5 ಕೋಟಿ ಗೆದ್ದ ಮೇಲೆ ನೆಮ್ಮದಿ ಕಳೆದುಕೊಂಡೆ ಎಂದ ಸುಶೀಲ್ ಕುಮಾರ್

ಜಗತ್ತಿನಲ್ಲಿ ಯಾವ ಶಕ್ತಿಗೂ ಬೇಗ ಮನುಷ್ಯನ ಮನಸ್ಸನ್ನು ಬದಲಾಯಿಸುವ ಶಕ್ತಿ ಇದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಹಣಕ್ಕೆ ಆ ಶಕ್ತಿ ಇದೆ. ಹಣವನ್ನು ಕಂಡರೆ ಹೆಣವೂ ಬಾಯಿ ಬಿಡುತ್ತದೆ ಎನ್ನುವಂತೆ ಹಣ ಎಂತಹ ಗಟ್ಟಿ ಮನುಷ್ಯರನ್ನು ಬದಲಾಯಿಸಿಬಿಡುವ ಶಕ್ತಿ ಹೊಂದಿದೆ. ಜೊತೆಗೆ ಮದ್ಯಪಾನ ಧೂಮಪಾನದಂತಹ ಕೆಟ್ಟ ಚಟಗಳನ್ನು ಕಲಿಸಿಬಿಡುತ್ತದೆ. ಇಲ್ಲಿ ಒಬ್ಬ ಸಾಮಾನ್ಯ ಯುವಕ 5 ಕೋಟಿ ಗೆದ್ದ ಮೇಲೆ ಅವರ ಜೀವನ ಬದಲಾದ ರೀತಿ ಹೇಗೆ ಎಂದು ಹೇಳಿದ್ದಾರೆ. ಅವರ ಹೆಸರು ಸುಶೀಲ್ ಕುಮಾರ್. ಕೊನ್ ಬನೆಗಾ ಕರೊಡ್ ಪತಿ ಎಂಬ ಶೋ ನಲ್ಲಿ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಿ 5 ಕೋಟಿ ಗೆದ್ದ ಮೊದಲ ವ್ಯಕ್ತಿ. ಮದ್ಯಪಾನ ಹಾಗೂ ಧೂಮಪಾನ ಎಂದರೆ ಅಲ್ಲಗಳೆಯುತ್ತಿದ್ದ ಇವರು ವ್ಯಸನಿಯಾದ ಕಥೆ. 5 ಕೋಟಿಯಿಂದ ಜೀವನ ಸಮೃದ್ಧವಾಗುವ ಬದಲು ನೆಮ್ಮದಿ ಕಳೆದುಕೊಂಡೆ ಎಂದಿದ್ದಾರೆ.

ಅವರು ಮಾಡುತ್ತಿದ್ದ ವ್ಯವಹಾರಕ್ಕೆ ಸಂಭಂದಿಸಿದಂತೆ ಕೆಲವು ವಿದ್ಯಾರ್ಥಿಗಳನ್ನು ಭೇಟುಯಾಗುತ್ತಿದ್ದರು. ಅದರಲ್ಲಿ ಕೆಲವರು ಐಐಎಂಸಿನಲ್ಲಿ ಓದುವವರಾದರೆ, ಕೆಲವರು ಜಮಿಯಾ ಮಿಲಿಯಾದಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದರು. ಇನ್ನೂ ಅವರ ಸೀನಿಯರ್ಸ್ ಜೆ.ಎನ್.ಯೂನಲ್ಲಿ ಓದುತ್ತಿದ್ದರು. ಅವರಿಂದ ಕೆಲವು ರಂಗಭೂಮಿ ಕಲಾವಿದರ ಪರಿಚಯವಾಗಿತ್ತು. ಅವರೆಲ್ಲ ಎಕ್ಸ್ ಪರ್ಟ್ ಇರೋ ವಿಚಾರಗಳನ್ನ ಮಾತಾಡ್ತಾ ಇರ್ತಿದ್ರು ಆ ಬಗೆಗೆ ಹೆಚ್ಚಿನ ಮಾಹಿತಿ ಇರದ ಕಾರಣ ಅದು ಅರ್ಥವಾಗುತ್ತಿರಲ್ಲಿಲ್ಲ. ಅವರ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತಿದ್ದರು ಇದರಿಂದಲೆ ಧೂಮಪಾನ ಹಾಗೂ ಮದ್ಯಪಾನದಂತದ ಚಟಕ್ಕೆ ಅಡಿಕ್ಟ್ ಆಗಿದ್ದರು. ಒಂದು ವೇಳೆ ದೆಹಲಿಯಲ್ಲಿ ಏಳು ದಿನ ಉಳಿದುಕೊಂಡರೆ ಆ ಏಳು ದಿನಗಳಲ್ಲಿ ಏಳು ಗುಂಪುಗಳನ್ನು ಬೇಟಿಯಾಗುತ್ತಿದ್ದರು. ದಿನವೊಂದಕ್ಕೆ ಒಂದು ಪ್ಯಾಕ್ ಸಿಗರೇಟ್ ಸೇದುತ್ತಿದ್ದರು. ವ್ಯಸನಿಗಳು ವ್ಯಸನವನ್ನು ಬಿಟ್ಟ ಹೊರತು ಉದ್ದಾರವಾದ ದಾಖಲೆಗಳಿಲ್ಲ. ಹಾಗೆಯೆ ಕೂತು ತಿಂದವರು ಶ್ರೀಮಂತರಾಗಿಯೆ ಉಳಿದ ಉದಾಹರಣೆಗಳು ಇಲ್ಲ. ಆದರೆ ಇವರು ಕೂತು ಹಣ ಖಾಲಿ ಮಾಡದೆ ಸಿನಿಮಾ ಮಾಡುವ ಹಠದಲ್ಲಿ ಎಲ್ಲವನ್ನು ಕಳೆದುಕೊಂಡರು.

