹೇರ್ ಫಿಕ್ಸಿಂಗ್ ಮಾಡಿಸಿಕೊಂಡಿದ್ದಾರೆ. ಹೀಗೆ ನಟ ಸುನೀಲ್ ರಾವ್, ಕಾಮಿಡಿ ಕಿಂಗ್ ಶರಣ್, ನಟ ಅಭಿಜಿತ್ ಹಾಗೇ ದಕ್ಷಿಣ ಭಾರತದ ಸ್ಟಾರ್ ನಟ ತಲೈವಾ ರಜನಿಕಾಂತ್ ಅವರು ಸಹ ಆರ್ಟಿಫಿಷಿಯಲ್ ಹೇರ್ ಸ್ಟೈಲ್ ಹೊಂದಿದ್ದಾರೆ. ಇವರ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ವೀಕ್ಷಿಸಿ. Video credit for jaguar Rocky

Leave A Reply

Your email address will not be published.

error: Content is protected !!