ಸೀನಿಮಾ ನೋಡುವ ಭರದಲ್ಲಿ ಸಾಂಸಾರಿಕ ಜೀವನ ಹಾಳಾಗುತ್ತಿರುವುದನ್ನು ಗಮನಿಸಲೆ ಇಲ್ಲ. ಪ್ಯಾಸ ಎನ್ನುವ ಸಿನಿಮಾವನ್ನು ತುಂಬಾ ನೋಡುತ್ತಿದ್ದರು. ಇದರಿಂದ ಹೆಂಡತಿ ಕಿರುಚಾಡಿದ್ದು ಉಂಟು.. ಅದಕ್ಕಾಗಿ ಇವರಿಗೆ ಬೇಸರವೂ ಇತ್ತು ಯಾಕೆಂದರೆ ಇವರು ಮಾತನಾಡದೆ ತಿಂಗಳುಗಳು ಸರಿದಿತ್ತು. ಒಂದು ದಿನ ರಸ್ತೆಯಲ್ಲಿ ಬರುವಾಗ ಪತ್ರಕರ್ತರೊಬ್ಬರು ಇವರನ್ನು ಪ್ರಶ್ನಿಸುತ್ತಾರೆ. ಆ ಪ್ರಶ್ನೆಯಿಂದ ಕಿರಿಕಿರಿಗೊಂಡ ಇವರು ಕಠಿಣವಾಗಿ ಉತ್ತರಿಸಿಬಿಟ್ಟಿದ್ದರು. ಎರಡು ಹಸುವನ್ನು ಸಾಕಿ ಅದರ ಹಾಲಿನ ಮಾರಾಟ ಮಾಡಿ ಜೀವನ ನಡೆಸುತ್ತಿದ್ದೆನೆ ಎಂದಿದ್ದರು. ಇದರಿಂದ ಚಿತ್ರಣವೇ ಬದಲಾಗಿಹೊಯ್ತು. ಕಾರ್ಯಕ್ರಮದ ಕರೆಗಳು ಕಡಿಮೆ ಆದವು. ಇದರಿಂದ ಬಿಡುವಾದ ಇವರು ಮತ್ತೆ ಸಿನಿಮಾ ನೋಡೊಕೆ ಶುರುಮಾಡಿ ನಿರ್ಮಾಪಕರಾಗುವ ಕನಸು ಕಂಡರು. ಹಣ ಬಂದಾಗಿನಿಂದಲೂ ಇವರ ಹಾಗೂ ಇವರ ಪತ್ನಿಯ ನಡುವೆ ಒಂದು ಕಂದಕವೇ ಉಂಟಾಗಿತ್ತು. ಸಂಸಾರ ಉಳಿಸಿಕೊಳ್ಳುವ ದೊಡ್ಡ ಚಾಲೆಂಜ್ ಎದುರಾಗಿತ್ತು. ಬಾಣಂತನಕ್ಕೆಂದು ತವರಿಗೆ ಹೋದ ಪತ್ನಿ ವಿಚ್ಛೇದನ ಕೇಳಿದ್ದಳು.

ಸಿನಿಮಾ ನಿರ್ದೇಶಕನಾಗಿ ಹೆಸರು ಗಳಿಸುವ ಹಂಬಲದಿಂದ ನಿರ್ಮಾಪಕರೊಬ್ಬರ ಬಳಿ ಮಾತನಾಡಿದ್ದರು. ಅವರ ಕೆಲವು ತಾಂತ್ರಿಕ ಪ್ರಶ್ನೆಗಳಿಗೆ ಉತ್ತರಿಸಲು ಆಗದ ಇವರಿಗೆ ಕೆಲದಿನ ಟೆಲಿವಿಷನ್ ಹೌಸ್ ನಲ್ಲಿ ಕೆಲಸ ಮಾಡುವಂತೆ ತಿಳಿಸಿ ಒಂದು ಪ್ರೊಡಕ್ಷನ್ಸ್‌ ಹೌಸ್ ನಲ್ಲಿ ಕೆಲಸವನ್ನು ಕೊಡಿಸಿದರು. ಅಲ್ಲಿ ಕಥೆ, ಚಿತ್ರಕಥೆ, ಡೈಲಾಗ್ ಕಾಪಿ, ಪ್ರಾಪರ್ಟಿ ಎಲ್ಲದರ ಬಗ್ಗೆ ತಿಳಿದುಕೊಂಡರು ಆದರೆ ಆ ಕೆಲಸವೂ ಅವರಿಗೆ ಬೇಜಾರು ತರಿಸಿತ್ತು. ಎಲ್ಲ ಕೆಲಸಗಳನ್ನು ಮಾಡಲು ಹೋದರೆ ಕೈ ಸುಟ್ಟುಕೊಳ್ಳುತ್ತೆವೆ ವಿನಹ ಯಾವ ಕೆಲಸವೂ ಸರಿಯಾಗಿ ಆಗುವುದಿಲ್ಲ. ನಿರ್ದೇಶಕರಾಗುವ ವಿಚಾರದಲ್ಲಿ ಮುಂಬೈಗೆ ಹೋಗಿದ್ದ ಇವರು ಕೊನೆಗೆ ಸ್ನೇಹಿತನ ಮನೆಗೆ ಮರಳಿ ಬಂದರು. ಪ್ರತಿ ದಿನ ಸಾಕಷ್ಟು ಪುಸ್ತಕ ಓದುವುದನ್ನು ರೂಢಿಸಿಕೊಂಡರು. ಸುಮಾರು ಆರು ತಿಂಗಳವರೆಗೂ ಇದು ಮುಂದುವರೆದಿತ್ತು ಒಂದು ರೀತಿಯ ಚೈನ್ ಸ್ಮೋಕರ್ ಆಗಿದ್ದರು. ದಿನ ಹೋದಂತೆ ಜ್ಞಾನೋದಯವಾಗಿತ್ತು. ಇವರು ಅಂದುಕೊಂಡಂತೆ ಬದುಕುತ್ತಿಲ್ಲ ಎಂಬ ಸತ್ಯದ ಅರಿವಾಗಿತ್ತು. ಎಲ್ಲಾ ಬಿಟ್ಟು ಊರಿಗೆ ಬಂದು ಹೊಸದಾಗಿ ತಯಾರಿಮಾಡಿಕೊಂಡು ಶಿಕ್ಷಕನಾದರು. ವ್ಯಸನಗಳನ್ನು ಬಿಟ್ಟು ಪರಿಸರ ಕಾಳಜಿ ತೋರುತ್ತಾ ಬದುಕುತ್ತಿದ್ದಾರೆ. ಸದ್ಯಕ್ಕೆ ಅವರ ಉಳಿವಿಗಾಗಿ ಅವರು ದುಡಿಯುತ್ತಿದ್ದಾರಂತೆ. ಹಣ ದುಡಿಯುವುದು ತಪ್ಪಲ್ಲ. ಆದರೆ ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಜಾಣ್ಮೆ ಇರಬೇಕು. ಮನುಷ್ಯನಿಗೆ ದಿಡೀರ್ ಆಗಿ ಹಣ ಬಂದರೆ ಆಗುವ ಅನಾಹುತಗಳಿಗೆ ಸುಶೀಲ್ ಕುಮಾರ್ ಒಬ್ಬ ಉತ್ತಮ ಉದಾಹರಣೆಯಾಗಿದ್ದಾರೆ.

Leave a Comment

error: Content is protected !!